ಭಾಮಿನಿ
ಹೆಂಡ್ತಿ ಮನೇಲಿ ನೀವ್ ಕ್ಲಿಕ್ ಆಗಬೇಕೆಂದ್ರೆ ಹೀಗೆ ಮಾಡಿ
ಹೊಸದಾಗಿ ಮದುವೆಯಾದ ಗಂಡ- ಹೆಂಡಿರ ನಡುವೆ ಅಂತರ ದೂರವಾಗಲು ಸ್ವಲ್ಪ ಸಮಯಬೇಕು. ಆ ಸಮಯ ಬ್ಯಾಲೆನ್ಸ್ ಮಾಡುವುದು ಸುಲಭವಲ್ಲ, ಸ್ವಲ್ಪ ಆಯಾ ತಪ್ಪಿದರೂ ದಾಂಪತ್ಯದಲ್ಲಿ ಸರಸಕ್ಕಿಂತ ವಿರಸವೇ ಹೆಚ್ಚು. ಹಾಗಾಗಿ ಪತಿಯಾದವನು ತನ್ನ ಪತ್ನಿ ಹಾಗೂ ಅವರ ಮನೆಯವರ ಬಗ್ಗೆ ಹೆಚ್ಚು ಕಾಳಜಿ, ಅನುಕಂಪ, ಸಹಾನುಭೂತಿ, ಸಹಾಯ ಮಾಡುವ ಗುಣ ಹೊಂದಿರಬೇಕು. ಇದು ನಿಮಗೆ ನಿಮ್ಮ ಪತ್ನಿಯ ಮನೆಯಲ್ಲಿ ಕ್ಲಿಕ್ ಮಾಡುತ್ತದೆ. ನೀವು ಹೀರೋ ಆಗಲು ನೆರವಾಗುತ್ತದೆ.
ಮದುವೆಯಾದ ಆರಂಭದಲ್ಲಿ ವಧು ವರನೊಂದಿಗೆ ರೋಮ್ಯಾನ್ಸ್ ಮಾಡಿದಷ್ಟು ಸುಲಭವಾಗಿ ಪರ್ಸನಲ್ ವಿಚಾರಗಳನ್ನು ಹೆಂಡತಿಯಾದವಳು ಹಂಚಿಕೊಳ್ಳಲು ಹಿಂದೇಟು ಹಾಕುತ್ತಾಳೆ. ಹೊಸದಾಗಿ ಗಂಡನ ಮನೆಗೆ ಹೋದ ಹೆಣ್ಣು ಮಕ್ಕಳಿಗೆ ಪತಿ ಹಾಗೂ ಆ ಮನೆಯ ವಾತಾವರಣಕ್ಕೆ ಹೊಂದಿಕೊಳ್ಳಬೇಕಾಗುತ್ತದೆ. ಈ ವೇಳೆ ಅನೇಕ ಸಮಸ್ಯೆಗಳು ಎದುರಾಗುತ್ತವೆ. ಇದನ್ನು ತನ್ನ ಗಂಡನೊಂದಿಗೆ ಹಂಚಿಕೊಳ್ಳುವುದು ಕಷ್ಟವಾಗುತ್ತದೆ. ಇದನ್ನು ಅರಿತು ಪತಿಯಾದವನು ನೆರವಾದರೆ ಪತ್ನಿಯೊಂದಿಗೆ ಸಂಸಾರ ಸುಖ ಪರೋಚ್ಛ ಸ್ಥಾನಕ್ಕೆ ಹೋಗುತ್ತದೆ.
