ದಿನದ ಸುದ್ದಿ

ಹರಿಹರ | ಸಕಾರಾತ್ಮಕ ಚಿಂತನೆ ಉತ್ತಮ ಆರೋಗ್ಯದ ಮದ್ದು : ಪ್ರಾಂಶುಪಾಲ ಡಾ. ರಮೇಶ್ ಎಂ.ಎನ್

Published

on

ಸುದ್ದಿದಿನ,ಹರಿಹರ:ಸಕಾರಾತ್ಮಕ ಚಿಂತನೆಗಳನ್ನು ಯುವಕರು ಒಳಗೊಂಡಾಗ ಮಾತ್ರ ಆರೋಗ್ಯವಾಗಿ ಇರಲು ಸಾಧ್ಯ, ಇಂದಿನ ಆಹಾರದಲ್ಲಿ ಹಾಗೂ ಬದುಕಿನಲ್ಲಿ ಬದಲಾವಣೆಗಳಿಂದ ಮನುಷ್ಯ ಅನಾರೋಗ್ಯಕ್ಕೆ ಒಳಗಾಗುತ್ತಿದ್ದಾನೆ ಎಂದು ಕಾಲೇಜಿನ ಪ್ರಾಂಶುಪಾಲರಾದ ಡಾ. ರಮೇಶ್ ಎಂ.ಎನ್ ರವರು ಅಭಿಪ್ರಾಯಪಟ್ಟರು.

ಯುವಜನರು ಆರೋಗ್ಯವಾಗಿದ್ದಾಗ ಮಾತ್ರ ಭಾರತ ದೇಶ ಆರೋಗ್ಯವಾಗಿರುತ್ತದೆ ಹಾಗಾಗಿ ಯುವ ಜನತೆ ಹೆಚ್ಚು ಆರೋಗ್ಯದ ಕಡೆಗೆ ಒತ್ತನ್ನು ಕೊಡಬೇಕು ಎಂದರು. ಸರ್ಕಾರಿ ಪ್ರಥಮ ದರ್ಜೆ ಕಾಲೇಜು, ಹರಿಹರದಲ್ಲಿ ಸಮಾಜಶಾಸ್ತ್ರ ವಿಭಾಗದಿಂದ ಆಯೋಜಿಸಲಾಗಿದ್ದ ವಿಶ್ವ ಆರೋಗ್ಯ ದಿನಾಚರಣೆಯನ್ನು ಕುರಿತು ಮಾತನಾಡಿದರು.

“ಆರೋಗ್ಯ ಮತ್ತು ಯುವಜನತೆ” ಎಂಬ ವಿಷಯವನ್ನು ಕುರಿತು ವಿಶೇಷ ಉಪನ್ಯಾಸ ನೀಡಿದ ಪತ್ರಿಕೋದ್ಯಮ ಉಪನ್ಯಾಸಕರಾದ ಹುಚ್ಚಂಗಿ ಪ್ರಸಾದ್ ರವರು ಮಾತನಾಡುತ್ತಾ ಮನುಷ್ಯನಿಗೆ ದಹಿಕ ಆರೋಗ್ಯ, ಮಾನಸಿಕ ಆರೋಗ್ಯ, ಸಾಮಾಜಿಕ ಆರೋಗ್ಯ, ಆರ್ಥಿಕ ಆರೋಗ್ಯ, ಆಧ್ಯಾತ್ಮಿಕ ಆರೋಗ್ಯ, ಸಮುದಾಯ ಆರೋಗ್ಯ,ಪರಿಸರ ಆರೋಗ್ಯ,ಇವುಗಳು ಅವಶ್ಯಕವಾಗಿ ಬೇಕಾಗುತ್ತದೆ, ಇದರಲ್ಲಿ ಒಂದೂ ಇರದಿದ್ದರೆ ಮನುಷ್ಯ ಒಂದಲ್ಲ ಒಂದು ರೀತಿಯಲ್ಲಿ ಅನಾರೋಗ್ಯಕ್ಕೆ ತುತ್ತಾಗುತ್ತಾನೆ ಎಂದರು.

ಅಲ್ಲದೆ ಇವತ್ತು ವಿಶ್ವದಲ್ಲಿ ಅತಿ ಹೆಚ್ಚು ಸಾಯುತ್ತಿರುವವರು ಯುವ ಜನತೆ, ಕಾರಣ ಮಧ್ಯಪಾನ, ಧೂಮಪಾನ, ದುಶ್ಚಟಗಳು, ಅಸುರಕ್ಷಿತ ಲೈಂಗಿಕ ಸಂಪರ್ಕ, ಇವುಗಳಿಂದ ಅನೇಕ ರೋಗಗಳಿಗೆ ಯುವಜನತೆ ತುತ್ತಾಗುತ್ತಿರುವುದು ವಿಷಾಧನೀಯ ಎಂದು ಕಳವಳ ಪಟ್ಟರು,

ಯುವಕರ ಆರೋಗ್ಯದ ಮೇಲೆ ಭಾರತದ ಭವಿಷ್ಯ ನಿಂತಿದೆ ಭಾರತ ಬೆಳಗಬೇಕೆಂದರೆ ಯುವಕರು ಆರೋಗ್ಯವಂತರಾಗಿ ಸಾಧನೆಯ ಹಾದಿ ಹಿಡಿಯಬೇಕು, ಇಂದಿನ ಜಿಂಕ್ ಫುಡ್ ಬೀದಿಬದಿಯ ತಿಂಡಿ ತಿನಿಸುಗಳಿಂದ ಸಾಂಕ್ರಾಮಿಕ ರೋಗಕ್ಕೆ ಜನತೆ ತುತ್ತಾಗುತ್ತಿರುವುದು ವಿರುದ್ಧ ನಾವೆಲ್ಲರೂ ಜಾಗೃತಿ ಮೂಡಿಸಬೇಕಾಗಿದೆ ಎಂದು ಅಭಿಪ್ರಾಯಪಟ್ಟರು.

ಕಾರ್ಯಕ್ರಮದಲ್ಲಿ ಐಕ್ಯೂಎಸ್ಸಿ ಮುಖ್ಯಸ್ಥರು ಹಾಗೂ ವಾಣಿಜ್ಯಶಾಸ್ತ್ರದ ವಿಭಾಗದ ಮುಖ್ಯಸ್ಥರಾದ ಡಾ. ಅನಂತನಾಗ್. ಸಮಾಜಶಾಸ್ತ್ರದ ಉಪನ್ಯಾಸಕರಾದ ಡಾ.ತೇಜಶ್ವಿನಿ,ಜೆಎಸ್.ಪ್ರಾಸ್ತಾವಿಕ ಮಾತನಾಡಿದರು, ಇತಿಹಾಸ ಉಪನ್ಯಾಸಕರಾದ ರಾಜಪ್ಪ,ಲತಾ ನಿರೂಪಿಸಿದರು,ಭೂಮಿಕಾ ಗಿರಿಜಾ ಪ್ರಾರ್ಥಿಸಿದರು,ಅಕ್ಷತಾ ಸ್ವಾಗತಿಸಿದರು,ಕವಿತಾ ವಂದಿಸಿದರು ಸಮಾಜ ಶಾಸ್ತ್ರದ ವಿದ್ಯಾರ್ಥಿಗಳು ಭಾಗವಹಿಸಿದ್ದರು.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Trending

Exit mobile version