ದಿನದ ಸುದ್ದಿ

ಬೌದ್ದಿಕ ಅಂಗವೈಕಲ್ಯತೆ ಹೊಂದಿರುವವರಿಗೆ ಟಿಎಲ್‍ಎಂ ಕಿಟ್ ವಿತರಣೆ

Published

on

ಸುದ್ದಿದಿನ,ದಾವಣಗೆರೆ :ನಗರದ ದೇವರಾಜ ಅರಸು ಬಡಾವಣೆಯಲ್ಲಿಯರುವ ಕಾಂಪೋಸಿಟ್ ರೀಜನಲ್ ಸೆಂಟರ್‍ನಲ್ಲಿ(ಸಿಆರ್‍ಸಿ) ಜು.17 ರಂದು ಬೆಳಿಗ್ಗೆ 11 ಗಂಟೆಗೆ ಅಡಿಪ್ಸ್ ಯೋಜನೆಯಡಿ ಬೌದ್ದಿಕ ಅಂಗವೈಕಲ್ಯತೆ ಹೊಂದಿರುವವರಿಗೆ ಟೀಚಿಂಗ್ ಲರ್ನಿಂಗ್ ಮಟೀರಿಯಲ್ಸ್ ಕಿಟ್ (ಟಿಎಲ್‍ಎಂ) ವಿತರಣೆ ಮಾಡಲಾಗುವುದು.

ಜಿಲ್ಲಾ ಪಂಚಾಯತ್ ಅಧ್ಯಕ್ಷೆ ದೀಪಾ ಜಗದೀಶ್ ಇವರು ಈ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಕೋವಿಡ್ ಹಿನ್ನೆಲೆಯಲ್ಲಿ ಸಾಂಕೇತಿಕವಾಗಿ ಮೊದಲನೇ ಹಂತದಲ್ಲಿ 7 ಜನರಿಗೆ ಟಿಎಲ್‍ಎಂ ವಿತರಣೆ ಮಾಡುವರು.

ಈ ಯೋಜನೆಯಡಿ ಒಟ್ಟು 87 ಬೌದ್ದಿಕ ಅಂಗವೈಕಲ್ಯತೆ ಹೊಂದಿರುವ ಮಕ್ಕಳಿಗೆ ಟೀಚಿಂಗ್ ಲರ್ನಿಂಗ್ ಮಟೀರಿಯಲ್‍ಗಳನ್ನು ನೀಡುವ ಗುರಿ ಹೊಂದಲಾಗಿದ್ದು ಕೋವಿಡ್ ಹಿನ್ನೆಲೆಯಲ್ಲಿ ಮೊದಲನೇ ಹಂತದಲ್ಲಿ ಜು.17 ರಂದು 7 ಜನರಿಗೆ ನೀಡಲಾಗುವುದು. ಕೋವಿಡ್ ಹಿನ್ನೆಲೆಯಲ್ಲಿ ಉಳಿದ 80 ಟಿಎಲ್‍ಎಂಗಳನ್ನು ನಂತರದಲ್ಲಿ ಸುರಕ್ಷತಾ ಕ್ರಮಗಳನ್ನು ಕೈಗೊಂಡು ದಿನಕ್ಕೆ 5 ರಿಂದ 10 ಕಿಟ್‍ಗಳನ್ನು ವಿತರಣೆ ಮಾಡಲಾಗುವುದು ಎಂದು ಪ್ರಕಟಣೆ ತಿಳಿಸಿದೆ.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Trending

Exit mobile version