/home/u584543641/domains/suddidina.com/public_html/wp-content/themes/zox-news/amp-single.php on line 77

Warning: Trying to access array offset on value of type bool in /home/u584543641/domains/suddidina.com/public_html/wp-content/themes/zox-news/amp-single.php on line 77
" width="36" height="36">

ದಿನದ ಸುದ್ದಿ

ಗೌರಿ ಹತ್ಯೆ ನಂತರ ಮುಂದಿನ ಟಾರ್ಗೆಟ್ ನರೇಂದ್ರ ನಾಯಕ್?

Published

on

ಸುದ್ದಿದಿನ ಡೆಸ್ಕ್: ಚಿಂತಕ ಹಾಗೂ ಮೂಢ ನಂಬಿಕೆಗಳ ವಿರೋಧಿ ಮಂಗಳೂರು ಮೂಲದ ಪ್ರೊಫೆಸರ್ ನರೇಂದ್ರ ನಾಯಕ್ ಅವರನ್ನು ಹತ್ಯೆಗೆ  ದುಷ್ಕರ್ಮಿಗಳು ಸ್ಕೆಚ್ ಹಾಕಿದ್ದಾರೆ ಎಂಬ ವರದಿಗಳು ಕೇಳಬರುತ್ತಿವೆ.

ದೇವರ ಹೆಸರ ನಡೆಯುವ ಕಂದಾಚಾರಗಳ ವಿರೋಧಿಯಾದ ನಾಯಕ್ ಅವರು ನರೇಂದ್ರ ದಾಬೋಲ್ಕರ್, ಪ್ರೊ. ಎಂ ಎಂ ಕಲ್ಬುರ್ಗಿ ಅವರನ್ನು ಕೊಂದ ಆರೋಪಿಗಳ ಹತ್ಯೆ ನಂತರ ಇಂಟರ್ನೆಟ್‍ನಲ್ಲಿ ಬಿಡುಗಡೆಯಾಗಿದ್ದ ಹಿಟ್‍ಲಿಸ್ಟ್‍ನಲ್ಲಿ ನಾಯಕ್ ಅವರು ಏಳನೇ ಸ್ಥಾನ ಪಡೆದಿದ್ದರು.

ದುಷ್ಕರ್ಮಿಗಳು ನಾಯಕ್ ಅವರ ಹತ್ಯೆಗೆ ಮೂರ್ನಾಲ್ಕು ಬಾರಿ ಪ್ರಯತ್ನ ಪಟ್ಟಿದ್ದಾರೆ ಎನ್ನಲಾಗಿದ್ದು, ಇತ್ತೀಚೆಗೆ ಗುಂಪೊಂದು ನಾಯಕ್ ಅವರ ಮನೆಯೊಳಗೆ ನುಗ್ಗಲು ಪ್ರಯತ್ನಿಸಿದೆ ಎಂಬುದು ಸಿಸಿ ಕ್ಯಾಮೆರಾ ಫುಟೇಜ್‍ಗಳಿಂದ ತಿಳಿದುಬಂದಿದೆ.

ಪ್ರಕರಣದಿಂದ ಎಚ್ಚೆತ್ತಿರುವ ಪೊಲೀಸ್ ಇಲಾಖೆಯು ನಾಯಕ್ ಅವರಿಗೆ ನೀಡಿದ್ದ ಭದ್ರತೆಯನ್ನು ಇನ್ನಷ್ಟು ಹೆಚ್ಚಿಸಿದೆ. ಕಳೆದ ಎರಡು ವರ್ಷಗಳಿಂದ ನಾಯಕ್ ಅವರು ಪೊಲೀಸ್ ಭದ್ರತೆಯಲಿದ್ದಾರೆ.

ನಾಯಕ್ ಅವರು ಹಿಂದೂ ಹಾಗೂ ಮುಸ್ಲಿಂ ಮುಖಂಡರ ವಿರೋಧವನ್ನು ಮೊದಲಿನಿಂದಲೂ ಕಟ್ಟಿಕೊಂಡಿದ್ದಾರೆ ಈ ಹಿಂದೆ ಹೈಕೋರ್ಟ್ ಮಂಗಳೂರು ಬಂದರಿನಲ್ಲಿ ಮಸೀದಿಯೊಂದಕ್ಕೆ ಜಾಗ ನೀಡಿದರ ವಿರುದ್ಧ ಕೋರ್ಟ್‍ನಲ್ಲಿ ಸ್ಟೇ ತಂದಿದ್ದರು.

ಮೂಢ ನಂಬಿಕೆ ವಿರೋಧಿ ಕಾರ್ಯಕ್ರಮವೊಂದರಲ್ಲಿ ಸ್ವಾಮೀಜಿಯೊಬ್ಬರನ್ನು ಅತಿಥಿಯಾಗಿ ಕರೆಸಿದ್ದರು. ಕಾರ್ಯಕ್ರಮದಲ್ಲಿ ಪಾಲ್ಗಂಡಿದ್ದ ಯುವಕನೊಬ್ಬ ದೆವ್ವ ಇದೆಯಾ ಎಂದು ನಾಯಕ್ ಅವರನ್ನು ಕೇಳಿದ್ದ ಇಲ್ಲ ಎಂದಿದ್ದಕ್ಕೆ, ವೇದಿಕೆ ಕೆಳಗೆ ದೆವ್ವ ಹಿಡಿದಂತೆ ಮೇಲೆ ಕೆಳಗೆ ಹಾರಿ ಸೌಂಡ್ ಸಿಸ್ಟಂ ಹಾಳು ಮಾಡುತ್ತಿದ್ದ. ಅವನ ಕಪಾಳಕ್ಕೆ ಬಲವಾಗಿ ಬಾರಿಸಿದಾಗ ಅವ ಸರಿಹೋದ ಎನ್ನಲಾಗಿದೆ. ಕೆಲವುದಿನಗಳ ನಂತರ ಬಂದ ಯುವಕರ ತಂಡವೊಂದು ನಾಯಕ್ ಅವರನ್ನು ದೇವರಿದ್ದಾನೆ ಎಂದು ಒಪ್ಪಿಕೊಳ್ಳುವಂತೆ ಬಲವಂತ ಮಾಡಿ, ಹಲ್ಲೆಗೆ ಮುಂದಾದರು ಎನ್ನಲಾಗಿದೆ.

Leave a Reply

Your email address will not be published. Required fields are marked *

Trending

Exit mobile version