ದಿನದ ಸುದ್ದಿ
ಸಮ್ಮಿಶ್ರ ಸರ್ಕಾರದ ಅಸಮಾಧಾನಕ್ಕೆ ಸ್ಫೋಟಕ ತಿರುವು
ಸುದ್ದಿದಿನ ಡೆಸ್ಕ್: ಸಮ್ಮಿಶ್ರ ಸರ್ಕಾರದ ಅಸಮಾಧಾನಕ್ಕೆ ಸ್ಫೋಟಕ ತಿರುವು ಸಿಕ್ಕಿದೆ. ಈ ಬಾರಿ ಖುದ್ದು ಉಪ ಮುಖ್ಯಮಂತ್ರಿ ಪರಮೇಶ್ವರ್ ಹಾಗೂ ಸಿಎಂ ಕುಮಾರಸ್ವಾಮಿ ನಡುವೆ ತೀವ್ರ ಅಸಮಾಧಾನ ವ್ಯಕ್ತವಾಗಿದೆ ಎಂಬ ವಿಚಾರ ದೃಶ್ಯ ಮಾಧ್ಯಮದಲ್ಲಿ ಚರ್ಚಿತವಾಗುತ್ತಿದೆ.
ತಮ್ಮ ಇಲಾಖೆಗೆ IAS ಅಧಿಕಾರಿ ಒಬ್ಬರನ್ನು ನೇಮಕ ಮಾಡಿ ಎಂದು ಉಪ ಮುಖ್ಯಮಂತ್ರಿ ಪರಮೇಶ್ವರ್ ಸಿಎಂ ಕುಮಾರಸ್ವಾಮಿ ಅವರ ಬಳಿ ಮನವಿ ಮಾಡಿಕೊಂಡಿದ್ದರು. ಆದರೆ ಇದಕ್ಕೆ ಸಿಎಂ ಕುಮಾರಸ್ವಾಮಿ ಸೊಪ್ಪು ಹಾಕಲಿಲ್ಲ. ಆ ಹುದ್ದೆಯಲ್ಲಿದ್ದ ಭ್ರಷ್ಟ ಅಧಿಕಾರಿಯನ್ನೇ ಸಿಎಂ ಮುಂದುವರಿಸಿದ್ದು ಪರಂ ಅಸಮಾಧಾನಕ್ಕೆ ತೀವ್ರ ಕಾರಣವಾಗಿದೆ.
ತಾವು ಹೇಳಿದ ಅಧಿಕಾರಿಗಳ ವರ್ಗಾವಣೆ ಮಾಡದ ಸಿಎಂ ಧೋರಣೆಗೆ ಸಿಟ್ಟುಮಾಡಿಕೊಂಡ ಪರಂ,
ಕುಮಾರಸ್ವಾಮಿ ಜತೆ ಇನ್ಮುಂದೆ ನಾನು ಕೂರಲ್ಲ ಎಂದು ಆಪ್ತರ ಬಳಿ ಹೇಳಿಕೊಂಡಿದ್ದಾರೆ. ನಿನ್ನೆ ನಡೆದ ಕೊಡಗು ಪುನರ್ ನಿರ್ಮಾಣ ಸಭೆಗೆ ಡಿಸಿಎಂ ಪರಂ ಗೈರಾಗಿ ತಮ್ಮ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಸಮ್ಮಿಶ್ರ ಸರ್ಕಾರದ ನಡವಳಿಕೆ ಬಗ್ಗೆ ದಿಲ್ಲಿಗೂ ದೂರು ನೀಡಿದ್ದಾರೆ ಎಂಬ ರಾಜಕೀಯ ವಲಯದಲ್ಲಿ ಹರಿದಾಡುತ್ತಿದೆ. ಈ ನಡುವೆ ಭಾನುವಾರ ಅಸಮಾಧಾನಗೊಂಡಿರುವ ಸಿದ್ದು ಆಪ್ತರಾದ ಹಲವು ಶಾಸಕರು ಪ್ರತ್ಯೇಕ ಸಭೆ ನಡೆಸಿದ್ದು, ಬಿಜೆಪಿ ಸೇರಲು ಚಿಂತನೆ ನಡೆಸಿದ್ದಾರೆ ಎಂದು ಮೂಲಗಳು ತಿಳಿಸಿವೆ.