ಲೈಫ್ ಸ್ಟೈಲ್

ಮುಂಗಾರಿನಲ್ಲಿ ವೈರಲ್ ಆಯ್ತು ಬ್ಲೂ ಮೇಕಪ್ ಟ್ರೆಂಡ್…!

Published

on

ಲೇಖಕಿ ಚಿತ್ರಶ್ರೀ ಹರ್ಷ

ಬೆಂಗಳೂರಿನಲ್ಲಿ ಮುಂಗಾರು ಫ್ಯಾಷನ್ ಜೋರಾಗಿದೆ. ನೀಲಿ ಆಗಸದಲ್ಲಿ  ಕಪ್ಪು-ಬಿಳಿ ಮೋಡದ ಜೂಜಾಟ ಒಂದು ಕಡೆ ಆದರೆ, ಇನ್ನೊಂದೆಡೆ ಹಸಿರು ಸಿರಿಯ ಛಾಪು. ಪ್ರಕೃತಿ ಯ ಈ ರಮಣೀಯ ಬಣ್ಣ ಗಳನ್ನ ಫ್ಯಾಷನ್ ಪ್ರಿಯರು ಮೇಕಪ್ ನಲ್ಲಿ ಸೆರೆ ಹಿಡಿಯ ಹೊರಟಿದ್ದಾರೆ.

ಆಗಸದ ನೀಲಿ ಕಣ್ಣುಗಳು

ಆಗಸದಲ್ಲಿನ ನೀಲಿ ಬಣ್ಣ ಸುಂದರಿಯ ಕಣ್ಣು ಗಳಲ್ಲಿ ನಲನಲಿಸುತ್ತಿದೆ. ನೋಡೋಕೆ ಬಹಳ ಕ್ಯೂಟ್ ಅನಿಸುವ ಈ ಬ್ಲೂ ಐಸ್ ಎಲ್ಲರ ಮನಸೂರೆ ಗೊಂಡಿದೆ.ಬ್ಲೂ ಸ್ಮೋಕೀ ಐಸ್ ಕಾಲೇಜು ಕನ್ಯಾಮನಿಯರ ಫೇವರಿಟ್ ಲುಕ ಆಗಿದೆ.

ಫ್ಯಾಷನ್ ವಿದ್ಯಾರ್ಥಿನಿ ಮೇಧಾ ರವರ ಮಾತುಗಳಲ್ಲಿ “ನೋಡೋಕೆ ತುಂಬಾ ಆಕರ್ಷಕ ವಾಗಿ ಕಾಣುವ ಈ ಲುಕ್ ಸದ್ಯ ಸೋಷಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿದೆ.. ಬ್ಲೂ ಈಸ್ ಬ್ಯೂಟಿಫುಲ್… ”

ಸಮುದ್ರದ ನೀಲಿ ಸಾರುವ ಬ್ಲೂ ಲಿಪ್ಸ್ಟಿಕ್..!

ಪಿಂಕ್, ರೆಡ್, ಆರೆಂಜ್ ಲಿಪ್ಸ್ಟಿಕ್ ಗಳ ಸರಣಿ ಮುಗಿದಿದೆ. ಈಗೇನಿದ್ರೂ ಬೋಲ್ಡ್ ಲುಕ್ ನ ಕಾಲ. ಈಗಿನ ಯುವತಿಯರು ಇ ಬೋಲ್ಡ್ ಲುಕ್ ಗೆ ಫುಲ್ ಫಿದಾ ಆಗಿದ್ದಾರೆ. ಎಲ್ಲೆಲ್ಲೂ ಬ್ಲೂ ಮುತ್ತು ಪೋರ್ಟಲ್ ಲಿಪ್ಸ್ಟಿಕ್ ಟ್ರೆಂಡ್ ಹೆಚ್ಚಿದೆ.

ಟರ್ಕಾಯಿಸ್ ಬ್ಯೂಟಿ ಗಳು

ಫ್ಯಾಷನ್ ದುನಿಯಾದಲ್ಲಿ ಈಗ ಸಾಗರದ ನೀಲಿ ಅಲೆ ಸೃಷ್ಟಿಯಾಗಿದೆ. ಸೆಲಿಬ್ರಿಟಿ ಗಳಿಂದ ಜನಸಾಮಾನ್ಯರ ವರೆಗೂ ಎಲ್ಲರೂ ಈ ಬ್ಲೂ ಮೀಡಿಯಾ ಗೆ ಮನಸೋತಿದ್ದಾರೆ . ಬ್ಲೂ ಐಲೈನರ್..ಬ್ಲೂ ಕಾಜಲ್..ಬ್ಲೂ ಐ ಪ್ಯಾಡ್..  ಬ್ಲೂ ಲಿಪ್ಸ್ಟಿಕ್… ಇವೆಲ್ಲವೂ ಫ್ಯಾಷನ್ ದುನಿಯಾದ ಲೇಟೆಸ್ಟ್ ಟ್ರೆಂಡ್ ಲಿಸ್ಟ್ ಸೇರಿದೆ .

ಹಾಗಾದರೆ ತಡ ಯಾಕೆ ನೀವೂ ಈ ಬ್ಲೂ ಲುಕ್ ಟ್ರೈನ್ ಮಾಡಿ. ಸೆಲ್ಫಿ ಕ್ಲಿಕ್ಕಿಸಿ ಮುಂಗಾರನ್ನ  ಸಂಭ್ರಮಿಸಿ.

ಸುದ್ದಿದಿನ.ಕಾಂ|ವಾಟ್ಸಾಪ್|9986715401

Leave a Reply

Your email address will not be published. Required fields are marked *

Trending

Exit mobile version