ಅಂತರಂಗ
ನಮ್ಮನ್ನು ಬಿಟ್ಟು ಬುದ್ಧನ ಬಳಿ ಹೋದರು ಬಾಬಾಸಾಹೇಬರು
- ರಾಣಪ್ಪ ಡಿ ಪಾಳಾ
ಆ ದಿನ ಡಿಸೆಂಬರ್ 5 ರಂದು ಬಾಬಾಸಾಹೇಬರು ಬೆಳಿಗ್ಗೆ ಒಂಬತ್ತು ಗಂಟೆಗೆ ಎದ್ದ ಬಾಬಾಸಾಹೇಬ ಅಂಬೇಡ್ಕರ ರವರು ಆ ರಾತಿ ತುಸು ಹೆಚ್ಚು ನಿದ್ದೆ ಮಾಡಿದ್ದರು ಅವರ ಆಪ್ತ ಸಹಾಯಕ ನಾನಕ್ ಚಂದ ರತ್ತುಗೆ ಕೆಲಸ ಹೆಚ್ಚಾಗಿದ್ದ ಪಯುಕ್ತ ಆತ ರಾತ್ರಿ ಅಲ್ಲೇ ಉಳಿದುಕೊಂಡಿದ್ದ ಬೆಳಿಗ್ಗೆ ಬಾಬಾಸಾಹೇಬರು ಎದ್ದರು ನಂತರ ಆತನು ಸಿದ್ಧನಾಗಿ ಕಚೇರಿಗೆ ಹೋದ ಮಧ್ಯಾಹ್ನದ ಹೊತ್ತಿಗೆ ಬಾಬಾ ಡಾ.ಅಂಬೇಡ್ಕರ್‌ರವರ ಪತ್ನಿ ಸವಿತಾ ಅಂಬೇಡ್ಕರವರು ಮನೆಯ ಸಾಮಾನುಗಳನ್ನು ತರಲು ಮಾರುಕಟ್ಟೆಗೆ ಹೋದರು. ಅವರೊಂದಿಗೆ ಡಾ. ಮಾಧವರಾವ ಮಾಲವಣಕರ್ ಕೂಡಾ ತೆರಳಿದ ತುಸು ಹೊತ್ತಿನ ನಂತರ ಬಾಬಾಸಾಹೇಬ್ ಡಾ.ಅಂಬೇಡ್ಕರ್‌ರವರು ಎರಡು ಮೂರು ಬಾಲ ಶಬ್ದ ಮಾಡಿ ಯಾರಲ್ಲೀ ಎಂದು ಕೂಗಿ ಕರೆದರು.
ಅಡುಗೆ ಸಹಾಯಕ ಸುಧಾಮ ಒಂದಾಗ. ಅವನ ಸಹಾಯ ಪಡೆದು ಬಾಥ್ ರೂಮಿಗೆ ಹೋಗಿ ಬಂದರು ಸ್ವಲ್ಪ ಹೊತ್ತಿನ ನಂತರ ಚಹಾವನ್ನು ತರಸಿ ಕುಡಿದರು. ಒಂದುವರೆ ಗಂಟೆಯ ಬಳಿಕ ಅವರು ತಮ್ಮ ಪತ್ನಿಯನು ವಿಚಾರಿಸಿದರು. ಅವರೂ ಮಾರುಕಟ್ಟೆಯಿಂದ ಇನ್ನೂ ಬಂದಿರಲಿಲ್ಲ. ಅವರು ಮಲಗಿ ಏಳುವ ಹೊತ್ತಿಗೆ ಸಂಜೆಯಾಗಿತ್ತು. ರತ್ತು ಬಂದಿದ್ದ. ಬಾಬಾಸಾಹೇಬ್ ಡಾ. ಅಂಬೇಡ್ಕರ್‌ರವರು ನೀಡಿದೆ ಟೈಪಿಂಗ್ ಸಾಮಗ್ರಿಯನ್ನು ಪಡೆದುಕೊಂಡು ಆತ ಹೊರ ಕೋಣೆಗೆ ಹೋದರು.
