ದಿನದ ಸುದ್ದಿ

ಸಾವಿರ ಮಕ್ಕಳ ತಂದೆ ಈ ವೈದ್ಯ..!

Published

on

ಇದು ವಿಶ್ವ ಅಪ್ಪಂದಿರ ದಿನದ ವಿಶೇಷ

ಜೂನ್ 17 ಅಪ್ಪಂದಿರ ದಿನ ಆಚರಿಸಲಾಗುತ್ತದೆ. ಯಾಕಾಗಿ ಆಚರಿಸುತ್ತಾರೆ ತಿಳಿಯದು. ಆದರೆ, ಎಲ್ಲರೂ ತಮ್ಮ ಬದುಕಿನ ಹೀರೋ ಆದ ಅಪ್ಪ ನೆನೆಯುತ್ತಾರೆ, ಅವರೊಂದಿಗೆ ಸಂಭ್ರಮಿಸುತ್ತಾರೆ. ಆದರೆ, ಜೀವನದಲ್ಲಿ ಮಕ್ಕಳ ಪಡೆಯದ ಈ ವೈದ್ಯ ಸಾವಿರಾರು ಮಕ್ಕಳಿಗೆ ತಂದೆಯಾಗಿ ಸೇವೆ ಮಾಡುತ್ತಿದ್ದಾರೆ.

ಅವರ್ಯಾರು ಬೇರೆಯವರಲ್ಲ, ಡಾ. ಸುರೇಶ್ ಹನಗವಾಡಿ. ಡಾ. ಸುರೇಶ್ ಅವರು ಹಿಮೋಫಿಲಿಯಾ ನ್ಯೂನತೆಗೆ ಒಳಗಾದವರು. ಚಿಕ್ಕ ವಯಸ್ಸಿನಲ್ಲಿ ತಮ್ಮ ಸೋದರ ಮಾವನ ಇದೇ ನ್ಯೂನತೆಯಿಂದ ಮೃತಪಟ್ಟರು. ಅವರು ಮರಣ ಹೊಂದುವ ಮೊದಲು ಒಂದು ಮಾತು ಹೇಳಿದರು. “ಸುರೇಶ್ ನೀನು ವೈದ್ಯನಾಗಬೇಕು, ನನ್ನಂತೆ ಬೇರೆಯವರು ಚಿಕಿತ್ಸೆ ಇಲ್ಲದೇ ನರಳುವಂತಾಗ ಬಾರದು, ದಾವಣಗೆರೆಯಲ್ಲಿ ಚಿಕಿತ್ಸೆ ಸಿಗುವಂತೆ ನೀನು ಕೆಲಸ ಮಾಡಬೇಕು” ಎಂದು ಹೇಳಿದ ನುಡಿಯೇ ಅವರನ್ನು ಉನ್ನತ ಸ್ಥಾನಕ್ಕೆ ಇಂದು ಕರೆತಂದಿದೆ.

ದಾವಣಗೆರೆಯ ಎಸ್‌ ನಿಜಲಿಂಗಪ್ಪ ಬಡಾವಣೆಯಲ್ಲಿನ ಕರ್ನಾಟಕ ಹಿಮೋಫಿಲಿಯಾ ಸೊಸೈಟಿ

ಸ್ವತಃ ಡಾ. ಸುರೇಶ್ ಅವರು ವೈದ್ಯ ಪದವಿ ವ್ಯಾಸಂಗದ ವೇಳೆ ಬಾಧೆಯಿಂದಾಗಿ ಸಾಕಷ್ಟು ಬಾರಿ ಕಾಲೇಜಿಗೆ ಗೈರಾಗಿದ್ದಾರೆ. ತಮ್ಮ ನೋವನ್ನು ಇತರರೊಂದಿಗೆ ಹೇಳಿಕೊಳ್ಳಲು ಹಿಂಜರುತ್ತಿದ್ದ ಅವರು ಇಂದು ಸಾವಿರಾರು ಮಕ್ಕಳಿಗೆ ಮನೋಸ್ಥೈರ್ಯ ತುಂಬುತ್ತಿದ್ದಾರೆ. ತಮ್ಮ ಬಳಿಗೆ ಬಂದಂಥ ಹಿಮೋಫಿಲಿಯಾ ಬಾಧಿತ ಮಕ್ಕಳನ್ನು ತಮ್ಮ ಹೊಟ್ಟೆಯಲ್ಲೇ ಹುಟ್ಟಿದ ಮಕ್ಕಳಂತೆ ನೋಡಿಕೊಳ್ಳುತ್ತಿದ್ದಾರೆ.

ಹಿಮೋಫಿಲಿಯಾ ಬಾಧಿತರಿಗೆ ಸುಲಭ, ಸರಳವಾಗಿ ಚಿಕಿತ್ಸೆ ತೊಂದರೆ ಬೇಕೆಂಬ ಹಂಬಲದಿಂದ ತಮ್ಮ ನೋವನ್ನು ಮರೆತು ದೇಶ- ವಿದೇಶದ ದೊಡ್ಡ ಆಸ್ಪತ್ರೆಗಳಿಗೆ ಹೋಗಿ ಆಧುನಿಕ ಚಿಕಿತ್ಸಾ ವಿಧಾನಗಳನ್ನು ಕಲಿತು ಮಕ್ಕಳ ನೋವಿನಿಂದ ಗುಣಮುಖರಾಗುವಂತೆ ಮಾಡಲು ಶ್ರಮಿಸುತ್ತಿದ್ದಾರೆ.

ಆರಂಭದಲ್ಲಿ ಕೆಲವು ಮಂದಿ ಮಾತ್ರ ಸಂಪರ್ಕಕ್ಕೆ ಬಂದಿದ್ದರು. ಕ್ರಮೇಣ ನೂರು, ನೂರಿಂದ ಸಾವಿರ ಸಂಖ್ಯೆಯ ಹಿಮೋಫಿಲಿಯಾ ಬಾಧಿತರು ತಮ್ಮ ಬಳಿಗೆ ಬಂದಿದ್ದಾರೆ. ಅವರಿಗಾಗಿಯೇ ದಾವಣಗೆರೆಯ ಎಸ್‌ ನಿಜಲಿಂಗಪ್ಪ ಬಡಾವಣೆಯಲ್ಲಿ ಕರ್ನಾಟಕ ಹಿಮೋಫಿಲಿಯಾ ಸೊಸೈಟಿ ಆರಂಭಿಸಿದ್ದಾರೆ. ಅನೇಕ ದಾನಿಗಳು, ಸಮಾನ ಮನಸ್ಕರರು ಅವರ ಬೆಂಬಲವಾಗಿ ನಿಂತಿದ್ದಾರೆ. ಅವರ ಧರ್ಮಪತ್ನಿ ಮೀರಾ ಹನಗವಾಡಿ ಅವರೂ ಸಹ ಸಾಥ್ ನೀಡುತ್ತಿದ್ದಾರೆ. ಸಾವಿರಾರು ಮಕ್ಕಳ ಆರೋಗ್ಯಕ್ಕಾಗಿ ತಮ್ಮ ಬದುಕನ್ನು ಮೀಸಲಿಟ್ಟ ಈ ವೈದ್ಯನಿಗೆ ತಂದೆಯ ಸ್ಥಾನ ಕೂಡುವುದೇ ಹೆಮ್ಮೆಯ ಸಂಗತಿ.

 ವಿ ಲವ್ ಯೂ ಸರ್…

ಸುದ್ದಿದಿನ|ವಾಟ್ಸಾಪ್|9986715401

Leave a Reply

Your email address will not be published. Required fields are marked *

Trending

Exit mobile version