ಲೈಫ್ ಸ್ಟೈಲ್
ಡೆಲಿವರಿ ಬಾಯ್ ಗಳಾಗಿ ಫ್ಲಿಪ್ ಕಾರ್ಟ್ ಮಾಲೀಕರು ಹೋದಾಗ ಏನಾಯ್ತು ಗೊತ್ತಾ?
ಸುದ್ದಿದಿನ ಡೆಸ್ಕ್ | ಫ್ಲಿಪ್ ಕಾರ್ಟ್ ಮಾಲೀಕರಾದ ಬಿನ್ನಿ ಬನ್ಸಲ್ ಅವರು ಕಾರ್ಯಕ್ರಮವೊಂದರಲ್ಲಿ ಪಾಲ್ಗೊಂಡು ತುಸು ಬಿಡುವಾಗಿ ಮಾತನಾಡಿದರು. ಜೋಕ್ ಗಳು ಫ್ಲಿಪ್ ಕಾರ್ಟ್ ಹೇಗೆ ಸೃಷ್ಟಿಯಾಯಿತು ಎಂಬ ಸಂಗತಿಗಳನ್ನು ಬಿಚ್ಚಿಟ್ಟರು.
ಫ್ಲಿಪ್ ಕಾರ್ಟ್ ಆರಂಭದ ದಿನಗಳಲ್ಲಿ, ನಾನು ಮತ್ತು ಸಚಿನ್ ಬನ್ಸಲ್ ಇಬ್ಬರೂ ಡೆಲಿವರಿ ಬಾಯ್ ಗಳಾಗಿ ಹೋಗುತ್ತಿದ್ದೆವು. ಗ್ರಾಹಕನ ಮನಸ್ಥಿತಿ, ಆಸಕ್ತಿಗಳನ್ನು ತಿಳಿಯುವುದು ಇದರ ಉದ್ದೇಶವಾಗಿತ್ತು. ಈ ವೇಳೆ ಕೆಲವರು ನಮ್ಮನ್ನು ಗುರುತು ಹಿಡಿಯುತ್ತಿದ್ದರು. ಕೆಲವರಿಗೆ ನಾವು ಗೊತ್ತೇ ಆಗುತ್ತಿರಲಿಲ್ಲ. ಒಂದು ಸಾರಿ ಹೀಗೆ ಒಬ್ಬ ಗ್ರಾಹಕ ನನ್ನನ್ನು ಗುರುತುಹಿಡಿದು ಮನೆಗೆ ಕರೆದುಕೊಂಡು ಹೋಗಿ ಟೀ, ಮಿಠಾಯಿಗಳನ್ನು ಕೊಟ್ಟರು. ಗ್ರಾಹಕನೇ ಒಡೆಯನಾದ ಕಾರಣ ನಾನು ನಿರಾಕರಿಸಲಿಲ್ಲ ಎಂದು, ಬಿನ್ನಿ ಹೇಳಿದರು.
ಗೂಗಲ್ ಮೂರು ಬಾರಿ ರಿಜೆಕ್ಟ್ ಮಾಡಿತ್ತು
ನಾನು ದಿಲ್ಲಿ ಐಐಟಿಯಲ್ಲಿ ಓದು ಮುಗಿಸಿ ಅಲ್ಲಿ ಇಲ್ಲಿ ಕೆಲಸ ಮಾಡುತ್ತಿದ್ದೆ. ಗೂಗಲ್ ಸಂಸ್ಥೆಯಲ್ಲಿ ಕೆಲಸ ಮಾಡಬೇಕೆಂಬುದು ನನ್ನ ಆಸೆಯಾಗಿತ್ತು. ಮೂರು ಬಾರಿ ಕೆಲಸಕ್ಕೆ ಅರ್ಜಿ ಹಾಕಿದ್ದಾಗಲೂ ಗೂಗಲ್ ರಿಜೆಕ್ಟ್ ಮಾಡಿತ್ತು. ಫ್ಲಿಪ್ ಕಾರ್ಟ್ ಹುಟ್ಟಲು ಇದೊಂದು ಮುಖ್ಯ ಕಾರಣವಾಯಿತು ಎಂದರು.
ಅಮೆಜಾನ್ ಸೇರಿಸಿದ್ದ ಸಚಿನ್
ಕೆಲಸ ಇಲ್ಲದೆ ಕುಳಿತಾಗ ಸಚಿನ್ ಬನ್ಸಲ್ ನನ್ನನ್ನು ಅಮೆಜಾನ್ ನಲ್ಲಿ ಕೆಲಸಕ್ಕೆ ಸೇರಿಸಿದರು. ಆದರೆ ಎಂಟೇ ತಿಂಗಳಲ್ಲಿ ನಾನು ಕೆಲಸ ಬಿಟ್ಟೆ. ದೊಡ್ಡ ಕಂಪನಿಗಳಲ್ಲಿ ಒಬ್ಬ ಉದ್ಯೋಗಿ ಇಂತಿಷ್ಟು ವರ್ಷ ಕೆಲಸ ಮಾಡಲೇ ಬೇಕೆಂಬ ನಿಯಮವಿದೆ. ಅದನ್ನು ಮುರಿದ ಕಾರಣ ಸಚಿನ್ ದಂಡ ಕಟ್ಟಿದ ಎಂದು ನಕ್ಕರು.
ಹೆಂಡತಿಯ ಮನವೊಲಿಸಲಾಗಲಿಲ್ಲ
ನನ್ನ ಹೆಂಡತಿ ಬಿಗ್ ಬಾಸ್ಕೆಟ್ ನಲ್ಲಿ ತನಗೆ ಬೇಕಾದ ತರಕಾರಿ, ಹಣ್ಣುಗಳನ್ನು ತರಿಸಿಕೊಳ್ಳುತ್ತಿದ್ದಳು. ಫ್ಲಿಪ್ ಕಾರ್ಟ್ ನಲ್ಲಿ ಇವೆಲ್ಲವನ್ನು ಬುಕ್ ಮಾಡು ಎಂದು ನಾನೆಷ್ಟು ಹೇಳಿದರೂ ಕೇಳಲಿಲ್ಲ. ಈಗಲೂ ಆಕೆಯ ಮನವೊಲಿಸಲು ನನಗೆ ಸಾಧ್ಯವಾಗಿಲ್ಲ ಎಂದು ಚಟಾಕಿ ಹಾರಿಸಿದರು.
ಸುದ್ದಿದಿನ.ಕಾಂ|ವಾಟ್ಸಾಪ್|9986715401