ಸಾಯಂಕಾಲ 5 ಗಂಟೆಗೆ ಇಬ್ಬರು ಜೈನ ಮುಖಂಡರು ಬಾಬಾಸಾಹೇಬರನ್ನು ಕಾಣ ಬಿ ಬಂದಿದ್ದರು. ಅವರು ಈ ಮುಂಚೆಯೆ ಬಾಬಾಸಾಹೇಬರನ್ನು ಭೇಟಿಯಾಗಲು ಅಪರ ಆಪಸಹಾಯಕ ರತ್ತುರವರಿಂದ ಪೂರ್ವಾನುಮತಿಯನ್ನು ಪಡೆದ ಪ್ರಯುಕ್ತ ಭೇಟಿಯಾಗಲು ಅವಕಾಶ ನೀಡಲಾಯಿತು ಬಂದಂತಹ ಅತಿಥಿಗಳ ಜೊತೆ ಮಾತನಾಡುತ್ತ ತಮ್ಮನ್ನು ಭೇಟಿಯಾಗಲು ಬಂದ ಉದ್ದೇಶವನ್ನು ಕೇಳಿದರು ಅವರಾಲೋಗವನ್ನು ವಿಚಾರಿಸಿದ ನಂತರ ಬೌದಥಮ ಮತ್ತು ಜೈನಧರ್ಮದ ಬಗ್ಗೆ ಕೆಲವು ಮುಖ್ಯವಾದ ಪ್ರಶ್ನೆಗಳನ್ನು ಕೇಳಿ ತಮ್ಮ ಅನುಮಾನವನ್ನು ಪರಿಹರಿಸಿಕೊಂಡರು.
ನಂತರ ಮಾತನಾಡುತ್ತ , ಬಾಬಾಸಾಹೇಬರನ್ನು ಕುರಿತು ನಾಳೆ ನಮ್ಮ ಜೈನ ಮುನಿಗಳು ಬರುತ್ತಾರೆ ,ಅವರು ಹಲವು ವಿದ್ವಾಂಸರೊಂದಿಗೆ ಬೌದ್ಧಧಮ್ರ ಮತ್ತು ಜೈನ ಧರ್ಮ ಇವೆರಡರಲ್ಲೂ ಇರುವ ಸಾಮಾನ್ಯ ವಿಷಯಗಳ ಬಗ್ಗೆ ಚರ್ಚಿಸಲು ಸೂಚಿಸಿದ್ದಾರೆ ,ಪ್ರಯುಕ್ತ ನಾವೊಂದು ವೇದಿಕೆಯನ್ನು ಆಯೋಜನೆ ಮಾಡಿದ್ದೇವೆ. ದಯಮಾಡಿ ತಾವು ಬಂದು ಕಾರ್ಯಕ್ರಮದಲ್ಲಿ ಭಾಗವಹಿಸಬೇಕೆಂದು ಕೇಳಿಕೊಂಡರು.
ಆಗ ಬಾಬಾಸಾಹೇಬರು ತಮ್ಮ ಆರೋಗ್ಯ ಸರಿ ಇದ್ದರೆ ಖಂಡಿತ ಬರುವುದಾಗಿ ತಿಳಿಸಿದರು. ಹೋಗುವಾಗ ಜೈನ ಮುಖಂಡರು , ಶ್ರೀನತಾಲಿಯವರು ಬರೆದಿರುವ ” ಶ್ರಮಣ ಸಂಸತಿಯ ಎರಡು ಧಾರೆಗಳು ,ಜೈನ ಮತ್ತು ಬೌದ್ಧ ” ಎಂಬ ಪುಸ್ತಕದ ಪ್ರತಿಯನ್ನು ಕಾಣಿಕೆಯಾಗಿ ನೀಡಿದರು. ಅದನ್ನು ತಮ್ಮ ಮಂಚದ ಹತ್ತಿರ ಇಡಲು ರುರವರಿಗೆ ತಿಳಿಸಿದರು , ರುರವರು ಬಾಬಾಸಾಹೇಬರ ಕಾಲನ್ನು ಅದಮುತ್ತಾ ಕುಳಿತಿದ್ದರು.
