ದಿನದ ಸುದ್ದಿ

ಟಿಬಿ ಡ್ಯಾಮ್ ಭರ್ತಿ: ಮಂತ್ರಾಲಯದಲ್ಲಿ ಮುಂಜಾಗ್ರತೆ ಕ್ರಮ

Published

on

ಸುದ್ದಿದಿನ ಡೆಸ್ಕ್: ಕರ್ನಾಟಕದ ಮಲೆನಾಡಿನಲ್ಲಿ ಹೆಚ್ಚು ಮಳೆ ಸುರಿಯುತ್ತಿರುವುದರಿಂದ ಹೊಸಪೇಟೆಯ ತುಂಗಭದ್ರಾ ಜಲಾಶಯ ತುಂಬುತ್ತಿದೆ. ಜಲಾಶಯಕ್ಕೆ ಗರಿಷ್ಠ ಮಟ್ಟಕ್ಕಿಂತ ಹೆಚ್ಚು ನೀರು ಬರುತ್ತಿದೆ. ಹೀಗಾಗಿ ಜಲಾಶಯದಿಂದ ನೀರು ಹೊರ ಬಿಡಲಾಗುತ್ತಿದೆ. ಆಂಧ್ರದ ಮಂತ್ರಾಲಯದಲ್ಲಿ ಮುಂಜಾಗ್ರತೆ ಕೈಗೊಳ್ಳುವಂತೆ ವಿಪತ್ತು ನಿರ್ವಹಣ ಘಟಕ ಸೂಚನೆ ನೀಡಿದೆ. ತುಂಗಭದ್ರಾ ಜಲಾಶಯ ಬಹುತೇಕ ಭರ್ತಿಯಾಗಿದ್ದು, ನೀರಿನ ಹರಿಯುವು ಹೆಚ್ಚಿದೆ. ಇನ್ನು ಮಂತ್ರಾಲಯಕ್ಕೆ ಶ್ರಾವಣ ಮಾಸದಲ್ಲಿ ಭಕ್ತರ ಸಂಖ್ಯೆ ಹೆಚ್ಚಿರುವ ಕಾರಣ  ಮಂತ್ರಾಲಯದಲ್ಲಿ ಮುಂಜಾಗ್ರತೆ ಕೈಗೊಳ್ಳುವಂತೆ ವಿಪತ್ತು ನಿರ್ವಹಣ ಘಟಕ ಸೂಚಿಸಿದೆ.

 

Leave a Reply

Your email address will not be published. Required fields are marked *

Trending

Exit mobile version