ದಿನದ ಸುದ್ದಿ

ಬುರ್ಖಾ ಧರಿಸದಿದ್ದಕ್ಕೆ ಭಾರತೀಯ ಚೆಸ್ ಪಟು ಔಟ್

Published

on

ಸೌಮ್ಯ ಸ್ವಾಮಿನಾಥನ್.
ಸುದ್ದಿದಿನ ಡೆಸ್ಕ್: ಬುರ್ಖಾ ಧರಿಸಲಿಲ್ಲ ಎಂಬ ಕಾರಣಕ್ಕೆ ಭಾರತೀಯ ಮೂಲದ ಮಹಿಳಾ ಗ್ರಾಂಡ್ ಮಾಸ್ಟರ್ ಸೌಮ್ಯ ಸ್ವಾಮಿನಾಥನ್ ಅವರನ್ನು ಪಂದ್ಯದಿಂದ ಹೊರಹಾಕಲಾಗಿದೆ.
ಇರಾನ್‍ನಲ್ಲಿ ನಡೆಯುತ್ತಿರುವ ಏಷ್ಯಾ ಚೆಸ್ ಚಾಂಪಿಯನ್‍ಶಿಪ್‍ನಲ್ಲಿ ಸೌಮ್ಯ ಅವರು ಪಾಲ್ಗೊಂಡಿದ್ದರು. ಪಂದ್ಯದಲ್ಲಿ ಭಾಗವಹಿಸಬೇಕಂದರೆ ಬುರ್ಖ ಅಥವಾ ತಲೆಗವಸನ್ನು ಹಾಕಿಕೊಳ್ಳಲೇಬೇಕೆಂಬ ನಿಯಮವನ್ನುಕಡ್ಡಾಯವಾಗಿ ಜಾರಿಗೊಳಿಸಲಾಗಿತ್ತು. ಆದರೆ, ಸೌಮ್ಯ ಅವರು ಅದಕ್ಕೆ ಒಪ್ಪಲಿಲ್ಲ. ಪರಿಣಾಮವಾಗಿ ಅವರನ್ನು ಆಟದಿಂದ ಹೊರಹಾಕಲಾಗಿದೆ.
ಅವರು ಬಲವಂತವಾಗಿ ಕಾನೂನೊಂದನ್ನು ನನ್ನ ಮೇಲೆ ಹೇರಲು ಬಂದರು. ಮಾನವೀಯ ಮೌಲ್ಯಗಳ ವಿರುದ್ಧವಾಗಿದ್ದ ಆ ನಿಯಮವನ್ನು ನಾನು ಒಪ್ಪಲಿಲ್ಲ. ನನ್ನ ಖಾಸಗಿ ಸ್ವಾತಂತ್ರವನ್ನು ಕಸಿಯಲು ಬಂದ ಕಾರಣ ಪಂದ್ಯದಿಂದ ಹೊರ ಬಂದಿದ್ದೇನೆ ಎನ್ನುತ್ತಾರೆ ಸೌಮ್ಯ ಸ್ವಾಮಿನಾಥನ್.

Leave a Reply

Your email address will not be published. Required fields are marked *

Trending

Exit mobile version