ಲೈಫ್ ಸ್ಟೈಲ್

ತುರ್ತು ಪರಿಸ್ಥಿತಿಯಲ್ಲಿ ಸಹಾಯದ ಹಸ್ತ ಚಾಚಿದರೆ‌ ಜೀವ ಉಳಿಸಿದ ಪುಣ್ಯ ನಿಮ್ಮದು !

Published

on

ನಾವು ದಿನನಿತ್ಯದ ಜೀವನದಲ್ಲಿ ಒಂದಲ್ಲ ಒಂದು ತುರ್ತುಸ್ಥಿತಿಯನ್ನು ನೋಡಿರುತ್ತೇವೆ. ಇದ್ದಕ್ಕಿದ್ದಂತೆ ನಿಶ್ಯಕ್ತಿಯಿಂದ ಕುಸಿದು ಬೀಳುವುದು, ರಸ್ತೆ ಅಪಘಾತಗಳು, ಬೆಂಕಿ ಅವಘಡಗಳು, ಎದೆನೋವು, ಉಸಿರಾಟದ ತೊಂದರೆ, ಕೈ ಕಾಲುಗಳು ಸೆಳೆತಕ್ಕೊಳಗಾಗುವುದು ಅಥವಾ ಸ್ವಾಧೀನ ಕಳೆದುಕೊಳ್ಳುವುದು, ಹಾವು ಕಡಿತ ಹೀಗೆ ಅನೇಕ ಘಟನೆಗಳ್ನು ನಮ್ಮಕಣ್ಣೆದುರಿಗೇ ನಡೆಯುತ್ತಿದ್ದರೂ ಕೆಲವೊಮ್ಮೆ ಏನು ಮಾಡಬೇಕೆಂದು ತೋಚದೇ ಹಾಗೇ ನಿಂತುಬಿಡುವುದು ಸಾಮಾನ್ಯ. ಆದರೆ ಆ ತುರ್ತು ಸ್ಥಿತಿಯಲ್ಲಿ ಸಮಯ ಮೀರಿ ಜೀವಕ್ಕೇ ಅಪಾಯ ಉಂಟಾಗಬಹುದು. ಸಮಯ ತನ್ನ ಗುರಿ ಸಾಧಿಸಿಕೊಳ್ಳುವ ಮುನ್ನವೇ ನಾವು ಸ್ವಲ್ಪಜಾಣತನದಿಂದ ವರ್ತಿಸಿದರೆ ಆ ವ್ಯಕ್ತಿಯ ಜೀವಿತಾವಧಿಗೆ ಮರುಹುಟ್ಟು ನೀಡಿದಂತಾಗುತ್ತದೆ.

ತುರ್ತುಸ್ಥಿತಿಯ ನಿರ್ವಹಣೆಯಲ್ಲಿ ಕ್ರಮವಾಗಿ ವಾಯು ನಾಳ, ಉಸಿರಾಟ ಹಾಗೂ ರಕ್ತ ಸಂಚಲನೆ (A= AIRWAY, B=BREATHING, C=CIRCULATION) ಎಂಬ ಮೂರು ಅಂಶಗಳು ಮುಖ್ಯವಾಗುತ್ತವೆ. ಯಾವುದೇ ತುರ್ತುಸ್ಥಿತಿಯಲ್ಲಿ ಮೊಟ್ಟಮೊದಲು ಈ ಮೂರು ಅಂಶಗಳ ಪರೀಕ್ಷೆಯನ್ನು ಮೊದಲು ಮಾಡಬೇಕಾಗುತ್ತದೆ. ಬದಲಾಗಿ ಕೆಲವೊಂದು ಸಂದರ್ಭಗಳಲ್ಲಿ  (ಉದಾ:ವಿಪರೀತ ರಕ್ತಸ್ರಾವ) ರಕ್ತ ಸಂಚಲನೆ, ಉಸಿರಾಟ ನಂತರ ವಾಯುನಾಳ ಎಂಬ ಕ್ರಮವಾಗಿ ಪರೀಕ್ಷಿಸಬೇಕಾಗುತ್ತದೆ. ನಂತರವಷ್ಟೇ ಆ ನಿರ್ಧಿಷ್ಟ ಸಂದರ್ಭಾನುಸಾರ ಚಿಕಿತ್ಸೆ ನೀಡಬೇಕಾಗುತ್ತದೆ. ಈಗ ನಿರ್ಧಿಷ್ಟ ಸಂದರ್ಭಗಳಲ್ಲಿ ಏನು ಮಾಡಬೇಕೆಂದು ತಿಳಿದುಕೊಳ್ಳೋಣ.

