ದಿನದ ಸುದ್ದಿ

ಯುವ ಕವಿ ‘ವಿಜಯ್ ನವಿಲೇಹಾಳ್’ ಅವರಿಗೆ ಉದಯೋನ್ಮುಖ ಕಾವ್ಯ ಚೇತನಾ ಪ್ರಶಸ್ತಿ ಪ್ರದಾನ

Published

on

ಸುದ್ದಿದಿನ, ಚಿತ್ರದುರ್ಗ : ನವಿಲೇಹಾಳ್ ನ ಯುವ ಕವಿ ವಿಜಯ್ ನವಿಲೇಹಾಳ್ ಅವರಿಗೆ ಸೂಲೇನಹಳ್ಳಿಯ ತನುಶ್ರೀ ಪ್ರಕಾಶನ ಸಂಸ್ಥೆಯು ಉದಯೋನ್ಮುಖ ಕಾವ್ಯ ಚೇತನಾ ಪ್ರಶಸ್ತಿಯನ್ನು ಭಾನುವಾರ ನಗರದ ರೋಟರಿ ಬಾಲಭವನದಲ್ಲಿ ಪ್ರದಾನಮಾಡಲಾಯಿತು.

ಸೂಲೇನಹಳ್ಳಿಯ ತನುಶ್ರೀ ಪ್ರಕಾಶನ ಸಂಸ್ಥೆ ವತಿಯಿಂದ ಆಯೋಜಿಸಿದ್ದ ತನುಶ್ರೀ ಪ್ರಕಾಶನ ಉಧ್ಘಾಟನೆ ಮತ್ತು ಲೋಗೋ ಲೋಕಾರ್ಪಣೆ, ರಾಜ್ಯ ಮಟ್ಟದ ಪ್ರಶಸ್ತಿ ಪ್ರದಾನ ಸಮಾರಂಭ ಹಾಗೂ ರಾಜ್ಯ ಮಟ್ಟದ ಕವಿಗೋಷ್ಠಿ, ಸ್ಥಳೀಯ ಸಾಧಕರಿಗೆ ಸನ್ಮಾನ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು.

ಕವಿಗೋಷ್ಠಿಯಲ್ಲಿ ಅಧ್ಯಕ್ಷತೆಯನ್ನು ಶ್ರೀಯುತ ಮರಿಕುಂಟೆ ತಿಪ್ಪಣ್ಣ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಅಂಜನ್ ಕುಮಾರ್ ರಾಜ್ಯಾಧ್ಯಕ್ಷರು ವಿಚಾರ ಮಂಟಪ ಸಾಹಿತ್ಯ ವೇದಿಕೆ ತುಮಕೂರು. ಷಕೀಬ್ ಎಸ್ ಕಣದ್ಮನೆ ನವಿಲೇಹಾಳ್ ಯುವ ಸಾಹಿತಿಗಳು ಮತ್ತು ಸಂಶೋಧಕರು. ರುಜುವಾನ್ ಕೆ. ಹೊಳಲ್ಕೆರೆ ಯುವ ಕವಿಗಳು ಮತ್ತು ಗಾಯಕರು. ಸುಮಾರು 40 ಕ್ಕೂ ಅಧಿಕ ಕವಿಗಳು ಭಾಗವಹಿಸಿದ್ದರು.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Trending

Exit mobile version