ದಿನದ ಸುದ್ದಿ

ದಾವಣಗೆಯಲ್ಲಿಂದು ನಾಲ್ವರಿಗೆ ಕೊರೋನಾ ಪಾಸಿಟಿವ್ : 75 ಆ್ಯಕ್ಟೀವ್ ಕೇಸ್ ; 18 ಮಂದಿ ಸಂಜೆ ಬಿಡುಗಡೆ..!

Published

on

ಸುದ್ದಿದಿನ,ದಾವಣಗೆರೆ: ಜಿಲ್ಲೆಯಲ್ಲಿ ವೃದ್ಧೆಯರಿಬ್ಬರು ಸೇರಿ ನಾಲ್ವರು ಮಹಿಳೆಯರಿಗೆ ಕೊರೋನಾ ಸೋಂಕು ತಗುಲಿದೆ ಎಂದು ಭಾನುವಾರ ಬಂದ ಆರೋಗ್ಯ ಇಲಾಖೆಯ ವರದಿ ಖಚಿತ ಪಡಿಸಿದೆ.

60 ವರ್ಷದ ವೃದ್ಧೆ (ಪಿ.1962), 70 ವರ್ಷದ ವೃದ್ಧೆ (ಪಿ.1992) ಈ ಇಬ್ಬರಿಗೆ ಕಂಟೈನ್‌ಮೆಂಟ್ ವಲಯದ ಸಂಪರ್ಕದಿಂದ ಸೋಂಕು ತಗಲಿದ್ದು,
ಜಾಲಿನಗರದ 48 ವರ್ಷದ ಸೋಂಕಿತ ವ್ಯಕ್ತಿಯ (ಪಿ.1251) ಸಂಪರ್ಕದಿಂದ 33 ವರ್ಷದ ಇಬ್ಬರು ಮಹಿಳೆಯರಿಗೆ (ಪಿ.1963, ಪಿ.1964) ಕೊರೊನಾ ಪಾಸಿಟಿವ್ ಬಂದಿದೆ. 18 ಮಂದಿ ಭಾನುವಾರ ಸಂಜೆ ಬಿಡುಗಡೆ ಆಗಲಿದ್ದಾರೆ.

ಕೋವಿಡ್19: 24 ಮೇ ಭಾನುವಾರ 2020 ರ ಮಾಹಿತಿ

  1. ಒಟ್ಟು ಪ್ರಕರಣಗಳು: 125
  2. ಮೃತಪಟ್ಟವರು: 04
  3. ಗುಣಮುಖರಾದವರು:28
  4. ಹೊಸ ಪ್ರಕರಣಗಳು: 04
  5. ಆ್ಯಕ್ಟೀವ್ ಕೇಸ್ : 75

ಇತರೆ ಮಾಹಿತಿ

ಜಿಲ್ಲಾವಾರು ಸೋಂಕಿತರು, ನಿಗದಿತ ಆಸ್ಪತ್ರೆಗಳಲ್ಲಿ ಪ್ರತ್ಯೇಕವಾಗಿರುವವರು, ಟೆಲಿಮೆಡಿಸಿನ್ ಸೌಲಭ್ಯದ ಮಾಹಿತಿ, ತಬ್ಲಿಘಿ ಜಮಾತ್ ನಲ್ಲಿ ಭಾಗವಹಿಸಿದವರಿಗೆ ಸೂಚನೆಗಳು, ಕೊರೊನ ನಿಗಾ ಅಪ್ಲಿಕೇಶನ್ ಹಾಗೂ ಸಹಾಯವಾಣಿ ವಿವರಗಳಿವೆ.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Trending

Exit mobile version