ಅವಳು ತಪ್ಪು ಮಾಡಿದಾಗ ಮನವರಿಕೆ ಮಾಡಿ
ಅದಿನ್ನು ಹೊಸ ಲೋಕಕ್ಕೆ ಬಂದ ಹೆಣ್ಣು ಮಕ್ಕಳಿಗೆ ಆ ಮನೆಯ ವಾತಾವರಣಕ್ಕೆ ಹೊಂದಿಕೊಳ್ಳುವುದು ಕಷ್ಟದ ಸಂಗತಿ. ಅವಳ ಅಭಿರುಚಿ, ಅಭಿಪ್ರಾಯ, ಆಲೋಚನೆಗಳು ಸ್ವಲ್ಪ ಭಿನ್ನವಾಗಿ ಇರುತ್ತವೆ. ಹಾಗಾಗಿ ಕೆಲವೊಂದು ಕೆಲಸ, ಕಾರ್ಯಗಳಲ್ಲಿ ತಪ್ಪು ಮಾಡುವುದು ಸಾಮಾನ್ಯವಾಗುತ್ತದೆ. ಆಗ ಅವಳಿಗೆ ಕೂರಿಸಿಕೊಂಡು ಸಮಾಧಾನದಿಂದ ತಿಳಿ ಹೇಳಬೇಕು. ಆಗ ಅವಳು ತಿಳಿದುಕೊಂಡು ತಪ್ಪುಗಳಾಗದಂತೆ ಎಚ್ಚರ ವಹಿಸುತ್ತಾಳೆ. ಈ ವಿಚಾರದಲ್ಲಿ ಗಂಡನಾದವನು ಎಡವಿದರೆ ಮುನಿಸು ಉಂಟಾಗಿ ನಾನೊಂದು ನೀನೊಂದು ತೀರ ಅಗಬೇಕಾಗುತ್ತದೆ.
ಉಡುಗೊರೆ ಕೊಟ್ಟು ಹಮ್ಮೀರನಾಗಿ
ಮದುವೆಯಾದ ಖರ್ಚು ವೆಚ್ಚುಗಳು ಹೆಚ್ಚಾಗುವುದು ಸರ್ವೇ ಸಾಮಾನ್ಯವಾದ ಸಂಗತಿ. ಖರ್ಚುಗಳು ಹೆಚ್ಚಾದವು ಅಂತಾ ಉಳಿತಾಯ ಮಾಡುವ ಅವಸರದಲ್ಲಿ ಹೆಂಡತಿ, ಅವಳ ಮನೆಯಲ್ಲಿ ನಡೆಯುವ ಕಾರ್ಯಕ್ರಮ, ಹಬ್ಬ, ಹುಣ್ಣಿಮೆಗಳಿಗೆ ಹೋಗುವುದು ಕಡಿಮೆ ಮಾಡಿದರೆ ನೀವು ಸಂಸಾರದ ಪರೀಕ್ಷೆಯಲ್ಲಿ ಡುಮ್ಕಿ ಹೋಡಿಯೋದು ಗ್ಯಾರಂಟಿ. ನಿಮ್ಮ ಬಳಿ ಇರುವ ಹಣದಲ್ಲೇ ಸ್ವಲ್ಪ ಭಾಗವನ್ನು ಅವಳಿಗಾಗಿ ತೆಗೆದಿಟ್ಟುಕೊಂಡು ಅವಳಿಗಾಗಿ ಖರ್ಚು ಮಾಡಬೇಕು. ಅವಳ ಬರ್ಥಡೇ ಗಿಫ್ಟ್ ಕೋಡೋದು, ಅವಳ ಮನೆಗೆ ಹೋಗುವಾಗ ಏನಾದರೊಂದು ಉಡುಗೊರೆ ತೆಗೆದುಕೊಂಡು ಹೋಗುವುದು ರೂಢಿಸಿಕೊಳ್ಳಬೇಕು. ಹೀಗೆ ಮಾಡುವುದರಿಂದ ನಿಮ್ಮ ಆಪತ್ಕಾಲದಲ್ಲಿ ನೆರವಿಗೆ ಬರಲಿದೆ.
