ರಾಜಕೀಯ

ಕುತಂತ್ರದಿಂದ ಬಿ.ಎಸ್.ವೈ ಅಧಿಕಾರವಿಡಿಯಲು ಸಾಧ್ಯವಿಲ್ಲ ; ಕಾವಿ‌ ಸ್ವಾಮಿಯಂತೆ ಮಾತಾಡ್ತಾರೆ ಜನಾರ್ಧನ ರೆಡ್ಡಿ : ಇದು ಡಿಕೆಶಿ‌ ಗುದ್ದು

Published

on

ಸುದ್ದಿದಿನ, ಶಿವಮೊಗ್ಗ : ಬೈ ಎಲೆಕ್ಷನ್ ನ್ನು ಯಡಿಯೂರಪ್ಪ – ಶ್ರೀರಾಮುಲು ಅವೈಡ್ ಮಾಡಬಹುದು.15 ದಿನ ತಡವಾಗಿ ರಾಜೀನಾಮೆ ಕೊಟ್ಟಿದ್ರೆ ಈ ಬೈ ಎಲೆಕ್ಷನ್ ಬರ್ತಿರಲಿಲ್ಲ. ಸರಕಾರಕ್ಕೆ 10 ಕೋಟಿಗೂ ಹೆಚ್ಚು ಅಧಿಕ ಹಣ ಖರ್ಚಾಗಿದೆ. ಇಬ್ಬರು ವ್ಯಕ್ತಿಗಳ ಅಧಿಕಾರದ ಆಸೆಯಿಂದ ಚುನಾವಣೆ ನಡೀತಾ ಇದೆ. ಇಬ್ಬರಿಗೂ ಅಧಿಕಾರ ಸಿಕ್ಕಿಲ್ಲ. ಮೋದಿ ಹೆಸರಿನಲ್ಲಿ ವೋಟ್ ಕೊಡಿ ಅಂತ ಯಾರೂ ಕೇಳ್ತಿಲ್ಲ. ಸರಕಾರ ಬಿದ್ದೋಗೋಕೆ ಹೇಗೆ ಸಾಧ್ಯ ಎಂದು ಸಚಿವ ಡಿ.ಕೆ.ಶಿವಕುಮಾರ್ ಇಂದು ನಡೆಸಿದ ಪತ್ರಿಕಾಗೋಷ್ಠಿಯಲ್ಲಿ ಗುಡುಗಿದರು.

117 ಶಾಸಕರೇ ಸುಪ್ರೀಂ ಕೋರ್ಟ್ ನಲ್ಲಿ ಅಫಿಡವಿಟ್ ಫೈಲ್ ಮಾಡಿದ್ದಾರೆ. ಇಷ್ಟಾದರೂ ಕೂಡ ಮತ್ತೆ ಸರಕಾರ ಬೀಳಿಸೋಕೆ ಕೈ ಹಾಕ್ತಾ ಇದಾರೆ. ಬಿಎಸ್ ವೈಗೆ ಕುತಂತ್ರ ಮಾಡಿ ಸರಕಾರ ಬೀಳಿಸಿ ಅಧಿಕಾರಕ್ಕೆ ಬರಲು ಸಾಧ್ಯವಿಲ್ಲ. ಕಾಂಗ್ರೆಸ್ ಜೆಡಿಎಸ್ ಸರಕಾರ ಸುಭದ್ರವಾಗಿದೆ.

ಜನಾರ್ಧನ ರೆಡ್ಡಿಗೆ ಸಚಿವ ಡಿ.ಕೆ.ಶಿವಕುಮಾರ್ ಗುದ್ದು

ಜನಾರ್ದನ ರೆಡ್ಡಿ ಬಿಜೆಪಿ ಪಕ್ಷದವರೇ ಅಲ್ಲ. ಬಿಜೆಪಿಯವರು ಪಕ್ಷಕ್ಕೆ ಸೇರಿಸಿಕೊಳ್ಳುತ್ತಿಲ್ಲ.
ಸ್ವಾಮಿಗಳಂತೆ ಕಾವಿ ಹಾಕಿಕೊಂಡು ಜನಾರ್ದನ ರೆಡ್ಡಿ ಮಾತಾಡ್ತಾ ಇದಾರೆ.

ಮೀಟೂ ಆರೋಪ ವಿಚಾರ: ನಾನು ಅದರ ಬಗ್ಗೆ ವೈಯಕ್ತಿಕ ವಿಚಾರದ ಬಗ್ಗೆ ಮಾತಾಡಲ್ಲ. ಸಿದ್ದರಾಮಯ್ಯ -ಜನಾರ್ಧನ ರೆಡ್ಡಿಗೂ ಸಂಬಂಧವಿಲ್ಲ ಜೈಲಿಗೆ ಕಳಿಸಿರೋದು ಜಡ್ಜ್.  ಬಿಜೆಪಿ ಸಂಸದ ಪ್ರತಾಪ್ ಸಿಂಹ ಈ ಬಗ್ಗೆ ಪುಸ್ತಕ ಬರೆದಿದ್ದಾರೆ.ಬೇಕಾದ್ರೆ ಓದ್ಲಿ ಆ ಪುಸ್ತಕಾನ. ಶ್ರೀರಾಮುಲು ನನ್ನನ್ನು ಜೈಲಿಗೆ ಕಳಿಸ್ತೀನಿ ಎಂದಿದ್ದಾರೆ. ಶ್ರೀರಾಮುಲು ಯಾವಾಗ ಜಡ್ಜ್ ಆಗಿದ್ದಾರೋ ಗೊತ್ತಿಲ್ಲ ಎಂದು ವ್ಯಂಗವಾಡಿದರು.

ಸುದ್ದಿದಿನ.ಕಾಂ|ವಾಟ್ಸಾಪ್ |9986715401

Trending

Exit mobile version