ದಿನದ ಸುದ್ದಿ
ದಾವಣಗೆರೆ | ಯೋಗ ಫ್ರಮ್ ಹೋಂ
ಸುದ್ದಿದಿನ,ದಾವಣಗೆರೆ : ಜೂ.21 ರಂದು ಅಂತರಾಷ್ಟ್ರೀಯ ಯೋಗ ದಿನಾಚರಣೆ ಆಚರಿಸುವುದು ವಾಡಿಕೆಯಾಗಿರುತ್ತದೆ.ಆದರೆ ಪ್ರಸ್ತುತ್ತ ಸಾಲಿನಲ್ಲಿ ಕೋವಿಡ್-19 ಮಹಾಮಾರಿ ಕಾರಣದಿಂದ ಸಾಮಾಜಿಕ ಅಂತರ ಕಾಯ್ದುಕೊಳ್ಳುವ ದೃಷ್ಠಿಯಿಂದ ಈ ಸಾಲಿನಲ್ಲಿ ಯೋಗ ಫ್ರಮ್ ಹೋಮ್ ಎಂಬ ಘೋಷ ವಾಕ್ಯದೊಂದಿಗೆ ಮನೆಯಿಂದಲೇ ಯೋಗ ಕಾರ್ಯಕ್ರಮದಲ್ಲಿ ಭಾಗವಹಿಸಲು ಭಾರತ ಸರ್ಕಾರದ ಆಯುಷ್ ಮಂತ್ರಾಲಯವು ಸೂಚಿಸಿರುತ್ತದೆ.
ಕೋವಿಡ್-19 ಮುಂಜಾಗ್ರತಾ ಕ್ರಮವಾಗಿ ಗೈಡ್‍ಲೈನ್ಸ್ ಫಾರ್ ನ್ಯಾಚುರೋಪತಿ ಪ್ರಾಕ್ಟಿಷ್‍ನರ್ಸ್ ಫಾರ್ ಕೋವಿಡ್-19 ಸೂಚಿಯಲ್ಲಿ “ ಸ್ಟ್ರೆಸ್ ಅಂಡ್ ಆಂಗ್ಸೈಟಿ ಡಿಪ್ರೆಷನ್ ನಿವಾರಣೆಗಾಗಿ ಯೋಗ ಥೆರಫಿ ಮಾಡಲ್‍ಗಳನ್ನು ಅನುಸರಿಸಲು ಆಯುಷ್ ಮಂತ್ರಾಲಯವು ಸೂಚಿಸಿದೆ.
ಈ ಹಿನ್ನೆಲೆಯಲ್ಲಿ ಜಿಲ್ಲೆಯ ಎಲ್ಲಾ ಯೋಗಾಸಕ್ತರು, ಯೋಗ ಒಕ್ಕೂಟ, ಸಂಘ ಸಂಸ್ಥೆಗಳು ಸಾರ್ವಜನಿಕರ ಗಮನಕ್ಕೆ ಈ ವಿಷಯವನ್ನು ತರುತ್ತಾ ಮನೆಯಿಂದಲೇ ಯೋಗ ಕಾರ್ಯಕ್ರಮದಲ್ಲಿ ಭಾಗವಹಿಸಿ ಈ ಕಾರ್ಯಕ್ರಮವನ್ನು ಆಚರಿಸಲು ಮತ್ತು ಯಶಸ್ವಿಗೊಳಿಸಲು ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಆಯುಷ್ ಇಲಾಖೆ, ಜಿಲ್ಲಾ ಯೋಗ ಒಕ್ಕೂಟ ದಾವಣಗೆರೆ ಹಾಗೂ ಇನ್ನಿತರೆ ಯೋಗಸಕ್ತ ಸಂಘ ಸಂಸ್ಥೆಗಳ ಪರವಾಗಿ ಸಾರ್ವಜನಿಕರಲ್ಲಿ ಕೇಳಿಕೊಳ್ಳಲಾಗುವುದೆಂದು ಜಿಲ್ಲಾ ಆಯುಷ್ ಕಚೇರಿಯ ಡಾ.ಶಂಕರಗೌಡ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಸುದ್ದಿದಿನ.ಕಾಂ|ವಾಟ್ಸಾಪ್|9980346243