ಸವಿತಾರವರು ಮಾರುಕಟ್ಟೆಯಿಂದ ತಡವಾಗಿ ಮನೆಗೆ ಬಂದಿದ್ದು ಬಾಬಾಸಾಹೇಬರಿಗೆ ತಿಳಿಯಿತು. ಅವರ ಕೋಪ ಎಲ್ಲೆ ಮೀರಿತ್ತು. ಪತ್ನಿ ಸವಿತಾರ ಮೇಲೆ ರೇಗಾಡಿದರು ,ಯಜಮಾನಿಯ ಅಸಹಾಯಕ ಮುಖವನ್ನು ನೋಡಲಾಗದ ರತ್ತು , ತಾನೆ ಮುಂದಾಗಿ ಡಾ.ಬಾಬಾಸಾಹೇಬರಿಗೆ ಸಮಾಧಾನ ಹೇಳಲು ಹೋದ ರತ್ತುಎನ ಮೇಲೂ ಬಾಬಾಸಾಹೇಬರು ಹರಿಹಾಯ್ದರು , ಆಗ ರತ್ತು ಯಾವುದೆ ಪ್ರತಿಕ್ರಿಯೆಯನ್ನು ನೀಡದೆ ಮೌನಕ್ಕೆ ಶರಣಾದ. ಪೂರ್ವ ನಿರ್ಧಾರದಂತೆ ಡಾ. ಮಾಳವಾಣಕರ್ ಆ ರಾತ್ರಿ ಮುಂಬೈಗೆ ಹೊರಡಲು ರೈಲ್ವೆ ನಿಲ್ದಾಣಕ್ಕೆ ತೆರಳಿದರು.
ಅಷ್ಟೊತ್ತಿಗೆ ಬಾಬಾಸಾಹೇಬರಿಗೆ ಆಯಾಸವಾಗಿತ್ತು. ತಮ್ಮ ತಲೆಗೆ ಎಣ್ಣೆ ಹಚ್ಚಲು ರತ್ತುಗೆ ತಿಳಿಸಿದರು. ರತ್ತು ಎಣ್ಣೆ ಹಚ್ಚುತ್ತಿರುವಾಗಲೆ ಅವರು “ ಬುದ್ದಂ ಸರಣಂ ಗಚ್ಚಾಮಿ , ಧಮ್ಮಮ್ ಸರಣಂ ಗಚ್ಚಾಮಿ, ಸಂಗಮ್ ಸರಣಂ ಗಚ್ಛಾಮಿ, ಎಂದು ಸರಣ ಮತ್ತು ಪಂಚ ಶೀಲಗಳನ್ನು ಗುಣಗುತ್ತಿದ್ದರು. ಅದನ್ನು ರೇಡಿಯೋಗ್ರಾಂನಲ್ಲಿ ನುಡಿಸಲು ಹೇಳಿದರು. ಬಾಬಾಸಾಹೇಬರು ಆದರೊಂದಿಗೆ ದನಿಗೂಡಿಸಿದರು.
ರಾತ್ರಿ ಅಡುಗೆ ಸಿದ್ಧವಾಗಿದೆ ಎಂದು ಎರಡನೆ ಸಾರಿಯ ಕರೆ ಬಂದಾಗ ಅವರು ಎದ್ಧರು. ಊಟದ ಮೇಜಿನ ಬಳಿ ಹೋಗುವಾಗಲೆ , ಸ್ವಲ್ಪ ದೂರದಲ್ಲಿದ್ದ ಒಂದೆರಡು ಕಪಾಟುಗಳ ಬಳಿ ಹೋಗಿ ನಾಲ್ಕಾರು ಪುಸ್ತಕಗಳನ್ನು ಎತ್ತಿಕೊಂಡು, ರತ್ತುಗೆ ಕೊಟ್ಟು , ಅವುಗಳನ್ನು ತಾವು ಮಲಗುವ ಮಂಚದ ಪಕ್ಕದಲ್ಲಿ ಇರುವ ಟೇಬಲ್ ಮೇಲಿಡಲು ಸೂಚಿಸಿದರು.
