ರಾಜಕೀಯ
ಎಲ್ರೂ ರಾತ್ರಿ ಕನಸು ಕಂಡ್ರೆ, ಯಡಿಯೂರಪ್ಪ ಹಗಲು ಕನಸು ಕಾಣ್ತಿದಾರೆ : ಸಚಿವ ಜಮೀರ್ ಅಹಮದ್
ಸುದ್ದಿದಿನ, ಹಾವೇರಿ : ಮೈತ್ರಿ ಸರ್ಕಾರವನ್ನು ಕೆಡುವಲು ಬಿಜೆಪಿ ವಿಫಲ ಯತ್ನ ಮಾಡುತ್ತಿದೆ. ಅಂದು ಮುಖ್ಯಮಂತ್ರಿಯಾಗಿದ್ದ ಯಡಿಯೂರಪ್ಪಗೆ ಏಳು ಜನ ಶಾಸಕರ ಅವಶ್ಯಕತೆ ಇತ್ತು.ಆಗಾಗಲೇ ಸರ್ಕಾರ ಉಳಿಸಿಕೊಳ್ಳಲು ಆಗಲಿಲ್ಲ ಈಗ ಸರ್ಕಾರ ರಚನೆ ಮಾಡುತ್ತಾರ? ಎಂದು ಹಾವೇರಿಯಲ್ಲಿ ಸಚಿವ ಜಮೀರ್ ಅಹಮದ್ ಖಾನ್ ಕಿಡಿಕಾರಿದರು.
ಮೊನ್ನೆ ಮೊನ್ನೆ ಶಾಸಕರನ್ನು ಮುಂಬಯಿನ ಹೋಟೆಲ್ ನಲ್ಲಿ ಇಟ್ಟಿದ್ದರು. ಒಂದು ದಿನಕ್ಕೆ ರೆಸಾರ್ಟ್ ಬಾಡಿಗೆ ಅಂತಾ ಒಂದುವರೆ ಕೋಟಿ ಹಣ ವ್ಯಯ ಮಾಡಿದ್ದಾರೆ. ಒಟ್ಟು ಏಳು ದಿನ ರೆಸಾರ್ಟ್ ನಲ್ಲಿ ಇದ್ದರು ಅಂದರೆ 12 ರಿಂದ 13 ಕೋಟಿ ಹಣ ವ್ಯಯ ಮಾಡಿದ್ದಾರೆ. ಆ ಹಣದಲ್ಲಿ ಒಂದು ಜಿಲ್ಲೆಯ ಸಮಸ್ಯೆಗಳನ್ನು ಸರಿಪಡಿಸ ಬಹುದಿತ್ತು ಎಂದು ಹೇಳಿದರು.
ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಿದಾಗ ಒಂದು ವಾರ ಪೂರ್ತಿ ನಾನು ಮುಖ್ಯಮಂತ್ರಿ ಆಗಿದ್ದೆ ಅಂತಾ ಯಡಿಯೂರಪ್ಪ ಕನವರಿಸುತ್ತಿದ್ದರು ಎಂದು ಅವರ ಆಪ್ತ ಸಹಾಯಕರೇ ಹೇಳಿದ್ದಾರೆ. ಎಲ್ಲರು ರಾತ್ರಿ ಕನಸು ಕಂಡ್ರೆ ಯಡಿಯೂರಪ್ಪ ಹಗಲು ಕನಸು ಕಾಣುತ್ತಿದ್ದಾರೆ ಎಂದು ವ್ಯಂಗವಾಡಿದರು.
ಹಗಲು ಕನಸನ್ನು ಕಾಣೊದು ಬಿಟ್ಟು ಅಭಿವೃದ್ಧಿ ಕಡೆ ಗಮನ ಕೊಡಲಿ. ಶಾಸಕರಲ್ಲಿ ಅಸಮದಾನ ವಿದೆ ಇದನ್ನು ನಾವು ಸರಿ ಪಡಿಸಿಕೊಳ್ಳುತ್ತೇವೆ. ನಮ್ಮ ಸರ್ಕಾರ ಐದು ವರ್ಷ ಸುಭದ್ರವಾಗಿ ಕೆಲಸ ಮಾಡುತ್ತೆ. ಕುಮಾರಸ್ವಾಮಿಯವರೆ ಐದು ವರ್ಷ ಮುಖ್ಯಮಂತ್ರಿಯಾಗುತ್ತಾರೆ ಎಂದು ನುಡಿದರು.
ಸುದ್ದಿದಿನ.ಕಾಂ|ವಾಟ್ಸಾಪ್|9986715401