ಭಾವ ಭೈರಾಗಿ
ಕವಿತೆ | ಬರೇ ಒಂದು ಕ್ಷಣದ ನೋಟ
- ಮೂಲ – ಬಟೋ೯ಲ್ಟ್ ಬ್ರೆಕ್ಟ್, ಅನುವಾದ – ವಸಂತ ಬನ್ನಾಡಿ
‘ಬರೇ ಒಂದು ಕ್ಷಣದ ನೋಟ
ಅವಳನ್ನು ಸೆಳೆದಿರಬಹುದು
ನಾನು ಅವಳವನಾಗಿದ್ದು
ಅದೃಷ್ಟವೇ ಸರಿ’
‘ಹೀಗೆ ಕಾರಣವಿಲ್ಲದೆ
ನಾನವನ ಬದುಕನ್ನು ಪ್ರವೇಶಿಸಿದೆ
ಯಾವುದನ್ನೂ ಗಣಿಸದೆ
ಆತನ ಮಡದಿಯಾದೆ’
ಕಾಲವನ್ನು ಅದರ ಪಾಲಿಗೆ
ಸರಿಯಲು ಬಿಟ್ಟೆವು ನಾವು
ಕೊನೆ ಬರುವ ತನಕವು
ಓವರ್ ಕೋಟುಗಳನ್ನು ಧರಿಸಿಕೊಂಡೆವು
ಅಪ್ಪಿಕೊಂಡೆವು
ಮತ್ತು ದೂರಾದೆವು.
ಟಿಪ್ಪಣಿ : ಬ್ರೆಕ್ಟ್ ಪ್ರೇಮ ಕವಿತೆ ಬರೆಯಲಿಲ್ಲ ಎಂದಲ್ಲ.ಆದರೆ ಆತನ ಪ್ರೇಮ ಕವಿತೆ ಭಿನ್ನ ಬಗೆಯ ರಚನೆಗಳು. ಅಲ್ಲಿ ಭಾವುಕತೆ ಕಡಿಮೆ.ವಿಷಾದವೇ ಮುಖ್ಯ.ಆಗಿ ಹೋದ ಪ್ರೇಮವನ್ನು ಆತ ಹಿನ್ನೋಟದಲ್ಲಿ ನೋಡುವುದರಿಂದ ಹೀಗಾಗಿರಬಹುದು.ಈ ಕವಿತೆ ಅದಕ್ಕೊಂದು ಒಳ್ಳೆಯ ಉದಾಹರಣೆ.
ಸುದ್ದಿದಿನ.ಕಾಂ|ವಾಟ್ಸಾಪ್|9980346243