ದಿನದ ಸುದ್ದಿ

ಜಾಗತಿಕ ತಾಪಮಾನ ನಿಗ್ರಹಕ್ಕೆ ಹಸಿರು ವಾಹನಗಳ ಬಳಕೆ ಅಗತ್ಯ : ಸಚಿವ ಭಗವಂತ ಖೂಬ

Published

on

ಸುದ್ದಿದಿನ ಡೆಸ್ಕ್ : ಪರಿಸರದಲ್ಲಿ ತಾಪಮಾನ ಹೆಚ್ಚಾಗುತ್ತಿದ್ದು, ಇಂತಹ ಪರಿಸ್ಥಿತಿಯಲ್ಲಿ ನವೀಕರಿಸಲಾಗದ ಶಕ್ತಿಯ ಮೂಲಗಳ ಬಳಕೆ ಕಡಿಮೆ ಮಾಡಿ ನವೀಕರಿಸಬಹುದಾದ, ಸೌರ ಶಕ್ತಿ, ಹೈಡ್ರೋಜನ್ ವಾಹನಗಳನ್ನು ಹೆಚ್ಚು ಬಳಸಬೇಕು ಎಂದು ಕೇಂದ್ರದ ರಾಸಾಯನಿಕ ಮತ್ತು ರಸಗೊಬ್ಬರ ಹಾಗೂ ನವೀಕರಿಸಬಹುದಾದ ಶಕ್ತಿ ಮೂಲಗಳ ಖಾತೆ ರಾಜ್ಯ ಸಚಿವ ಭಗವಂತ ಖೂಬ ಸಲಹೆ ನೀಡಿದ್ದಾರೆ.

ಬೆಂಗಳೂರಿನ ಮಾದವಾರ ಬಳಿಯ ಅಂತರರಾಷ್ಟ್ರೀಯ ವಸ್ತು ಪ್ರದರ್ಶನ ಕೇಂದ್ರದಲ್ಲಿ ಮೂರನೇ ಆವೃತ್ತಿಯ ಹಸಿರು ವಾಹನಗಳ ವಸ್ತು ಪ್ರದರ್ಶನಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಇಂತಹ ವಸ್ತು ಪ್ರದರ್ಶನಗಳಿಂದ ಹೊಸ ತಂತ್ರಜ್ಞಾನ ಅಭಿವೃದ್ಧಿಗೆ ಸಹಕಾರಿಯಾಗಲಿದೆ. ಜಾಗತಿಕ ತಾಪಮಾನ ನಿಗ್ರಹಕ್ಕೆ ಹಸಿರು ವಾಹನಗಳ ಬಳಕೆ ಅಗತ್ಯವಾಗಿದೆ ಎಂದರು.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Trending

Exit mobile version