ಭಾವ ಭೈರಾಗಿ
ಕವಿತೆ | ಕರೋನ ನೀ ಸರೀನ
- ಎಂ.ಜಿ.ಶಶಿಕಲಾಮೂರ್ತಿ, ನಲ್ಕುದುರೆ
ಪರದೇಶದಿಂದ ಹಾರಿ ಬಂದೈತೆ ಕರೋನ
ಪರದಾಡುವಂತೆ ಮಾಡಿದ್ದು ನೀ ಸರೀನ
ಕರುಳಬಳ್ಳಿಗಳು ಬಂಧನದೊಳಗೆ
ಕೆಲಸ ಕಳೆದುಕೊಂಡವರು ತವರುಗೂಡಿನೊಳಗೆ
ಅಲ್ಲಿ ಇಲ್ಲಿ ನೆಲೆಕಂಡವರ ಬದುಕು ಮೂರಾಬಟ್ಟೆಯಾಗಿದೆ
ಬಿತ್ತಿ ಬೆಳೆದ ರೈತನ ಕನಸು ಕೈಗೂಡದಂತಾಗಿದೆ
ಬಡವರ ಬದುಕು ಅನ್ನವಿಲ್ಲದೆ ಬಳಲುವಂತಾಗಿದೆ
ಕರುನಾಡ ಜನತೆಯ ಸ್ಥಿತಿ ಕರುಳುಹಿಂಡುವಂತಾಗಿದೆ
ರಕ್ತಾಬೀಜಾಸುರನಂತೆ ಎಲ್ಲಾರ ಮನೆಮನಗಳನ್ನು ಆವರಿಸಿದೆ
ಜೀವಜೀವಗಳ ಜೊತೆ ಚೆಲ್ಲಾಟವಾಡಿ ನರಳುವಂತೆ ಮಾಡಿದೆ
ಸಾಕು ಮಾಡು ನಿನ್ನ ಹಾರಾಟ ಹೋರಾಟ
ಕಾಣದಂತೆ ಕಾಡದಂತೆ ತೋರದಿರು ನಿನ್ನ ಮಾಟ
ಕರುಣೆಯ ತೋರಿ ನೆಲದ ಕಂದಮ್ಮಗಳು ಬದುಕು ಹಸನಮಾಡು
ಓ ದೇವರೇ ಕರುನಾಡಿಗೆ ಹರಡಿದ ಕರೋನವನ್ನು ಶಮನಮಾಡು
ಸುದ್ದಿದಿನ.ಕಾಂ|ವಾಟ್ಸಾಪ್|9980346243