ದಿನದ ಸುದ್ದಿ

ರಾತ್ರಿಯೆಲ್ಲ ನಿದ್ದೆಗೆಟ್ಟು ಕಳ್ಳನನ್ನು ಹಿಡಿದ ನಂಜನಗೂಡು ಜನತೆ

Published

on

ಕಳ್ಳನನ್ನು ಹಿಡಿಯಲು ರಾತ್ರಿಯೆಲ್ಲ ಕಾದು ಕುಳಿತಿದ್ದ ಶ್ರೀರಂಪುರ ನಿವಾಸಿಗಳು

ನಂಜನಗೂಡಿನ ಶ್ರೀರಾಂಪುರ ಹಾಗೂ ಶಂಕರಪುರದಲ್ಲಿ ಕಳೆದ ಹತ್ತು ದಿನಗಳಿಂದ ಕಳ್ಳತನ ನಡೆಯುತ್ತಲೇ ಇರುವ ಕಾರಣ ಇಲ್ಲಿನ ಜನ ಆತಂಕಕ್ಕೀಡಾಗಿದ್ದರು. ಅದರಲ್ಲೂ ಮಹಿಳೆಯರು ಕಂಗಾಲಾಗಿ ಜೀವ ಕೈನಲ್ಲಿ ಹಿಡಿದು ಮಲಗುತ್ತಿದ್ದರು.

ಪೊಲೀಸರಿಗೆ ದೂರು ನೀಡಿದರೂ ಯಾವುದೇ ಪ್ರಯೋಜನವಾಗಲಿಲ್ಲ. ಸೋಮವಾರ ರಾತ್ರಿ ಈ ಏರಿಯಾದ ಬಹುತೇಕ ಮಂದಿ ನಿದ್ದೆ ಮಾಡದೆ ಕಾದು ಕುಳಿತಿದ್ದರು. ಅಂತೂ ಒಬ್ಬ ಕಳ್ಳನನ್ನು ಹಿಡಿಯುವಲ್ಲಿ ನಿವಾಸಿಗಳು ಯಶ್ವಿಯಾಗಿದ್ದಾರೆ.

ಸದ್ಯ ಕಳ್ಳ, ಪೊಲೀಸರ ವಶದಲ್ಲಿದ್ದಾನೆ. ಅನುಮಾನಾಸ್ಪದವಾಗಿ ಕಂಡುಬರುವ ವ್ಯಕ್ತಿಗಳ ಮೇಲೆ ಕಣ್ಣಿಡುವಂತೆ ಪೊಲೀಸರು ಎಚ್ಚರಿಕೆ ನೀಡಿದ್ದಾರೆ.

Leave a Reply

Your email address will not be published. Required fields are marked *

Trending

Exit mobile version