ಸಿನಿ ಸುದ್ದಿ
ಭಟ್ಟರ ಟ್ವಿಟರ್ ನಲ್ಲಿ ಅಂಬಿ ಫೋಟೋ : ಟ್ಯಾಗ್ ಲೈನ್ ಗೆ ಆಭಿಮಾನಿಗಳು ಫಿದಾ..!
ಸುದ್ದಿದಿನ ಡೆಸ್ಕ್ : ಪಂಚತಂತ್ರ ಸಿನಿಮಾ ಶೂಟಿಂಗ್ ಶುರುಮಾಡಿದ್ದೇ ತಡ ಯೋಗರಾಜ್ ಭಟ್ರು ಸೋಶಿಯಲ್ ಮೀಡಿಯಾಗಳಲ್ಲಿ ಫುಲ್ ಆಕ್ಟೀವ್ ಆಗಿದ್ದಾರೆ. ಟ್ವಿಟರ್ ಮತ್ತು ಫೇಸ್ ಬುಕ್ ನಲ್ಲಿ ಭಟ್ರು ಆಗಾಗ ನಾಲ್ಕು ಸಾಲಿನ ಪದ್ಯಗಳನ್ನು ಹಾಕೋ ಅಭ್ಯಾಸ ಮಾಡ್ಕೊಂಡಿದ್ರು. ಇತ್ತೀಚೆಗೆ ಚಂದನವನದ ವಿಶೇಷ ಫೋಟೋಗಳನ್ನ ಅಪ್ ಲೋಡ್ ಮಾಡಲು ಶುರುವಿಟ್ಟಿದ್ದಾರೆ.
ಕೆಲ ದಿನಗಳ ಹಿಂದೆ ಅಪ್ಪು ನ ಬಾಲಕೃಷ್ಣ ಅವತಾರದ ಫೋಟೋ ಅಪ್ ಲೋಡ್ ಮಾಡಿದ್ರು ಭಟ್ರು. ಈಗ ಅಂಬಿ ಕುಟುಂಬದ ಫೋಟೋ ಹಾಕಿ ಅದಕ್ಕೊಂದು ಟ್ಯಾಗ್ ಲೈನ್ ಹಾಕಿ ಟ್ವಿಟರ್ ನಲ್ಲಿ ಫುಲ್ ಹಾವಳಿ ಇಟ್ಟಿದ್ದಾರೆ ಸ್ತ್ರೀತಜ್ಞ ಭಟ್ರು.
ಭಟ್ರು ಅಂಬಿ ನಾ ‘ಡ್ರಾಮ’ ಸಿನೆಮಾದಲ್ಲಿ ‘ಗೊಂಬೆ ಆಡ್ಸೋನು’ ಅಂತ ಹಾಡಿಸಿದ್ರು. ಹಾಗೇ ಅಂಬಿ ಹುಟ್ಟು ಹಬ್ಬಕ್ಕೆ ಒಂದ್ ಸ್ಪೆಷಲ್ ಸಾಂಗ್ ಬರ್ದು ಹರಿಕೃಷ್ಣ ಅವ್ರ್ ಹತ್ರ ಟ್ರೆಂಡಿ ಟ್ಯೂನ್ ಮಾಡ್ಸಿ ಪ್ರೀತಿಯ ನಟನಿಗೆ ಭಿನ್ನವಾಗಿ ಶುಭಕೋರಿದ್ರು.
ಈಗ ಭಟ್ರು ಅಂಬಿ ಪ್ಯಾಮಿಲಿ ಫೋಟೋನ ತಮ್ಮ ಟ್ವಿಟರ್ ನಲ್ಲಿ ಅಪ್ ಲೋಡ್ ಮಾಡಿ ಅದಕ್ಕೆ ‘ ರೆಬೆಲ್, ಲೇಡಿ ರೆಬೆಲ್, ಮರಿ ರೆಬೆಲ್’ ಅಂತ ಟ್ಯಾಗ್ ಲೈನ್ ಕೊಟ್ಟು ತಮ್ಮ ಖುಷಿನಾ ಹಂಚ್ಕೊಂಡಿದಾರೆ. ಅಂದಹಾಗೆ ಈ ಪೋಸ್ಟ್ ಅನ್ನ ತುಂಬಾ ಅಭಿಮಾನಿಗಳು ಮೆಚ್ಚಿಕೊಂಡಿದ್ದು, ಕಾಮೆಂಟ್ಗಳ ಸುರಿ ಮಳೆಗೈದಿದ್ದಾರೆ.
ಭಟ್ಟರ ಟ್ವೀಟ್….
ರೆಬೆಲ್
ಲೇಡಿ ರೆಬೆಲ್
ಮರಿ ರೆಬೆಲ್😍😍😍 pic.twitter.com/GILDqQj9xU
— Yogaraj Bhat (@yogarajofficial) June 6, 2018