ದಿನದ ಸುದ್ದಿ

ಮಗು ಕೊಂದು ನದಿಯಲ್ಲಿ ತೇಲಿಬಿಟ್ಟ ಪ್ರಕರಣ : ಆರೋಪಿಗೆ ಷರತ್ತುಬದ್ಧ ಜಾಮೀನು

Published

on

ಸುದ್ದಿದಿನ,ಉಡುಪಿ: ಹೆತ್ತಮಗುವನ್ನು ನದಿಯಲ್ಲಿ ತೇಲಿಬಿಟ್ಟು, ಅಪಹರಣದ ನಾಟಕವಾಡಿದ್ದ ಮಹಿಳೆಗೆ ಉಡುಪಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಷರತ್ತು ಬದ್ಧ ಜಾಮೀನು ನೀಡಿದೆ.

ಜುಲೈ 11ರಂದು ಕುಂದಾಪುರ ಯಡಮೊಗೆ ಗ್ರಾಮದ ಕುಮ್ಟಿಬೇರು ಎನ್ನುವಲ್ಲಿ ಮೂರು ತಿಂಗಳು ಪ್ರಾಯದ ಸಾನ್ವಿಕಾಳನ್ನು ಆಕೆಯ ಹೆತ್ತಮ್ಮ ರೇಖಾ ಹೊಳೆಯ ನೀರಿನಲ್ಲಿ ತೇಲಿಬಿಟ್ಟು ಅಪಹರಣವಾಗಿದೆ ಎಂದು ಕಥೆ ಕಟ್ಟಿದ್ದಳು. ಎರಡು ದಿನದ ಬಳಿಕ ಮಗುವಿನ ಶವವು ಕುಬ್ಜಾ ನದಿಯಲ್ಲಿ ಮಗುವಿನ ಶವ ಪತ್ತೆಯಾಗಿತ್ತು.

ಪ್ರಕರಣದಲ್ಲಿ ಮಗುವಿನ ತಾಯಿಯ ವರ್ತನೆ ಮತ್ತು ಭಿನ್ನ ಭಿನ್ನ ಹೇಳಿಕೆಯ ಆಧಾರದಲ್ಲಿ ಆರೋಪಿಯಾಗಿ ಪರಿಗಣಿಸಿ, ವಿಚಾರಿಸಿದಾಗ ಸತ್ಯ ಬಾಯ್ಬಿಟ್ಟಿದ್ದಳು. ಆರೋಪಿತೆಯ ಮೇಲೆ ಐಪಿಸಿ ಸೆಕ್ಷನ್ 302, ಕೊಲೆಯತ್ನ ಪ್ರಕರಣದಡಿ 307, ಆತ್ಮಹತ್ಯೆ ಯತ್ನ ಕೇಸಿನಡಿ 309 ಸೆಕ್ಷನ್ ನಡಿ ಕೇಸ್ ದಾಖಲಿಸಲಾಗಿತ್ತು.

ಆರೋಪಿ ರೇಖಾ ಬಾಣಂತನದ ಬಳಿಕ ಸ್ತ್ರೀಯರಲ್ಲಿ ಕಾಣಿಸುವ ಮಾನಸಿಕ ರೋಗವಾದ ಪ್ಯೂಪೇರಿಯಮ್ (Puerperium) ಸಮಸ್ಯೆಯಿಂದ ಈ ಕೃತ್ಯ ಮಾಡಿದ ಆರೋಪಿ ಪರ ವಕೀಲರು ವಾದಿಸಿದ ಹಿನ್ನೆಲೆಯಲ್ಲಿ, ಉಡುಪಿಯ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ನ್ಯಾಯಾಧೀಶ ಸಿ.ಎಂ.ಜೋಷಿ ಷರತ್ತುಬದ್ಧ ಜಾಮೀನು ನೀಡಿ ಆದೇಶಿಸಿದರು.

ಕೃಪೆ : ಡೆಮಾಕ್ರಟಿಕ್ ನ್ಯೂಸ್

ಸುದ್ದಿದಿನ.ಕಾಂ|ವಾಟ್ಸಾಪ್|9980346243

Trending

Exit mobile version