ಆಗಾಗ ಪಿಕ್ನಿಕ್ ಹೋಗೋ ಪ್ಲ್ಯಾನ್ ಮಾಡಿ
ಹೊಸ ಮನೆ, ಹೊಸ ವಾತಾವರಣಕ್ಕೆ ಬಂದ ಹೆಣ್ಣು ಮಕ್ಕಳೊಬ್ಬಳು ಅಲ್ಲಿಗೆ ಹೊಂದಿಕೊಳ್ಳುವುದು ಕಷ್ಟವೇ ಆಗಿರುತ್ತದೆ. ನೀವು ನಿಮ್ಮ ಪಾಡಿಗೆ ಕೆಲಸ ಹೋದ ನಂತರ ಮನೆಯಲ್ಲಿ ಅವಳಿಗೆ ಒಂಟಿತನ ಕಾಡುತ್ತದೆ. ಇದು ಅವಳಿಗೆ ಬೇಸರ ಉಂಟು ಮಾಡಿ ಅನ್ಯ ಅಲೋಚನೆಗಳಿಗೆ ದಾರಿ ಮಾಡಿಕೊಡುತ್ತದೆ. ಇದಕ್ಕೆ ಗಂಡನಾದವನು ಅವಕಾಶ ಮಾಡಿಕೊಡಬಾರದು. ಸ್ವಲ್ಪ ಯಾಮಾರಿದರೆ ನಿಮ್ಮ ಜೀವನ ಸುಖಸಾಗರವಾಗದೇ ದುಃಖದ ಕಾರ್ಮೋಡ ಕವಿಯುತ್ತದೆ. ಆದ್ದರಿಂದ ಗಂಡನಾದವನು ಆಗಾಗ ಪಿಕ್ನಿಕ್ ಹೋಗಿ ಅವಳ ಬೇಸರವನ್ನು ದೂರ ಮಾಡಬೇಕು. ಇದೇ ಖುಷಿಯಲ್ಲಿ ಅವಳು ನಿಮ್ಮ ಮೇಲೆ ಹೆಚ್ಚು ಪ್ರೀತಿ, ವಿಶ್ವಾಸ ಮೂಡಿಸುವಂತೆ ಮಾಡುತ್ತದೆ. ಅಲ್ಲದೇ ಅವಳ ಮನೆಯಲ್ಲಿ ನಿಮಗೆ ವಿಶೇಷ ಆತಿಥ್ಯವೇ ಸಿಗುವಂಥ ವಾತಾವರಣ ನಿರ್ಮಿಸಲು ನೆರವಾಗುತ್ತದೆ.
ಅವಳ ತವರು ಮನೆಗೆ ಆರ್ಥಿಕವಾಗಿ ನೆರವಾಗಿ
ಮದಿವೆಯಾದ ನಂತರ ಮನೆಯನ್ನು ನಿರ್ವಹಣೆ ಮಾಡುವುದು ಸುಲಭವಲ್ಲ. ಯಾವುದಕ್ಕೂ ಕೊರತೆ ಬಾರದಂತೆ ನೋಡಿಕೊಳ್ಳ ಬೇಕಾಗುತ್ತದೆ. ಅಂಥದರಲ್ಲಿ ಹೆಂಡತಿ ಮನೆಗೆ ಹಣಕಾಸಿನ ವಿಚಾದಲ್ಲಿ ನೆರವಾಗುವುದೆಂದರೆ ಸುಲಭವೇನು, ಕಷ್ಟವೇ ಆಗಿದೆ. ಆದರೂ ಗಂಡನಾದವನು ನೆರವಾಗಲೇ ಬೇಕು. ಅವಳ ಮನೆಯಲ್ಲಿ ಕಷ್ಟ ಬಂದಾಗ ಸ್ವತಃ ನೀವೇ ಮುಂದಾಗಿ ಬಗೆಹರಿಸಿದರೆ ಆ ಮನೆಗೆ, ಈ ನೀವೇ ಹೀರೋ ಆಗುತ್ತೀರಿ. ಇಂಥ ವಿಚಾರಗಳನ್ನು ಸ್ವಲ್ಪ ಎಚ್ಚರಿಕೆಯಿಂದಲೇ ನಿಭಾಯಿಸಬೇಕು.
Wife husband love tricks