ಬಾಬಾಸಾಹೇಬರು ಸ್ವಲ್ಪ ಊಟ ಮಾಡಿದರು , ಊಟದ ನಂತರ ಹಣೆ ಒತ್ತಲು ರತ್ತುಗೆ ಹೇಳಿದರು.ಅದಾದ ಬಳಿಕ ಅವರು ಎದ್ದು ಕಬೀರದಾಸರ “ ಚಲ್ ಕಬೀರಾ ತೆರಾ ಬವ ಸಾಗರ್ ದೇರಾ ” ಎಂಬ ದೋಹೆಯನ್ನು ಸಣ್ಣದಾಗಿ ಹಾಡಿಕೊಳ್ಳುತ್ತಾ ಮಲಗುವ ಕೋಣೆಯನ್ನು ಪ್ರವೇಶಿಸಿದರು. ಕಪಾಟುಗಳಿಂದ ತಂದಿದ್ದ ಪುಸ್ತಕಗಳನ್ನು ಅರ್ಧ ಗಂಟೆ ಕಾಲ ತಿರುವಿ ಹಾಕಿದರು.
ಬಾಬಾಸಾಹೇಬ್ ಡಾ.ಅಂಬೇಡ್ಕರ್‌ರವರು ಅಂದು ಮಲಗಿ ಕೊಂಡಾಗ ರಾತ್ರಿ 11 :45 ನಿಮಿಷವಾಗಿತ್ತು , ರತ್ತು ಪಕ್ಕದಲ್ಲೇ ಇದ್ದ. ಹಿಂದಿನ ದಿನ ರಾತ್ರಿ ಅವರು ತನ್ನ ಮನೆಗೆ ಹೋಗಿರಲಿಲ್ಲ . ಯಜಮಾನರಿಗೆ ನಿದ್ರೆ ಬರುವಂತೆ ಕಂಡಾಗ , ಮನೆಗೆ ಹೋಗಲು ಅನುಮತಿ ಪಡೆದು ಆತ. ಮನೆಗೆ ತೆರಳಿದ , ಅವರು ಇನ್ನೂ ತನ್ನ ಮನೆ ತಲುಪಿ ಮನೆಯೊಳಗೆ ಪ್ರವೇಶಿಸಿರಲಿಲ್ಲ , ಹಿಂದಿನಿಂದ ಸೈಕಲ್ ಮೇಲೆ ಬಂದ ಅಡುಗೆ ಭಟ್ಸ್ ಸುಧಾಮ ಯಜಮಾನರು ತಮಗೆ ಕರೆಯುತ್ತಿದ್ದಾರೆಂದು ಆಳಿಸಿದೆ. ಅವರಿಬ್ಬರೂ ಚುನಃ ತಿರುಗಿ ಮನೆಗೆ ಮರಳಿದರು.“ ಬುದ್ಧ ಮತ್ತು ಅವನ ಧಮ್ ” ಕೃತಿಗೆ
ಸಿದ್ದಪಡಿಸಿದ್ದ ಮುನ್ನುಡಿಯ ಪಕ್ಕಾ ಪ್ರತಿಯನ್ನು , ಅತ್ರೆ ಮತ್ತು ಜೋಷಿಗೆ ಬರೆದಿದ , ಹಾಗೂ ಬರ್ಮಾ ಸರ್ಕಾರಕ್ಕೆ ಬರೆದಿದ್ದ ಪತ್ರವನ್ನು ತಮ್ಮ ಟೇಬಲ್ ಮೇಲೆ ಇಡಲು ಬಾಬಾ ಸೂಚಿಸಿದರು. ರತ್ತು ಅವುಗಳನ್ನು ತಂದಿಟ್ಟು , ಮತ್ತೆ ಅನುಮತಿ ಪಡೆದು ತನ್ನ ಮನೆಗೆ ತೆರಳಿ ಸುಧಾಮ ಎಂದಿನಂತೆ ಟೇಬಲ್ ಮೇಲೆ ಕೆಲವೊಂದು ತಿನಿಸುಗಳನ್ನು ಮತ್ತು ಕಾಫಿ ತುಂಹಿತೆ ಪಾಸ್ ಇಟ್ಟನು. ಹಾಸಿಗೆ ಮೇಲೆ ಬಾಬಾಸಾಹೇಬರು ಮಲಗುತ್ತಲೇ ಅವರನ್ನು ಕಬಳಿಸಲು ಸಾವು ಹೊಂಚು ಹಾಕಿ ಕುಳಿತಿತ್ತು ಎಂಬುವುದು ಯಾರಿಗೂ ತಿಳಿದಿರಲಿಲ್ಲ.
