ದಿನದ ಸುದ್ದಿ

Threat News Alert: ಮೈಸೂರು ಆಯ್ತು ಇದೀಗ ಬೆಂಗಳೂರು, ಬಾಗಲಕೋಟೆಯಲ್ಲು ಇ-ಮೇಲ್ ಬಾಂಬ್ ಬೆದರಿಕೆ ಶುರು ಆಯ್ತು

Published

on

Threat News Alert: ಮೈಸೂರು ಆಯ್ತು ಇದೀಗ ಬೆಂಗಳೂರು, ಬಾಗಲಕೋಟೆಯಲ್ಲು ಇ-ಮೇಲ್ ಬಾಂಬ್ ಬೆದರಿಕೆ ಶುರು ಆಯ್ತು

 

ಬಾಗಲಕೋಟೆ: ಮೈಸೂರಿನ ಹಳೆಕೋರ್ಟ್‌ಗೆ ಬಾಂಬ್ ಬೆದರಿಕೆ ಇ-ಮೇಲ್ ಸಂದೇಶ ಬಂದು ಕೆಲ ಗಂಟೆಗಳಾಗಿಲ್ಲ, ಆಗಲೇ ಬಾಗಲಕೋಟೆ ಜಿಲ್ಲಾ ನ್ಯಾಯಾಲಯ ಕಛೇರಿಗೆ ಬೆದರಿಕೆಯ ಇ-ಮೇಲ್ ಸಂದೇಶ ಬಂದಿದೆ.

ಬಾಂಬ್ ಬೆದರಿಕೆ ಸಂದೇಶ ಬರುತ್ತಿದ್ದಾಗೆ ಕೋರ್ಟ್‌ ಒಳಗಿದ್ದ ನ್ಯಾಯವಾದಿಗಳು, ಕಕ್ಷಿದಾರರು ಹಾಗೂ ಸಿಬ್ಬಂದಿಗಳು ತಕ್ಷಣ ಹೊರಗಡೆ ಓಡಿ ಬಂದಿದ್ದಾರೆ. ಜಿಲ್ಲಾ ನ್ಯಾಯಾಲಯದ ಹೊರ ಆವರಣದಲ್ಲಿ ಜನ ಸೇರುತ್ತಿದ್ದ ಮಾಹಿತಿ ತಿಳಿದ ತಕ್ಷಣ ಸ್ಥಳಕ್ಕೆ ಬಾಂಬ್ ನಿಷ್ಕ್ರಿಯ ದಳ ಪೊಲೀಸರು ಭೇಟಿ ನೀಡಿ ಪರಿಶೀಲಿನೆ ನಡೆಸುತ್ತಿದ್ದಾರೆ.

ಬೆಂಗಳೂರಿನ ಪಾಸ್‌ಪೋರ್ಟ್ ಕಚೇರಿಗೂ ಬೆದರಿಕೆ:

ಮೈಸೂರು, ಬಾಗಲಕೋಟೆ ಬೆನ್ನಲ್ಲೇ ಬೆಂಗಳೂರಿನಲ್ಲಿ ಪಾಸ್ಪೋರ್ಟ್ ಕಚೇರಿಗೆ ಬಾಂಬ್ ಬೆದರಿಕೆ ಇ-ಮೇಲ್ ಸಂದೇಶ ಬಂದಿದ್ದು, ಬೆಂಗಳೂರಿನ ಲಾಲ್ ಬಾಗ್ ರಸ್ತೆಯಲ್ಲಿರುವ ಪಾಸ್ಪೋರ್ಟ್ ಕಚೇರಿಗೆ ಇಮೇಲ್ ಮೂಲಕ ಬಾಂಬ್ ಬೆದರಿಕೆ ಸಂದೇಶ ಬಂದಿದೆ. ಇಮೇಲ್ ಮಾಡುವ ಮೂಲಕ ಕಿಡಿಗೇಡಿಗಳು ಬೆದರಿಕೆ ಹಾಕಿದ್ದಾರೆ. ವಿಲ್ಸನ್ ಗಾರ್ಡನ್, ಎಸ್ ಆರ್ ನಗರ ಪೋಲೀಸರು ಸ್ಥಳಕ್ಕೆ ಆಗಮಿಸಿ ಪರಿಶೀಲಿಸುತ್ತಿದ್ದು ಬಾಂಬ್ ನಿಷ್ಕ್ರಿಯ ದಳ ಹಾಗೂ ಶ್ವಾನದಳ ಸಿಬ್ಬಂದಿ ತಪಾಸಣೆ ನಡೆಸುತ್ತಿದ್ದಾರೆ. ಇನ್ನೂ ಇ-ಮೇಲ್ ಮೂಲಕ ಬೆದರಿಕೆ ನೀಡುತ್ತಿರುವ ಕಿಡಿಗೇಡಿಗಳ ಬಗ್ಗೆ ಮಾಹಿತಿ ಹೊರಬಿದ್ದಿಲ್ಲ.

Trending

Exit mobile version