ದಿನದ ಸುದ್ದಿ
ದಾವಣಗೆರೆ | ತಿಂಗಳ ಅಂಗಳ ಬಳಗದ ಮಾರ್ಚ್ ಮಾಹೆಯ ಮಿಲನ
ಸುದ್ದಿದಿನ,ದಾವಣಗೆರೆ : ತಿಂಗಳ ಅಂಗಳ ಸಾಹಿತ್ಯ ಮತ್ತು ಸಾಂಸ್ಕೃತಿಕ ಬಳಗದ ವತಿಯಿಂದ ಕವಿ ಹೆಚ್. ಜೆ. ಪ್ರಭು ಗೊಲ್ಲರಹಳ್ಳಿ ಅವರ ಆತಿಥ್ಯದಲ್ಲಿ ದಾವಣಗೆರೆ ಸೋಮೇಶ್ವರ ವಿದ್ಯಾಲಯದ ಎದುರಿನ ಕಲ್ಪತರು ಕಾನ್ವೆಂಟ್ ಬಳಿ ಇರುವ ಅವರ ನಿವಾಸದಲ್ಲಿ ಮಾರ್ಚ್ 13 ರ ಶನಿವಾರ ಸಂಜೆ 4 ಗಂಟೆಗೆ ಮಾರ್ಚ್ ಮಾಹೆಯ ಮಿಲನ ಆಯೋಜಿಸಲಾಗಿದೆ.
ಕಾರ್ಯಕ್ರಮದಲ್ಲಿ ಲೇಖಕ ಗಂಗಾಧರ ಬಿ ಎಲ್ ನಿಟ್ಟೂರ್ ಅವರಿಂದ ಕವಿ ಪ್ರಭು ಗೊಲ್ಲರಹಳ್ಳಿಯವರ ಕವನಗಳ ಒಳನೋಟದ ಅವಲೋಕನ, ಕವಿ ಮಹಾಂತೇಶ್ ಬಿ ನಿಟ್ಟೂರು ಅವರಿಂದ ಮುಕ್ತಕಗಳ ಪರಿಚಯ, ಕವಿ ಸಂತೇಬೆನ್ನೂರು ಫೈಜ್ನಟ್ರಾಜ್ ರಿಂದ ಗಜಲ್ ಪರಿಚಯ ನಡೆಯಲಿದೆ. ಹಿರಿಯ ಕವಿ ಡಾ. ಆನಂದ್ ಋಗ್ವೇದಿಯವರು ಕಾರ್ಯಕ್ರಮ ಕುರಿತು ಹಿತನುಡಿಯಾಡಲಿದ್ದಾರೆ.
ಇದನ್ನೂ ಓದಿ | ಖಾಸಗಿ ವಾಹನಗಳ ನಿರ್ವಾಹಕ-ಕ್ಲೀನರ್ ನೋಂದಣಿಗೆ ಅರ್ಜಿ ಆಹ್ವಾನ
ಆಹ್ವಾನಿತ ಕವಿ ಮಿತ್ರರಾದ ರಾಜೇಂದ್ರಪ್ರಸಾದ್ ನೀಲಗುಂದ, ಪಾಪುಗುರು, ಎನ್. ಎಸ್. ಸತೀಶ್, ತಾರೇಶ್ ಕೆ.ಪಿ ಅಣಬೇರು, ವೀರೇಶ್ ಬಿ. ಜಿ. ಎಂ, ಮಲ್ಲಮ್ಮ ನಾಗರಾಜ್, ಸಂಧ್ಯಾ ಸುರೇಶ್, ಸುಭಾಷಿಣಿ ಮಂಜುನಾಥ್, ಸತ್ಯಭಾಮ ಮಂಜುನಾಥ್, ಅನ್ನಪೂರ್ಣ ಪಾಟೀಲ್, ಶೈಲಜಾ ಪಾಟೀಲ್ ಅವರು ಸ್ವರಚಿತ ಕವನ ವಾಚಿಸುವರು.
ಸಮಾಜ ಸೇವಕಿ ಶ್ರೀಮತಿ ಮಹಾದೇವಮ್ಮ ಹಾಗೂ ಶಿಕ್ಷಣ ಇಲಾಖೆಯ ಎ. ಜಿ. ಸೈಫುಲ್ಲಾ ಅವರಿಂದ ಗೀತ ಗಾಯನ, ಕು. ರಿಷಿ ಪ್ರಭು ಅವರಿಂದ ನೃತ್ಯ ಪ್ರಸ್ತುತಿ ನಡೆಯಲಿದೆ.
ಸುದ್ದಿದಿನ.ಕಾಂ|ವಾಟ್ಸಾಪ್|9980346243