ದಿನದ ಸುದ್ದಿ

ರೈತರ ನೋವು ಕೇಳುವವರು ಯಾರು..?

Published

on

  • ದಿವ್ಯಶ್ರೀ. ವಿ, ಬೆಂಗಳೂರು

ಮಗೆಲ್ಲ ತಿಳಿದಿರುವ ಹಾಗೆ ದೇಶಾದ್ಯಂತ ನಡೆಯುತ್ತಿರುವ ರೈತರ ಹೋರಾಟ ಮೂರು ತಿಂಗಳು ಕಳೆದರೂ ಮುಗಿಯದ ನೋವಾಗಿದೆ. ಇದನ್ನು ಭಾರತ ಸರ್ಕಾರ ಹರಿಯದೆ ತಮಗೇನು ಸಂಬಂಧವಿಲ್ಲ ಎಂದು ಮುಖ ಪ್ರಾಣಿಯಂತೆ ವರ್ತಿಸುತ್ತಿರುವುದು ನಿಜಕ್ಕೂ ಎಷ್ಟು ಸರಿ ಎನ್ನುವುದು ಯಕ್ಷ ಪ್ರಶ್ನೆ.

ಅನ್ನದಾತರು ಬೆಳೆದ ಬೆಳೆಯನ್ನು ಖಾಸಗಿ ಸಂಸ್ಥೆಗಳು ಬೆಲೆ ನಿಗದಿ ಮಾಡಬೇಕು ಎಂದರೆ ಇದರಲ್ಲಿ ರೈತನ ಹಕ್ಕು ಎಲ್ಲಿದೆ, ತಾನು ಬೆಳೆದ ಬೆಳೆಗೆ ಮತ್ಯಾರೋ ಬೆಲೆ ನಿಗದಿ ಮಾಡುತ್ತಾರೆ ಎಂದರೆ ಇದಕ್ಕಿಂತ ಅನ್ಯಾಯ ದ್ರೋಹ ಮತ್ತೊಂದಿಲ್ಲ. ಈ ಕೇಂದ್ರ ಸರ್ಕಾರದ ಮೂರು ಅನ್ಯಾಯದ ಕಾಯ್ದೆಗಳನ್ನು ದೇಶಾದ್ಯಂತ ರೈತರು ವಿರೋಧಿಸುತ್ತಿದ್ದಾರೆ.

ಇದನ್ನು ಹರಿಯದೆ ಸರ್ಕಾರ ಕೈ ಕಟ್ಟಿ ಸುಮ್ಮನಿರುವುದು ಭಾರತೀಯರಿಂದ ಖಂಡನೀಯ. ನಮ್ಮ ದೇಶದ ಕೃಷಿ ವ್ಯವಸ್ಥೆಯನ್ನು ಹಾಳು ಮಾಡುವುದಕ್ಕೆ ಇದಕ್ಕಿಂತ ದೊಡ್ಡ ನಿರ್ಧಾರ ಮತ್ತೊಂದಿಲ್ಲ. ಈಗಾಗಲೇ ಕಳೆದ ಮೂರು ತಿಂಗಳಿಂದ ರೈತರ ಹೋರಾಟ ನಡೆಯುತ್ತಿದ್ದು ಇನ್ನು ಕೆಲವು ತಿಂಗಳು ಇದು ಮುಂದುವರೆದರೆ ಭಾರಿ ನಷ್ಟವನ್ನು ಎದುರಿಸಬೇಕಾಗುತ್ತದೆ.

ಇನ್ನುಮುಂದಾದರೂ ಕೇಂದ್ರ ಸರ್ಕಾರ ಕಾಯ್ದೆ ಹಿಂಪಡೆಯಬೇಕು. ನೇಗಿಲ ಕುಲದೊಳಗಡಗಿದೆ ಕರ್ಮ, ನೇಗಿಲ ಮೇಲೆಯೇ ನಿಂತಿದೆ ಧರ್ಮ ಎನ್ನುವ ದ.ರಾ ಬೇಂದ್ರೆಯವರ ಮಾತು ನಮ್ಮ ಭಾರತೀಯ ಸರ್ಕಾರಕ್ಕೆ ಅರ್ಥವಾಗಿದ್ದರೆ ನಮ್ಮ ರೈತರಿಗೆ ಅನ್ಯಾಯವನ್ನು ಉಂಟುಮಾಡುವ ಈ ಕಾಯ್ದೆಯನ್ನು ತರುತ್ತಿರಲಿಲ್ಲ. ಇನ್ನುಮುಂದಾದರೂ ನಮ್ಮ ನೇಗಿಲಯೋಗಿಗೆ ನ್ಯಾಯ ದೊರಕಲಿ ಮತ್ತು ಈಡೀ ಭಾರತವೇ ಅವರ ಪರವಾಗಿ ನಿಲ್ಲೋಣ.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Trending

Exit mobile version