/home/u584543641/domains/suddidina.com/public_html/wp-content/themes/zox-news/amp-single.php on line 77

Warning: Trying to access array offset on value of type bool in /home/u584543641/domains/suddidina.com/public_html/wp-content/themes/zox-news/amp-single.php on line 77
" width="36" height="36">

ಲೈಫ್ ಸ್ಟೈಲ್

ಹಬ್ಬಕ್ಕೆ ಕಳೆ ಕಟ್ಟಿದೆ ಬೆಂಗಳೂರು ಮಾರುಕಟ್ಟೆ | ಹಬ್ಬಕ್ಕೆ ನೀವು ರೆಡಿ ನಾ?

Published

on

ನಾಳೆ ವರಮಹಾಲಕ್ಷ್ಮಿ ಹಬ್ಬ.ಶ್ರಾವಣ ಮಾಸದ  ಶುಕ್ರವಾರದಂದು ಬರುವ ವರ ಮಹಾಲಕ್ಷ್ಮಿದೇವಿಯನ್ನ ಸ್ವಾಗತಿಸೋಕೆ ಇಡೀ ಬೆಂಗಳೂರು  ಸಜ್ಜಾಗಿದೆ. ಬೆಂಗಳೂರಿನ ಸಿಟಿ ಮಾರುಕಟ್ಟೆಗೆ ಯಲ್ಲಿ ಯಂತೂ ಹಬ್ಬದ ಕಳೆ ಕಟ್ಟಿದೆ. ಮಲ್ಲಿಗೆ, ಅಜ್ಜಿ, ಗುಲಾಬಿ, ಸೇವಂತಿಗೆ, ಕಮಲದ ಪರಿಮಳ ಮಾರುಕಟ್ಟೆಯ ತುಂಬೆಲ್ಲಾ.. ಬಾಳೆ-ಮಾವು-ಸೇಬು-ಕಿತ್ತಳೆ ಯ ರಾಶಿ ರಾಶಿ. ಎಲ್ಲಿ ನೋಡಿದರೂ ಹೂ-ಹಣ್ಣು , ಬಳೆ-ಬಟ್ಟೆ, ಖರೀದಿ ಯಲ್ಲಿ ಮಗ್ನರಾಗಿದ್ದಾರೆ ಬೆಂಗಳೂರಿಗರು. ಕಳೆದ ಒಂದು  ತಿಂಗಳಿಂದ ಸುರಿಯುತ್ತಿರುವ ಮಳೆಯ ನಡುವೆಯೂ ವರಮಹಾಲಕ್ಷ್ಮಿ ಹಬ್ಬಕ್ಕೆ ತಯಾರಿ ಜೋರಾಗಿಯೇ ಸಾಗಿದೆ.

ದೇವರ ಕಳಸ, ಪೂಜೆ ಮತ್ತು ಅಲಂಕಾರಿಕ  ಸಾಮಗ್ರಿಗಳನ್ನು ಕೊಳ್ಳುವಲ್ಲಿ ಜನರು ಫುಲ್ ಬುಜಿ. ಮಾಲು-ಮಳಿಗೆಗಳೆಲ್ಲಾ ತುಂಬಿ ತುಳುಕುತ್ತಿದ್ದು ಎಲ್ಲೆಲ್ಲೂ ಹಬ್ಬದ ರಿಯಾಯಿತಿ ವ್ಯಾಪಾರ ವಹಿವಾಟು ಸಾಗಿದೆ.

ಮಳೆಯ ಕಾರಣದಿಂದಾಗಿ ಎಂದಿನಂತೆ ಮಲ್ಲಿಗೆ-ಕನಕಾಂಬರ ದುಬಾರಿ ಎನಿಸಿದರೂ ಐಶ್ವರ್ಯ ರಾಣಿಯ ಸಿಂಗರಿಸುವ ಜನ ದುಬಾರಿ ದರಗಳಲ್ಲೂ ಖರೀದಿ ಮುಂದುವರೆಸಿದ್ದಾರೆ.

ಬೆಂಗಳೂರಿನ  ಜಯನಗರ, ಬನಶಂಕರಿ, ಮಾಗಡಿ, ಮಡಿವಾಳ, ಮಾರುಕಟ್ಟೆಗಳು ಸೇರಿದಂತೆ,ಗಾಂಧಿ ಬಜಾರ್, ಮಲ್ಲೇಶ್ವರಂ,ವಿಜಯನಗರದಲ್ಲಿ ಹಬ್ಬದ  ಶಾಪಿಂಗ್ ಬಿರುಸಿನಿಂದ  ಸಾಗಿದೆ. ಹಬ್ಬವಾದ್ದರಿಂದ ಮಾರುಕಟ್ಟೆಗಳಲ್ಲಿ ಜನಜಂಗುಳಿ ಯೂ ಹೆಚ್ಚಿದ್ದು ಟ್ರಾಫಿಕ್ ಜಾಮ್ ಗಳನ್ನೂ ಎದುರಿಸಬೇಕಾಗುತ್ತದೆ. ಎಚ್ಚರಿಕೆ!

ಎಷ್ಟೇ ದುಬಾರಿ ದರಗಳಾದರೂ, ಟ್ರಾಫಿಕ್ ಜಾಮ್ ಇದ್ದರೂ ಇದೆಲ್ಲವನ್ನೂ ಲೆಕ್ಕಿಸದೆ ಹಬ್ಬದ ಶಾಪಿಂಗ್ ನಲ್ಲಿ ಮಗ್ನರಾಗಿದ್ದಾರೆ ಬೆಂಗಳೂರು ಜನತೆ. ಎಲ್ಲರಿಗೂ ನಾಳಿನ ವರಮಹಾಲಕ್ಷ್ಮಿ ಹಬ್ಬದ ಶುಭಾಶಯಗಳು.

Leave a Reply

Your email address will not be published. Required fields are marked *

Trending

Exit mobile version