ದಿನದ ಸುದ್ದಿ
ಇಂದು ವಿಶ್ವ ರೆಡ್‌ಕ್ರಾಸ್ ದಿನ : ಒಂದಷ್ಟು ಮಾಹಿತಿ
ಸುದ್ದಿದಿನ ಡೆಸ್ಕ್ : ಇಂದು ವಿಶ್ವ ರೆಡ್‌ಕ್ರಾಸ್ ದಿನ. ಜಗತ್ತಿನಾದ್ಯಂತ ರೆಡ್‌ಕ್ರಾಸ್ ಆಂದೋಲನ ಕೈಗೊಳ್ಳುವ ಉತ್ತಮ ಕಾರ್ಯವನ್ನು ಶ್ಲಾಘಿಸಲು ಪ್ರತಿ ವರ್ಷ ಈ ದಿನವನ್ನು ಆಚರಿಸಲಾಗುತ್ತದೆ.
ಅಗತ್ಯವಿರುವ ಜನರಿಗೆ ನೆರವು ಒದಗಿಸುವ ಸ್ವಯಂಸೇವಕರ ಅಭೂತಪೂರ್ವ ಕೊಡುಗೆಗಾಗಿ ಅವರಿಗೆ ಗೌರವ ಸಲ್ಲಿಸುವುದು ಈ ದಿನದ ಉದ್ದೇಶವಾಗಿದೆ. ಅಂತಾರಾಷ್ಟ್ರೀಯ ರೆಡ್ ಕ್ರಾಸ್ ಸಮಿತಿಯ ಸಂಸ್ಥಾಪಕ ಹೆನ್ರಿ ಡ್ಯೂನಾಂಟ್ ಅವರ ಜನ್ಮದಿನವನ್ನು ಸಹ ಈ ದಿನ ಸೂಚಿಸುತ್ತದೆ.
ಈ ಸಂದರ್ಭದಲ್ಲಿ, ಆರೋಗ್ಯ ಸಚಿವ ಡಾ. ಮನ್ಸುಖ್ ಮಾಂಡವಿಯಾ, ಮಾನವೀಯತೆಯ ಸೇವೆಗೆ ಕೈಜೋಡಿಸುವಂತೆ ಮತ್ತು ಜನರ ದುಃಖ ನಿವಾರಿಸಲು ಸಾಧ್ಯವಾದಷ್ಟು ನೆರವು ನೀಡುವಂತೆ ಮನವಿ ಮಾಡಿದ್ದಾರೆ.
ವಿಶ್ವವನ್ನು ಆರೋಗ್ಯಕರ ಮತ್ತು ಸಂತೋಷದಾಯಕ ಸ್ಥಳವನ್ನಾಗಿಸಲು ಸಮರ್ಪಣಾ ಭಾವದಿಂದ ಕಾರ್ಯ ನಿರ್ವಹಿಸುತ್ತಿರುವ ಜಗತ್ತಿನಾದ್ಯಂತದ ಲಕ್ಷಾಂತರ ಸ್ವಯಂಸೇವಕರ ಕೊಡುಗೆ ಗುರುತಿಸುವಂತೆ ಅವರು ಜನತೆಗೆ ಮನವಿ ಮಾಡಿದರು.
ರೆಡ್‌ಕ್ರಾಸ್ ಸಂಸ್ಥಾಪನಾ ದಿನಾಚರಣೆ ಅಂಗವಾಗಿ ದೇಶದ ಹಲವು ಭಾಗಗಳಲ್ಲಿ ಅನೇಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ. ರೆಡ್‌ಕ್ರಾಸ್ ದಿನದ ಅಂಗವಾಗಿ ಗಣ್ಯರು ಶುಭಾಶಯ ಕೋರಿದ್ದಾರೆ.
ರೆಡ್‌ಕ್ರಾಸ್ ಸಂಸ್ಥೆ ಅತ್ಯುತ್ತಮವಾಗಿ ಮಾನವೀಯತೆಯ ನೆಲಗಟ್ಟಿನ ಮೇಲೆ ಕಾರ್ಯನಿರ್ವಹಿಸುತ್ತಿದ್ದು, ಸಂಸ್ಥೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ಸಿಬ್ಬಂದಿಗೆ ರಾಷ್ಟ್ರಪತಿ ರಾಮನಾಥ್ ಕೋವಿಂದ್, ಉಪರಾಷ್ಟ್ರಪತಿ ಎಂ. ವೆಂಕಯ್ಯನಾಯ್ಡು, ಪ್ರಧಾನಮಂತ್ರಿ ನರೇಂದ್ರ ಮೋದಿ ಸೇರಿದಂತೆ ಗಣ್ಯರು ಶುಭ ಹಾರೈಸಿದ್ದಾರೆ.
ಸುದ್ದಿದಿನ.ಕಾಂ|ವಾಟ್ಸಾಪ್|9980346243