ನಿಶ್ಯಕ್ತಿಯಿಂದ ಕುಸಿದು ಬೀಳುವುದು

  1. ಈ ತರಹದ ಘಟನೆಗಳು ಸಾಮಾನ್ಯವಾಗಿ ರಕ್ತದಲ್ಲಿ ಕಾರ್ಬೊಹೈಡ್ರೇಟ್ ಅಂಶ ಅಥವಾ ರಕ್ತದೊತ್ತಡ ಕಡಿಮೆಯಾದರೆ ಉಂಟಾಗುತ್ತವೆ. ಈ ರೀತಿ ಸಂಭವಿಸಿದಲ್ಲಿ ವ್ಯಕ್ತಿಯ ಕೈಯಲ್ಲಿ ನಾಡಿಮಿಡಿತವನ್ನು ಪರೀಕ್ಷಿಸಬೇಕು.
  2. ತಕ್ಷಣವೇ ವ್ಯಕ್ತಿಯನ್ನು ಮಲಗಿಸಿ ಎರಡೂ ಕಾಲುಗಳನ್ನು ದೇಹಭಾಗಕ್ಕಿಂತ ಮೇಲ್ಮಟ್ಟಕ್ಕೆ ಇರಿಸಿಕೊಳ್ಳಬೇಕು
    ಸಕ್ಕರೆ ಅಥವಾ ಅಲ್ಲೇ ಹತ್ತಿರದಲ್ಲಿ ಯಾರಾದರೂ ಬಳಿ ಚಾಕೋಲೇಟ್‍ ಇದ್ದಲ್ಲಿತಿನ್ನಿಸಬೇಕು
    ವ್ಯಕ್ತಿಗೆ ಸಾಕೆನಿಸುವಷ್ಟು ನೀರುಕುಡಿಸಬೇಕು

ಉಸಿರಾಟದ ತೊಂದರೆ

  1. ಉಸಿರಾಟದ ತೊಂದರೆ ಹೊಗೆ ಅಥವಾ ಧೂಳಿನಿಂದ ಸಂಭವಿಸಿದ್ದರೆ ವ್ಯಕ್ತಿಯನ್ನುತಕ್ಷಣ ಆ ಸ್ಥಳದಿಂದ ಶುಭ್ರ ಗಾಳಿಯೆಡೆಗೆ ಕರೆದೊಯ್ಯಬೇಕು.
  2. ಅಸ್ತಮಾಎಂಬಿತ್ಯಾದಿ ಅಲರ್ಜಿಯಿಂದ ಸಂಭವಿಸಿದ್ದರೆ ವ್ಯಕ್ತಿಯನ್ನು ಮಲಗಿಸಿ ದೇಹದ ಮೇಲ್ಭಾಗವನ್ನುಎತ್ತರದ ಭಂಗಿಯಲ್ಲಿಅಂದರೆ 45ಡಿಗ್ರಿ ಕೋನದಲ್ಲಿ ಮಲಗಿಸಬೇಕು
  3. ಉಸಿರಾಟ ದೀರ್ಘವಾಗಿ ತೆಗೆದುಕೊಳ್ಳಲು ಸೂಚಿಸಬೇಕು

ಎದೆನೋವು

  1. ವ್ಯಕ್ತಿಯನ್ನು 45ಡಿಗ್ರಿ ಕೋನದಲ್ಲಿ ಮಲಗಿಸಬೇಕು
  2. ವ್ಯಕ್ತಿಯ ನಾಡಿಮಿಡಿತವನ್ನು ಪರೀಕ್ಷಿಸಬೇಕು.
  3. ದೀರ್ಘ ಉಸಿರಾಟವನ್ನು ಪ್ರೋತ್ಸಾಹಿಸಬೇಕು
  4. ನೀರು ಕುಡಿಸಬೇಕು (ಅನ್ನನಾಳದಲ್ಲಿ ಯಾವುದೇ ವಸ್ತು ಸಿಲುಕಿಕೊಂಡರೆ ನೀರು ಕುಡಿಸುವಂತಿಲ್ಲ)
  5. ಇದ್ಯಾವುದಕ್ಕೂ ಎದೆನೋವು ಕಡಿಮೆಯಾಗದಿದ್ದರೆ ತಕ್ಷಣವೇ ವೈದ್ಯರ ಸಮಾಲೋಚನೆ ಪಡೆಯಬೇಕು

