ದಿನದ ಸುದ್ದಿ
ಥಾಮಸ್ ಕಪ್; ಮೊದಲ ಬಾರಿಗೆ ಫೈನಲ್ ಪ್ರವೇಶಿಸಿ, ಇತಿಹಾಸ ಸೃಷ್ಟಿಸಿದ ಭಾರತ ಬ್ಯಾಡ್ಮಿಂಟನ್ ತಂಡ
ಸುದ್ದಿದಿನ ಡೆಸ್ಕ್ : ಭಾರತ ಪುರುಷರ ಬ್ಯಾಡ್ಮಿಂಟನ್ ತಂಡ ಬ್ಯಾಂಕಾಕ್‌ನಲ್ಲಿ ನಡೆಯುತ್ತಿರುವ ಥಾಮಸ್ ಕಪ್ ಟೂರ್ನಿಯಲ್ಲಿ ಮೊಟ್ಟ ಮೊದಲ ಬಾರಿಗೆ ಫೈನಲ್ ಪ್ರವೇಶಿಸುವ ಮೂಲಕ ಇತಿಹಾಸ ನಿರ್ಮಿಸಿದೆ.
ಕಳೆದ ರಾತ್ರಿ ನಡೆದ ಸೆಮಿಫೈನಲ್ ಪಂದ್ಯದಲ್ಲಿ ಡೆನ್ಮಾರ್ಕ್ ತಂಡವನ್ನು 3-2ರಲ್ಲಿ ಸೋಲಿಸಿದ ಭಾರತ ತಂಡ ಇದೇ ಮೊದಲ ಬಾರಿ ಫೈನಲ್ ತಲುಪಿತು. ಸೆಮಿಫೈನಲ್‌ನ ಐದನೇ ಹಾಗೂ ನಿರ್ಣಾಯಕ ಪಂದ್ಯದಲ್ಲಿ ಡೆನ್ಮಾರ್ಕ್ ನ ರಸ್ಮಸ್ ಗೆಮ್ಕೆ ವಿರುದ್ಧ 2-21,21-9, 21-12೨ಗೇಮ್ ಗಳಿಂದ ಎಚ್. ಎಸ್. ಪ್ರಣೋಯ್ ವೀರೋಚಿತ ಜಯ ಗಳಿಸಿ ಭಾರತ ತಂಡವನ್ನು ಪ್ರಶಸ್ತಿ ಸುತ್ತಿಗೆ ಕೊಂಡೊಯ್ದರು.
ಭಾರತ, ಚಿನ್ನದ ಪದಕಕ್ಕಾಗಿ ಭಾನುವಾರ ಇಂಡೊನೇಷ್ಯಾ ತಂಡದ ಸವಾಲು ಎದುರಿಸಲಿದೆ. ಇದಕ್ಕೂ ಮುನ್ನ ಭಾರತದ ಸ್ಟಾರ್ ಆಟಗಾರ ಕಿಡಂಬಿ ಶ್ರೀಕಾಂತ್ 20-18, 12-21,21-15 ಗೇಮ್ ಗಳಿಂದ ಆಂಡೆರ್ಸ್ ಆಂಡರ್ಸನ್ ವಿರುದ್ಧ ಜಯ ಗಳಿಸಿ ಭಾರತಕ್ಕೆ ಮುನ್ನಡೆ ತಂದುಕೊಟ್ಟರು.
ನಂತರ ಸಾತ್ವಿಕ್ ಸಾಯಿರಾಜ್ ರಾಂಕಿ ರೆಡ್ಡಿ ಮತ್ತು ಚಿರಾಗ್ ಶೆಟ್ಟಿ ಜೋಡಿ 21-18, 21-23, 22-20 ಗೇಮ್ ಗಳ ಅಂತರದಿಂದ ಕಿಮ್ ಆಸ್ಟ್ರಪ್ ಮತ್ತು ಮಥಾಯಿಸ್ ಕ್ರಿಸ್ಟಿಯಾನ್ಸೆನ್ ವಿರುದ್ಧ ರೋಚಕ ಜಯ ಗಳಿಸಿ ತಂಡದ ಮುನ್ನಡೆಯನ್ನು 2-0ಗೆ ವಿಸ್ತರಿಸಿದರು. ಆದರೆ, ಒಲಿಂಪಿಕ್ ಚಾಂಪಿಯನ್ ಅಕ್ಸೆಲ್ಸೆನ್ 21-13, 21-13 ನೇರ ಗೇಮ್ ಗಳಿಂದ ಭಾರತದ ಲಕ್ಷ್ಯ ಸೇನ್ ಅವರನ್ನು ಸೋಲಿಸಿ ಡೆನ್ಮಾರ್ಕ್ ತಂಡದ ಹಿನ್ನೆಡೆಯನ್ನು 1-2ಕ್ಕೆ ತಗ್ಗಿಸಿದರು.
ನಾಲ್ಕನೇ ಪಂದ್ಯದಲ್ಲಿ, ಆಂಡೆರ್ಸ್ ಸ್ಕಾರುಪ್ ರಸ್ಮಮ್ಸನ್ ಮತ್ತು ಫ್ರೆಡೆರಿಕ್ ಸೊಗಾರ್ಡ್ ಜೋಡಿ ಭಾರತದ ವಿಷ್ಣುವರ್ಧನ್ ಪಂಜಾಲಾ ಮತ್ತು ಕೃಷ್ಣ ಗರಗ್ ಜೋಡಿ ವಿರುದ್ಧ 21-14, 21-13ಗೇಮ್ ಗಳ ಅಂತರದಿಂದ ಗೆದ್ದು ತಂಡದ ಹೋರಾಟವನ್ನು 2-2ರಲ್ಲಿ ಸಮಬಲಗೊಳಿಸಿದರು.
🇮🇳 3-2 🇲🇾
Into the semis and how! 🤩
Indian men's team knock out Malaysia to make the semi-finals of the Thomas and Uber Cup after 4️⃣3️⃣ years! 😲
📸: @badmintonphoto#TUC2022 | #ThomasUberCups | #Bangkok2022 | @BAI_Media | @bwfmedia pic.twitter.com/Bwx75fjDVI
— Olympic Khel (@OlympicKhel) May 12, 2022
ಸುದ್ದಿದಿನ.ಕಾಂ|ವಾಟ್ಸಾಪ್|9980346243