ದಿನದ ಸುದ್ದಿ

ಉಕ್ರೇನ್ – ರಷ್ಯ ಸಮರ | ಮಗನ ಸಾವಿಗೆ ಸರ್ಕಾರವೇ ಕಾರಣ : ಮೃತ ವಿದ್ಯಾರ್ಥಿ ನವೀನ್ ತಂದೆ

Published

on

ಮೃತ‌ ವಿದ್ಯಾರ್ಥಿ ನವೀನ್

ಸುದ್ದಿದಿನ,ಹುಬ್ಬಳ್ಳಿ: ರಾಯಭಾರಿ ಕಚೇರಿಗೆ ನಮ್ಮ ಮಗ ಪೋನ್ ಮಾಡಿದರೂ ಅಲ್ಲಿಂದ ಯಾವುದೇ ರೀತಿಯ ಸರಿಯಾದ ಪ್ರತಿಕ್ರಿಯೆ ಸಿಗಲಿಲ್ಲ. ನಮ್ಮ ಮಗನ ಸಾವಿಗೆ ಈ ಸರ್ಕಾರವೇ ಕಾರಣ ಎಂದು ವಿದ್ಯಾರ್ಥಿ ನವೀನ್ ಗ್ಯಾನಗೌಡರ್ ತಂದೆ ಶೇಖರಗೌಡ ಎಂದು ಗದ್ಗದಿಸಿದರು.

ಮಾದ್ಯಮದವರೊಂದಿಗೆ ಮಾತನಾಡಿದ ಅವರು, ನಮ್ಮ ಮಗನ ಜೊತೆಗೆ ಬೆಳಗ್ಗೆ 10 ಗಂಟೆಗೆ ಮಾತನಾಡಿದ್ದೇನೆ. ನಂತರ ಫೋನ್​ ಮಾಡಿದಾಗ ರಿಂಗ್ ಆಯಿತು, ಆದರೆ ಕರೆ ಸ್ವೀಕರಿಸಲಿಲ್ಲ. ಇದಾದ ಕೆಲವೇ ಗಂಟೆಯಲ್ಲಿ ನಮ್ಮ ಮಗನ ಸಾವಿನ ಸುದ್ದಿಯನ್ನ ರಾಯಭಾರಿ ಕಚೇರಿ ತಿಳಿಸಿತು. ನಮ್ಮ ಮಗನ ಸಾವಿಗೆ ಈ ಸರ್ಕಾರವೇ ಕಾರಣ. ನಮ್ಮ ಮಗ ರಾಯಭಾರಿ ಕಚೇರಿಗೆ ಪೋನ್ ಮಾಡಿದ್ರೆ ಅಲ್ಲಿಂದ ಸರಿಯಾದ ಪ್ರತಿಕ್ರಿಯೆ ಸಿಗಲಿಲ್ಲ.

ಅಲ್ಲಿಂದ ಪ್ರತಿಕ್ರಿಯೆ ಬಂದಿದ್ದರೆ ನಮ್ಮ ಸಾಯುತ್ತಿರಲಿಲ್ಲ. ನಾವು ನಮ್ಮ ಮಗನನ್ನ ಕಳೆದುಕೊಂಡಿದ್ದೇವೆ. ನಮಗಾದ ಸ್ಥಿತಿ ಬೇರೆ ಪೋಷಕರಿಗೆ ಆಗೋದು ಬೇಡ‌. ಆ‌ ಮಕ್ಕಳನ್ನಾದ್ರೂ ಸರ್ಕಾರ ಸುರಕ್ಷಿತವಾಗಿ ಕರೆತರಲಿ ಎಂದರು.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Trending

Exit mobile version