ರಸ್ತೆ ಅಪಘಾತಗಳು

  1. ಮೊದಲು ವ್ಯಕ್ತಿಯನ್ನು ಮಲಗಿಸಿ ರಕ್ತಸ್ರಾವದ ಜಾಗಕ್ಕೆ ಒಂದು ಬಟ್ಟೆಯನ್ನು ಬಿಗಿಯಾಗಿಕಟ್ಟಬೇಕು
  2. ಕುತ್ತಿಗೆಗೆ ಪೆಟ್ಟಾದಲ್ಲಿ ವ್ಯಕ್ತಿಯನ್ನು ಸಮತಟ್ಟಾಗಿ ಮಲಗಿಸಿ, ವ್ಯಕ್ತಿಯು ತಲೆಯನ್ನು ಅತ್ತಿತ್ತತಿರುಗದಂತೆ ಹಿಡಿದುಕೊಳ್ಳಬೇಕು
  3. ತಲೆಗೆ ಪೆಟ್ಟುಉಂಟಾದಲ್ಲಿ ವ್ಯಕ್ತಿಯನ್ನು ಕೂರಿಸಿ ಯಾವುದೇ ತಡವಿಲ್ಲದೇ ಹತ್ತಿರದ ಆಸ್ಪತ್ರೆಗೆ ಕರೆದೊಯ್ಯಬೇಕು
  4. ಕೈಕಾಲುಗಳು ಪೆಟ್ಟಾದಲ್ಲಿದೇಹದ ಭಾರವನ್ನು ಊರದೇ ಅದೇ ಜಾಗಕ್ಕೆ ಮರದತುಂಡು ಅಥವಾ ರಟ್ಟನ್ನು ಕಟ್ಟಿಕೊಂಡು ಹಾಗೆಯೇ ಆಸ್ಪತ್ರೆಗೆ ಕರೆದೊಯ್ಯಬೇಕು.

ಬೆಂಕಿ ಅವಘಡಗಳು

  1. ಮೊದಲು ಬೆಂಕಿಯನ್ನು ನಂದಿಸಿ ವ್ಯಕ್ತಿಯನ್ನು ಆ ಸ್ಥಳದಿಂದ ಪಾರು ಮಾಡಬೇಕು
  2. ವಾಯುನಾಳ ಅಥವಾ ಉಸಿರಾಟದ ತೊಂದರೆಯಿದ್ದಲ್ಲಿ ವ್ಯಕ್ತಿಯನ್ನು ಶುಭ್ರಗಾಳಿಯಲ್ಲಿ ಕರೆದೊಯ್ಯಬೇಕು
  3. ಬೆಂಕಿ ಅವಘಡಗಳ ಸಂದರ್ಭದಲ್ಲಿ ಆ ವ್ಯಕ್ತಿಯ ಉಳಿವು ದೇಹದ ಎಷ್ಟು ಶೇಕಡಾ ಭಾಗ ಸುಟ್ಟುಹೋಗಿದೆ ಎಂಬುದನ್ನು ಅವಲಂಬಿಸಿರುತ್ತದೆ

ಕೈಕಾಲುಗಳು ಸೆಳೆತಕ್ಕೊಳಗಾಗುವುದು

  1. ವ್ಯಕ್ತಿಯನ್ನು ಎಡ ಮಗ್ಗುಲಲ್ಲಿ ಮಲಗಿಸಬೇಕು
  2. ವ್ಯಕ್ತಿಯ ಬಾಯಲ್ಲಿ ಕರ್ಚಿಫ್ ಅಥವಾ ಬಟ್ಟೆಯನ್ನು ಇಡಬೇಕು
  3. ಯಾವುದೇ ಕಾರಣಕ್ಕೂ ನೀರನ್ನು ಕುಡಿಸಬಾರದು

ಹಾವು ಕಡಿತ

  1. ಹಾವು ಕಡಿದಜಾಗಕ್ಕೆ ಏನನ್ನೂ ಹಚ್ಚಬಾರದು
  2. ಬಾಯಿಂದ ಆ ಜಾಗದ ರಕ್ತವನ್ನು ಹೊರಹಾಕಲು ಪ್ರಯತ್ನಿಸಬಾರದು
  3. ಹಾವು ಕಡಿದಜಾಗದ ಹತ್ತಿರದ ಭಾಗಕ್ಕೆ ತುಂಬಾ ಬಿಗಿಯೂ ಸಡಿಲವೂ  ಅಲ್ಲದೇ ದಾರವನ್ನು ಅಥವಾ ಕರ್ಚಿಫ್‍ನನ್ನು ಕಟ್ಟಬೇಕು
  4. ವ್ಯಕ್ತಿಗೆಯಾವುದೇ ತೊಂದರೆಗಳು ಶುರುವಾಗುವ ಮೊದಲೇ ಅವನನ್ನು ಆಸ್ಪತ್ರೆಗೆ ಕರೆದು ಹೋಗುವುದು ಒಳಿತು.

