ದಿನದ ಸುದ್ದಿ
ಕನ್ನಡ ಕಲಿತಿದ್ದ ಅಟಲ್‌ಜಿಗೆ ರಾಜ್ಯದ ಜತೆ ನಂಟು ಅಪಾರ
ಸುದ್ದಿದಿನ ಡೆಸ್ಕ್ | ಇಹ ಲೋಕ ತ್ಯಜಿಸಿದ ಅಟಲ್ ಬಿಹಾರಿ ವಾಜಪೇಯಿ ಅವರಿಗೆ ಕರ್ನಾಟಕದ ನಂಟು ಅಪಾರವಾಗಿತ್ತು. ಮೈಸೂರಿಗೆ ನಾಲ್ಕು ಬಾರಿ ಬಂದು ಹೋಗಿದ್ದ ಅವರು ಕರ್ನಾಟಕಕ್ಕೆ ಲೆಕ್ಕವಿಲ್ಲದಷ್ಟು ಸಲ ಭೇಟಿ ನೀಡಿದ್ದಾರೆ.
ತುರ್ತು ಪರಿಸ್ಥಿತಿಯ ಸಮಯದಲ್ಲಿ ಟೊಂಕ ಕಟ್ಟಿ ಹೋರಾಡಿದ ಅಟಲ್‌ಜಿ ಅವರನ್ನು ಹದಿನೆಂಟು ತಿಂಗಳುಗಳ ಕಾಲ ಬೆಂಗಳೂರಿನ ಕೇಂದ್ರೀಯ ಕಾರಾಗೃಹದಲ್ಲಿ ಬಂಧಿಸಲಾಗಿತ್ತು.
ಅಟಲ್‌ಜಿ ಜತೆ ಮಾಜಿ ಪ್ರಧಾನಿ ಎಚ್‌ಡಿ ದೇವೇಗವಡ, ಎಲ್ ಕೆ ಆಡ್ವಾನಿ, ಬಿಎಸ್ ಯಡಿಯೂರಪ್ಪ ಮೊದಲಾದವರೂ ಕೂಡ ಇದ್ದರು. ಈ ವೇಳೆ ಕನ್ನಡ ಮಾತನಾಡುವುದನ್ನು ವಾಜಪೇಯಿ ಅವರು ಕಲಿತಿದ್ದರು.
ದೇವೇಗೌಡರು ಕುಟುಂಬ ಸಮಸ್ಯೆಯಿಂದಾಗಿ ಜಾಮೀನಿನ ಮೇಲೆ ಬಿಡುಗಡೆಯಾಗಿ ಹೊರಬಂದರು. ಆದರೆ, ಅಟಲ್ ಜಿ ಅವರು ಹದಿನೆಂಟು ತಿಂಗಳ ಕಾಲ ಕಾರಾಗೃಹ ಶಿಕ್ಷೆ ಪೂರೈಸಿ ವಾಪಸ್ ಬಂದರು.
ಅಟಲ್‌ಜಿ ಅವರು ಜೈಲಿನಲ್ಲಿದ್ದ ಸಮಯದಲ್ಲಿ ಸಾಕಷ್ಟು ಕವಿತೆಗಳನ್ನು ಬರೆದು ಪ್ರಕಟಿಸಿದ್ದರು.
ಸದ್ಯ ಸ್ವತಂತ್ರ್ಯ ಉದ್ಯಾನವನವಾಗಿರುವ ಆಗಿನ ಕೇಂದ್ರೀಯ ಕಾರಾಗೃಹದಲ್ಲಿ ಕೆಲವು ಸೆಲ್‌ಗಳನ್ನು ಹಾಗೇ ಉಳಿಸಲಾಗಿದೆ. ಜೈಲಿನಲ್ಲಿ ದೊಡ್ಡ ದೊಡ್ಡ ನಾಯಕರ ಪ್ರತಿಮೆಗಳೂ ನೋಡಲು ಸಿಗುತ್ತವೆ.
ಸುದ್ದಿದಿನ.ಕಾಂ|ವಾಟ್ಸಾಪ್|9986715401