ದಿನದ ಸುದ್ದಿ
ಮದ್ದೂರು | ಕೋಲಾರ : ವಾಲ್ಮೀಕಿ ಜಯಂತಿ ಹಾಗೂ ಅದ್ದೂರಿ ಮೆರವಣಿಗೆಗೆ ಚಾಲನೆ
ಸುದ್ದಿದಿನ,ಮದ್ದೂರು : ತಾಲ್ಲೂಕು ಕಛೇರಿಯಲ್ಲಿ ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ ವತಿಯಿಂದ ವಾಲ್ಮೀಕಿ ಜಯಂತಿ ಆಚರಣೆಯನ್ನು ಸಂಭ್ರಮ ಸಡಗರದಿಂದ ಸಮಿತಿಯ ಅಧ್ಯಕ್ಷರಾದ ಪ್ರಭಾರ ತಹಶೀಲ್ದಾರ್ ಮಹೇಶ್ ರವರ ಸಮ್ಮುಖದಲ್ಲಿ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡುವ ಮೂಲಕ ಆಚರಿಸಲಾಯಿತು.
ನಂತರ ಕ್ಷೇತ್ರ ಶಿಕ್ಷಣಾಧಿಕಾರಿ ರೇಣುಕಮ್ಮ ರವರು ಮಾತನಾಡಿ ಕೆಳ ಮಟ್ಟದ ಜಾತಿಯಲ್ಲಿ ಹುಟ್ಟಿ ಬೇಟೆಯಾಡುಕೊಂಡು ಜೀವನ ನಡೆಸುತ್ತಿದ್ದ ವಾಲ್ಮೀಕಿ ಅವರಿಗೆ ಭಗವಂತನ ಅನುಗ್ರಹದಿಂದ ಸ್ವಯಂ ಪರಿವರ್ತತರಾಗಿ ನಮ್ಮ ಸಂಸ್ಕೃತಿ ಪರಂಪರೆಗೆ ಅಪೂರ್ವ ಕೊಡುಗೆ ನೀಡಿದ್ದಾರೆ. ನಮ್ಮ ಬದುಕಿನ ದಾರಿ ದೀಪವಾಗಿರುವ ಶ್ರೀ ರಾಮಾಯಣ ಗ್ರಂಥವನ್ನು ರಚಿಸಿ ಕೊಡುಗೆಯಾಗಿ ನೀಡಿರುವ ಈ ಮಹಾನ್ ವ್ಯಕ್ತಿಯ ಜನ್ಮ ದಿನದಲ್ಲಿ ಭಾಗವಹಿಸುವುದೆ ಹೆಮ್ಮೆಯ ವಿಚಾರ ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಪುರಸಭಾ ಮುಖ್ಯಾಧಿಕಾರಿ ಮಹೇಶ್, ಸರ್ಕಲ್ ಇನ್ಸ್ಪೆಕ್ಟರ್ ಮಹೇಶ್, ಸಮಾಜ ಕಲ್ಯಾಣ ಇಲಾಖೆ ಪ್ರಭಾರ ನಿರ್ದೇಶಕರು ಮಂಜುಳಾ ಹಾಗೂ ಪ್ರಗತಿಪರ ಸಂಘಟನೆಗಳು ತಾಲ್ಲೂಕು ಮಟ್ಟದ ಅಧಿಕಾರಿಗಳ ಭಾಗವಹಿಸಿದ್ದರು.
ಕೋಲಾರ | ಮಹರ್ಷಿ ವಾಲ್ಮೀಕಿ ಜಯಂತಿ ಮೆರವಣಿಗೆಗೆ ಅದ್ದೂರಿ ಚಾಲನೆ
ಜಿಲ್ಲಾ ಉಸ್ತುವಾರಿ ಸಚಿವ ಕೃಷ್ಣಭೈರೇಗೌಡ ರಿಂದ ಮೆರವಣಿಗೆ ಚಾಲನೆ ನೀಡಿದರು.ಕೋಲಾರ ನಗರದ ಕಾಲೇಜ್ ವೃತ್ತದಲ್ಲಿ ಮಹರ್ಷಿ ವಾಲ್ಮೀಕಿ ಭಾವಚಿತ್ರಗಳ
ಮೆರವಣಿಗೆಯಲ್ಲಿ ಐವತ್ತಕ್ಕೂ ಹೆಚ್ಚು ವಾಲ್ಮೀಕಿ ಭಾವಚಿತ್ರಗಳು ಹಾಗೂ ವಿವಿಧ ಜಾನಪದ ಕಲಾತಂಡಗಳು ಭಾಗಿಯಾಗಿದ್ದವು.
ವಿಧಾನಪರಿಷತ್ ಸದಸ್ಯ ನಸೀರ್ ಅಹಮದ್ , ಜಿಲ್ಲಾಧಿಕಾರಿ ಮಂಜುನಾಥ್ , ಜಿಲ್ಲಾ ಎಸ್ಪಿ ಡಾ.ರೋಹಿಣಿ ಕಟೋಜ್ ಸಫಟ್ ಸೇರಿದಂತೆ ಸಮುದಾಯ ಮುಖಂಡರುಗಳು ಭಾಗಿಯಾಗಿದ್ದರು.
ಸುದ್ದಿದಿನ.ಕಾಂ|ವಾಟ್ಸಾಪ್|9986715401