6ನೇ ಡಿಸೆಂಬರ್ 1956ರ ಗುರುವಾರದಂದು ಬೆಳಗಿನ ಜಾವಾ ಎಂದಿನಂತೆ ಸವಿತಾ ಅಂಬೇಡ್ಕರ್‌ರವರು ಮುಂಚೆ ಎದ್ದರು. ಪತಿಯ ಕಡೆ ಕಣ್ಣು ಹಾಯಿಸಿದಾಗ ಅವರಿನ್ನೂ ಮಲಗಿದ್ದರು. ತೋಟದಲ್ಲಿ ಒಂದು ಸುತ್ತು ಹಾಕಿ ಬಂದು ನೋಡಿದರೆ, ಬಾಬಾಸಾಹೇಬ್ ಡಾ. ಅಂಬೇಡ್ಕರ್‌ರವರು ಇನ್ನೂ ಮಲಗಿದ್ದನ್ನು ಗಮನಿಸಿ , ಅವರನ್ನು ಎಬ್ಬಿಸಲು ಅನುವಾದರು . ಕೈ ಮುಟ್ಟುತ್ತಲೆ , ತಮ್ಮ ಪತಿಯ ಜೀವ ಹೊರಟು ಹೋಗಿದೆ ಎಂಬುವುದು ಅರಿವಿಗೆ ಬಂದು ,ಅವರು ಕುಸಿದು ಬಿದ್ದರು. ಸಾವರಿಸಿಕೊಂಡು ಸುಧಾಮನ ಮೂಲಕ ರತ್ತುಗೆ ಹೇಳಿ ಕಳುಹಿಸಿದರು. ರತ್ತು ತಡ ಮಾಡದೆ ಧಾವಿಸಿ ಬಂದು ಬಾಬಾಸಾಹೇಬರ ಮುಖ ನೋಡಿ , ಯಜಮಾನಿಯ
ದುಃಖ ಕಂಡು ಅವನಿಗೆ ಕರಳು ಕಿತ್ತು ಬಂದ ಹಾಗೆ ಆಗಿ ಜೋರಾಗಿ ಅಳಲು ಆರಂಬಿಸಿದನು.ಪತ್ನಿ ಸವಿತಾರವರು ಬಾಬಾಸಾಹೇಬರ ಕೈ ಕಾಲುಗಳನ್ನು ಉಜ್ಜಿದರು ತೋಳು ಮಡಚಲು ಯತ್ನಿಸಿದರು. ಬಾಯಿಯಲ್ಲಿ ತೊಟ್ಟು ನೀರು ಹಾಕಿದರು. ಯಾವುದೂ ಪ್ರಯೋಜನವಾಗಲಿಲ್ಲ.ಭಾರತದ ಭಾಗ್ಯವಿಧಾತ ಬಾಬಾಸಾಹೇಬ್ ಡಾ.ಅಂಬೇಡ್ಕರ್‌ರವರು ಪ್ರಾಣ ಪಕ್ಷಿ ರಾತ್ರಿ ಮಲಗಿದಾಗಲೆ ಹಾರಿ ಹೋಗಿತ್ತು.ಕಳೆದ ಎರಡು ವರ್ಷಗಳಿಂದ ಆಶಕ್ತವಾಗಿದ್ದ ಅವರ ಹೃದಯ ಬಡಿತವನ್ನು ನಿಲ್ಲಿಸಿ ಬುದ್ದನ ಪಾದಕ್ಕೆ ಸೇರಿದರು.
ಜೈಭೀಮ್
ಸುದ್ದಿದಿನ.ಕಾಂ|ವಾಟ್ಸಾಪ್|9980346243