ಲೈಫ್ ಸ್ಟೈಲ್

ಚಳಿಗಾಲದ ಫೇವರೆಟ್ ‘ಗೋಡಂಬಿ ಸಮೋಸ’ ಮಾಡೋದು ಹೀಗೆ ನೋಡಿ..!

Published

on

ಚಳಿಗಾಲ ಬಂದಿದೆ , ಸಂಜೆ ಬಿಸಿ ಬಿಸಿಯಾದ ಟೀ ಅಥವಾ ಕಾಫಿಯ ಜೊತೆಗೆ ಏನಾದರೂ ಬಿಸಿ ಬಿಸಿಯಾಗಿ ತಿಂದಿ ಇದ್ದರೆ ಎಷ್ಟು ಚಂದ ಅಲ್ವ. ಅದಕ್ಕಾಗಿಯೇ ನಾವು ಈಗ ಗೋಡಂಬಿ ಸಮೋಸ ಮಾಡುವುದು ಹೇಗೆ ಎಂದು ತಿಳಿಯೋಣ.

ಬೇಕಾಗುವ ಪದಾರ್ಥಗಳು

  • ಮೈದಾ-250ಗ್ರಾಂ
  • ಕಡಲೆ ಹಿಟ್ಟು-75ಗ್ರಾಂ
  • ಗೋಡಂಬಿ-5೦ಗ್ರಾಂ
  • ಹೆಸರಬೇಳೆ ಮಿಕ್ಚರ್-1೦೦ಗ್ರಾಂ
  • ಎಣ್ಣೆ-25೦ಗ್ರಾಂ
  • ತುಪ್ಪ-5೦ಗ್ರಾಂ
  • ಉಪ್ಪು ರುಚಿಗೆ

ಮಾಡುವ ವಿಧಾನ:

ಮೊದಲು ಮೈದಾ ಹಿಟ್ಟನ್ನು ಜರಡಿ ಮಾಡಿಕೊಳ್ಳಿ. ನಂತರ ಉಪ್ಪು ಸೇರಿಸಿ, ತುಪ್ಪವನ್ನು ಸ್ವಲ್ಪ ಕಾಯಿಸಿ ಹಾಕಿಕೊಳ್ಳಿ. ಸ್ವಲ್ಪ ನೀರನ್ನು ಸೇರಿಸಿ ಪೂರಿ ಹಿಟ್ಟಿನ ಹದಕ್ಕೆ ಕಲೆಸಿಕೊಳ್ಳಿ. ಗೋಡಂಬಿಯನ್ನು ಸಣ್ಣದಾಗಿ ಕಟ್ ಮಾಡಿ ಚೂರುಗಳಾಗಿ ಮಾಡಿಕೊಳ್ಳಿ. ಕಲೆಸಿಕೊಂಡ ಹಿಟ್ಟನ್ನು ಒಂದು ತೆಳುವಾದ ಬಟ್ಟೆಯನ್ನು ಸುತ್ತಿ ಸ್ವಲ್ಪ ಸಮಯ ಹಾಗೇ ಬಿಡಿ. ಗೋಡಂಬಿಯನ್ನು ತುಪ್ಪದಲ್ಲಿ ಹುರಿದುಕೊಳ್ಳಿ. ಹಾಗೆಯೇ ತುಪ್ಪದಲ್ಲಿ ಕಡಲೆ ಹಿಟ್ಟನ್ನು ಕೆಂಪಗೆ ಹುರಿದುಕೊಳ್ಳಿ. ಈಗ ಪೂರಿ ಹಿಟ್ಟನ್ನು ಗುಂಡಗೆ ಲಟ್ಟಿಸಿ ಕೊಂಡು ತ್ರಿಕೋನಾಕಾರಕ್ಕೆ ಕತ್ತರಿಸಿಕೊಳ್ಳಿ.
ಹೆಸರು ಬೇಳೆ ಮಿಕ್ಚರ್ , ಗೋಡಂಬಿಯ ಚೂರುಗಳು, ಹುರಿದ ಕಡಲೆ ಹಿಟ್ಟು ಬೆರೆಸಿ ಕೊಳ್ಳಿ. ತ್ರಿಕೋನಾಕಾರವಾಗಿ ಕಟ್ ಮಾಡಿದ ಪೂರಿಯ ಹಿಟ್ಟನ್ನು ಕೋನ್ ನಂತೆ ಮಾಡಿಕೊಳ್ಳಿ.ಮಧ್ಯ ಭಾಗಕ್ಕೆ ತಯಾರಿಸಿಕೊಂಡಿರುವ ಮಿಶ್ರಣ ವನ್ನು ಹಾಕ್ಕಿಕೊಳ್ಳಿ. ಮುಂದಿನ ಭಾಗವನ್ನು ಕೈಗೆ ಸ್ವಲ್ಪ ನೀರನ್ನು ಅದ್ದಿಕೊಂಡು ಮಡಚಿ. ಒಂದು ದಪ್ಪ ತಳದ ಬಾಣಲೆಗೆ ಎಣ್ಣಿ ಹಾಕಿ ಕಾಯಲು ಬಿಡಿ. ಸಮೋಸ ಮುಳುಗುವಷ್ಟು ಎಣ್ಣೆ ಹಾಕಿಕೊಂಡರೆ ಸಮೋಸ ಚೆನ್ನಾಗಿ ಬೇಯಲು ಅನುಕೂಲವಾಗುವುದು. ಕಾದ ಎಣ್ಣೆಗೆ ಸಮೋಸವನ್ನು ಹಾಕಿ ಕೆಂಪಗೆ ಕರಿಯಿರಿ. ಈಗ ರುಚಿಯಾದ ಗೋಡಂಬಿ ಸಮೋಸ ಸವಿಯಲು ಸಿದ್ಧ. ಇದನ್ನು ಹಸಿರು ಚಟ್ನಿ ಅಥವಾ ಕೆಚಪ್ ಜೊತೆ ಸವಿದರೆ ಚಂದ.

ಸುದ್ದಿದಿನ.ಕಾಂ|ವಾಟ್ಸಾಪ್|9986715401

Trending

Exit mobile version