ಇದನ್ನು ಓದಿ: ರಕ್ತದಾನ-ಜೀವದಾನ

ರಕ್ತಸ್ರಾವ

  1. ರಕ್ತಸ್ರಾವವನ್ನು ನಿಲ್ಲಿಸಿ ಅಲ್ಲಿಗೊಂದು ಬಟ್ಟೆಯನ್ನು ಕಟ್ಟಬೇಕು
  2. ಮೂಗಿನಿಂದರಕ್ತ ಸೋರಿದರೆತಕ್ಷಣ ಮೂಗನ್ನುಗಟ್ಟಿಯಾಗಿ ಸ್ವಲ್ಪ ನಿಮಿಷಗಳ ಕಾಲ ಹಿಡಿದುಕೊಳ್ಳಬೇಕು
  3. ವಿಪರೀತರಕ್ತಸ್ರಾವವಾಗಿದ್ದರೆ ವ್ಯಕ್ತಿಯ ಕಾಲುಗಳನ್ನು ದೇಹದ ಭಾಗದಿಂದ ಮೇಲ್ಭಾಗದಲ್ಲಿ ಹಿಡಿದುತಕ್ಷಣಆಸ್ಪತ್ರೆಗೆಕರೆದೊಯ್ಯಬೇಕು
  4. ಯಾವುದೇ ಸಂದರ್ಭಗಳಲ್ಲಿ ವ್ಯಕ್ತಿಯ ನಾಡಿಮಿಡಿತದ ಕೊಂಚವೂ ಇಲ್ಲದೇ ಪ್ರಜ್ಞಾಹೀನ ಸ್ಥಿತಿಯಲ್ಲಿದ್ದರೆ ತಕ್ಷಣವೇ ಕಾರ್ಡಿಯೋಪಲ್ಮೊನರಿ ರಿಸಸಿಟೇಷನ್ (CPR) ಮಾಡಬೇಕಾಗುತ್ತದೆ. CPR ಅಂದರೆ ನಿಂತುಹೋಗುತ್ತಿರುವ ಹೃದಯ ಮತ್ತು ಶ್ವಾಸಕೋಶಗಳ ಕಾರ್ಯವನ್ನು ಪುನರುಜ್ಜೀವನ ಗೊಳಿಸುವುದು. ಇದರಲ್ಲಿನಾಡಿಮಿಡಿತ ಮತ್ತು ಸ್ವಾಭಾವಿಕ ಉಸಿರಾಟ ಮರುಕಳಿಸುವವರೆಗೂ 30:2 ಅನುಪಾತದಲ್ಲಿ ಕ್ರಮವಾಗಿ ಎದೆ ಒತ್ತುವುದು ಹಾಗೂ ಬಾಯಲ್ಲಿ ಗಾಳಿ ಊದುವುದು ಮಾಡಬೇಕಾಗುತ್ತದೆ. ವಾಹನ ಸಿಕ್ಕ ನಂತರ ಆಸ್ಪತ್ರೆಗೆ ಕರೆದೊಯ್ಯಲಾಗುತ್ತದೆ. CPRನ್ನು ವೈದ್ಯಕೀಯರಲ್ಲದ ವ್ಯಕ್ತಿಗಳೂ ಕೂಡ ಮಾಡಬಹುದು.

ಈ ಮೇಲಿನ ಎಲ್ಲಾ ಪ್ರಥಮ ಚಿಕಿತ್ಸೆಗಳು ಕೇವಲ ಆಯಾ ಸಂದರ್ಭಗಳಿಗಷ್ಟೇ ಸೀಮಿತವಾಗಿರುತ್ತವೆ ಮತ್ತು ಇನ್ನೂ ಹೆಚ್ಚಿನ ಚಿಕಿತ್ಸೆಗಾಗಿ ಹತ್ತಿರದ ವೈದ್ಯರನ್ನು ಭೇಟಿ ಮಾಡಬೇಕಾಗುತ್ತದೆ.

 English summary: Tips for emergency healthcare in Kannada. First aid tips in Kannada

Leave a Reply

Your email address will not be published. Required fields are marked *

Trending

Exit mobile version