ದಿನದ ಸುದ್ದಿ
ವೈರಲ್ : ಕುರಿ ಕಾಯುವ ಹನುಮನ ಗಾಯನಕ್ಕೆ ನೆಟ್ಟಿಗರು ಫಿದಾ
ಲಾಲಿ ಹಾಡು ಸಿನಿಮಾ ನೋಡಿದ್ದರೆ ಹಳ್ಳಿಗಾಡಿನ ಒಬ್ಬ ಹುಡುಗ ಹೇಗೆ ಒಬ್ಬ ದೊಡ್ಡ ಗಾಯಕನಾಗಬಲ್ಲ ಎಂಬುದು ತಿಳಿಯುತ್ತದೆ. ಅದರಂತೆ ಇಲ್ಲೊಬ ಕುರಿ ಕಾಯುವ ಹುಡುಗ ರಾತ್ರೋ ರಾತ್ರಿ ಸೆಲಬ್ರಿಟಿಯಾಗಿದ್ದಾನೆ.
ಅದಕ್ಕೆ ಕಾರಣ ಆತನಲ್ಲಿರುವ ಗಾಯನ ಕಲೆ. ಇವನ ಹೆಸರು ಹನುಮಂತ ಬಟ್ಟೂರ , ಗದಗ ಜಿಲ್ಲೆಯ ಶಿರಹಟ್ಟಿ ಯವರು.
ನಿನ್ನೆ ಮುಂಜಾನೆ ತಾನು ಹಾಡು ಹಾಡಿ ವಾಟ್ಸಪ್ ನಲ್ಲಿ ಹಾಕಿದ ವಿಡಿಯೋ ಬೆಳಗಾಗುವುದರೊಳಗೆ ಇಡೀ ಕರ್ನಾಟಕದಾದ್ಯಂತ ಪಸರಿಸಿದ್ದು, ಸದ್ಯ ಆತ ಸೆಲೆಬ್ರಿಟಿಯಾಗಿ ಹೆಸರಾಗಿದ್ದಾನೆ .
ಹನುಂತ ಕೇವಲ ಸಾಮಾನ್ಯ ಹಾಡುಗಾರನಾಗಿದ್ರೆ ಇಷ್ಟೊಂದು ಗಮನ ಸೆಳೆಯುತ್ತಿರಲಿಲ್ಲವೇನೋ ಆದ್ರೆ ಈತ ಕುರಿಗಾಹಿ. ವಿಶೇಷ ಇರೋದೇ ಇಲ್ಲಿ ಕುರಿಕಾಯಲು ಹೋದಾಗ ಬ್ಯಾಕ್ ಗ್ರೌಂಡಲ್ಲಿ ಕುರಿಗಳು ಬರಿವಂತೆ ಮೊಬೈಲ್ ಕ್ಯಾಮೆರಾ ಆನ್ ಮಾಡಿಕೊಂಡು ತಾನೇ ವಿಡಿಯೋ ಮಾಡಿಕೊಳ್ಳೋ ಮೂಲಕ ಹಾಡು ಹಾಡಿ ಇಡೀ ರಾಜ್ಯಕ್ಕೆ ಹೆಸರಾಗಿದ್ದಾನೆ . ಈತ ಹಾಡಿದ ವಿಡಿಯೋ ಸಾಮಾಜಿಕ ಜಾಲ ತಾಣಗಳಲ್ಲಿ ಸಿಕ್ಕಾಪಟ್ಟೆ ವೈರಲ್ ಆಗ್ತಿದೆ. ಶಿರಹಟ್ಟಿಯ ಹನುಮಂತ ತಂದೆಯ ಐದು ಮಕ್ಕಳಲ್ಲಿ ಒಬ್ಬರು. ಚಿಕ್ಕಂದಿನಿಂದ ಸಿನಿಮಾ ನೋಡುವ ಗೀಳು. ಆರಂಭದಿಂದ ಡಾ. ರಾಜ್ ಕುಮಾರ್ ಅಭಿಮಾನಿ ಆಗಿದ್ದೆ ಎಂದು ಹೇಳುವ ಹನುಮಂತ ನಂತರದಲ್ಲಿ ಎಲ್ಲಾ ನಾಯಕರ ಚಿತ್ರಗಳನ್ನೂ ಅಭಿಮಾನದಿಂದಲೇ ನೋಡ್ತಿರೋದಾಗಿ ಹೇಳ್ತಾನೆ. ಹನುಮಂತ ಹೈಸ್ಕೂಲ್ ವರೆಗೂ ವಿದ್ಯಾಭ್ಯಾಸ ಮಾಡಿದ್ದು, ಕುಲವೃತ್ತಿ ಮಾಡಿಕೊಂಡು ಹೊರಟಿದ್ದಾನೆ . ಇನ್ನೂ ಈತನಿಗೆ ಸಂಗೀತ ಇಷ್ಟ ಸರಿಗಮಪ ದಂತಹ ಕಾರ್ಯಕ್ರಮ ಅಚ್ಚುಮೆಚ್ಚು.
( ಹನುಮಂತ ಬಟ್ಟೂರ : 8105556728)