ಲೈಫ್ ಸ್ಟೈಲ್

ರೆಸಿಪಿ‌ : ಸಾಂಪ್ರದಾಯಿಕ ತಿನಿಸು ‘ಚಕ್ಕುಲಿ’ ಮಾಡೋದು ಹೀಗೆ ನೋಡಿ

Published

on

  • ಶಶಿಕಲಾ ಸುನೀಲ್, ಗಾಯಕಿ, ಬೆಂಗಳೂರು

ಬೇಕಾಗುವ ಸಾಮಗ್ರಿಗಳು

  1. ಅಕ್ಕಿ – 1 ಕೆಜಿ
  2. ಹುರಿಗಡಲೆ – ಕಾಲು ಕೆಜಿ
  3. ಉದ್ದಿನಬೇಳೆ – 150 ಗ್ರಾಂ
  4. ಒಣಮೆಣಸಿನಕಾಯಿ – 20
  5. ಎಣ್ಣೆ – ಕರಿಯಲು
  6. ಜೀರಿಗೆ
  7. ಅಚ್ಚ ಖಾರದಪುಡಿ
  8. ಬಿಳಿ ಎಳ್ಳು
  9. ಇಂಗು
  10. ಉಪ್ಪು ರುಚಿಗೆ

ಮಾಡುವ ವಿಧಾನ

  • ಮೊದಲನೆಯ ಹಂತ

ಒಂದು ಕೆಜಿ ಅಕ್ಕಿಯನ್ನು 2 – 3 ಬಾರಿ ತೊಳೆದು ಒಣಗಿಸಿ.ಅಕ್ಕಿಯನ್ನು ಹಿಡಿ ಬೆಚ್ಚಗಾಗುವ ಹಾಗೆ ಹುರಿಯಿರಿ. 150 ಗ್ರಾಂ ಉದ್ದಿನಬೇಳೆಯನ್ನು ಕೆಂಪಗೆ ಹುರಿಯಿರಿ. ಕಾಲು ಕೆಜಿ ಹುರಿಗಡಲೆ ಹಾಕಿ, 20 ಒಣಮೆಣಸಿನ ಕಾಯಿಯನ್ನು ಹಾಕಿ ಮಿಲ್ ನಲ್ಲಿ ನುಣ್ಣಗೆ ಪುಡಿ ಮಾಡಿಸಿ. ಈ ಮಿಶ್ರಣ ಬಹಳ ದಿನದವರೆಗೂ ಇಟ್ಟುಕೊಳ್ಳಬಹುದು.

  • ಎರಡನೇ ಹಂತ

ಮೇಲಿನ ಮಿಶ್ರಣಕ್ಕೆ ಜೀರಿಗೆ, ಬಿಳಿ ಎಳ್ಳು, ಅಚ್ಚ ಖಾರದ ಪುಡಿ, ಇಂಗು, ರುಚಿಗೆ ಉಪ್ಪು ಹಾಕಿ ಮಿಶ್ರಣ ಮಾಡಿ. ಸ್ವಲ್ಪ ಕಾದ ಎಣ್ಣೆಯನ್ನು ಹಾಕಿ ಸ್ವಲ್ಪ ಸ್ವಲ್ಪವೇ ನೀರು ಹಾಕಿ ಕಲಸಿ.ಚಕ್ಕುಲಿ ಒರಳಿಗೆ ಸ್ವಲ್ಪ ಎಣ್ಣೆ ಸವರಿ ಚಕ್ಕುಲಿ ಹಿಟ್ಟನ್ನು ಹಾಕಿ 2-3 ರೌಂಡ್ ಆಕಾರಕ್ಕೆ ಚಕ್ಕುಲಿ ಮಾಡಿ ಕಾದ ಎಣ್ಣೆಯಲ್ಲಿ ಕರಿಯಿರಿ. (Medium flame ).ಇದು ಸಾಂಪ್ರದಾಯಕ ತಿಂಡಿಯೂ ಹೌದು.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Trending

Exit mobile version