ದಿನದ ಸುದ್ದಿ

ಅಯೋಧ್ಯೆಯಲ್ಲಿ ಮಸೀದಿ ಇರಲಿಲ್ಲ, ಅದು ರಾಮಜನ್ಮ ಭೂಮಿ: ವಾಸಿಂ ರಿಜ್ವಿ

Published

on

ಸುದ್ದಿದಿನ ಡೆಸ್ಕ್: ಅಯೋಧ್ಯೆಯಲ್ಲಿ ಮಸೀದಿ ಇರಲೇ ಇಲ್ಲ. ಅಲ್ಲಿ ಮಸೀದಿ ನಿರ್ಮಾಣ ಸಾಧ್ಯವಿಲ್ಲ. ಅದು ರಾಮ ಜನ್ಮಭೂಮಿ, ಮಂದಿರ ಮಾತ್ರ ನಿರ್ಮಿಸಲಾಗುತ್ತದೆ ಎಂದು ಉತ್ತರ ಪ್ರದೇಶದ ಶಿಯಾ ಕೇಂದ್ರ ವಕ್ಫ್ ಮಂಡಳಿ ಅಧ್ಯಕ್ಷ ವಾಸಿಂ ರಿಜ್ವಿ ಹೇಳಿದ್ದಾರೆ.

ರಾಮಜನ್ಮ ಭೂಮಿ ವಿವಾದದ ಕುರಿತು ಉತ್ತರ ಪ್ರದೇಶದ ಶಿಯಾ ಕೇಂದ್ರ ವಕ್ಫ್ ಮಂಡಳಿ ಅಧ್ಯಕ್ಷ ವಾಸಿಂ ರಿಜ್ವಿ ಮಾತನಾಡಿದ್ದು, ಶಿಯಾ ಕೇಂದ್ರ ವಕ್ಫ್ ಮಂಡಳಿ ಬಾಬರಿ ಮಸೀದಿ ರಕ್ಷಕ. ಭಾರತದಲ್ಲಿ ಮುಸ್ಲಿಂ ಸಮುದಾಯದ ನೇತೃತ್ವ ವಹಿಸುವ ಇತರೆ ಯಾವುದೇ ಪಂಗಡ ಇಲ್ಲ. ಹಾಗಾಗಿ ಶಾಂತಿಯುತವಾಗಿ ಸಮಸ್ಯೆ ಬಗೆಹರಿಯಲಿದೆ ಎಂದು ಹೇಳಿದ್ದಾರೆ.

Leave a Reply

Your email address will not be published. Required fields are marked *

Trending

Exit mobile version