ಭಾವ ಭೈರಾಗಿ

ಕವಿತೆ | ದೇಶ‌ಭಕ್ತ ಸೂಳೇಮಗನ ಭಾವಗೀತೆ

Published

on

  • ಪ್ರೊ.ಎಚ್. ಪಟ್ಟಾಭಿರಾಮ ಸೋಮಯಾಜಿ, ಮಂಗಳೂರು

ಗಾಂಧಿ ಬಿಡಿ ಸರ್
ಭಾಳ ದೊಡ್ಮನ್ಷ ಸರ್
ನಂಗೊತ್ತು
ತತ್ತ್ವನೇ ದೊಡ್ದು
ಜೀವ ಅಲ್ಲ ಸರ್
ಈಶ್ವರ ಅಲ್ಲಾ
ಅಂತ ಏನೇನೋ
ಮುದ್ಕ ಬಡ್ಕೋತಿದ್ನಲ್ಲ ಸರ್
ಅಂವ ಸರಿ ಇಲ್ಲ ಸರ್
ಸಾವಾಸ ಅಲ್ಲ ಸರ್
ಶುದ್ಧ ಅಂಡೆ ಪಿರ್ಕಿ ಸರ್
ಅವಂದು ಸಾಬ್ರ ಸಾವಾಸ ಸರ್
ಎಲ್ಲ ಎಕ್ಕುಡ್ಸಿಬುಟ್ಟ ಸರ್

ನಾಥೂರಾಮ ಇದಾನಲ್ಲ ಸರ್
ತತ್ತ್ವ ಅಂದ್ರೆ ಅವನ್ನ ನೋಡಿ
ಮರೀಬೇಕು ಸರ್
ಅವ್ನು ಮೆರೀಬೇಕು ಸರ್
ಬೊಚ್ಚು ಬಾಯ್ನಲ್ಲು
ಹೇ ರಾಮ್
ಹೇಳ್ಸಿದ್ನಲ್ಲ ಸರ್
ರಾಮರಾಜ್ಯ
ಆಗ್ಲೇ ಇನ್ನೇನು ಬರ್ತಿತ್ತು ಸರ್
ಹೇತ್ಲಾಂಡಿ ಹಿಂದುಗ್ಳಿಗೆ
ಹೇಳಿ ಹೇಳಿ ಸಾಕಾಯ್ತು ಸರ್
ಸಿಕ್ಕಿದ್ದೇ ಸೀರುಂಡೆ
ಅಂತ ನೆಹ್ರು ಸಂತಾನ
ಮೂಳೆ ಚಕ್ಳಾನೂ ನಮ್ಗೆ ಬಿಡ್ದಂಗೆ
ಎಲ್ಲಾನು ಹರ್ಕೊಂಡು ತಿಂತಲ್ಲ ಸರ್

ಏನೇ ಹೇಳಿ ಸರ್
ನೀವೇ ಸರಿ ಸರ್
ಚಕ್ರಬಡ್ಡಿ ಸಮೇತ
ಬಡ್ಡಿಮಗಂದು
ಈಗ ಇಸ್ಕೋತೀರಲ್ಲ ಸರ್
ಅವ್ರೇನ್ ಕಿಸ್ಕೋತಾರೆ ಸರ್
ಫಾರ್ಟಿಪರ್ಸೆಂಟ್ ನೀವೇ
ಕೈಯಾರ ಕೊಟ್ರಲ್ಲ ಸರ್
ಅದೇನ್ ಕಮ್ಮಿನ ಸರ್
ತೀರ್ಥ ಪ್ರಸಾದ ಎಲ್ಲಾ ಈಗ
ನಿಮ್ದೇ ಡಿಪಾರ್ಟ್ಮೆಂಟಲ್ವ ಸರ್

ಬಲಿರಾಮನ್ನೇ ತಂದು
ಎಲ್ಲಾರ್ನೂ ಬಲಿ ಹಾಕ್ತಿದ್ದೀರಲ್ಲ ಸರ್
ಪ್ರತಿ ಹಿಂದು ಬಾಯಲ್ಲು
ಹೇ ರಾಮ್
ಹೇಳ್ಸ್ಬೇಕು ಸರ್
ಸತ್ರೆ ಸಾಯ್ಲಿ ಬಿಡಿ ಸರ್
ಗುಂಡಿ ರೆಡಿ ಇದೆ ಸರ್
ಜನ ಏನ್ ಸರ್
ಕುರಿ ತರ
ಇವತ್ತ್ ಇರ್ತಾರೆ
ನಾಳೆ ಸಾಯ್ತಾರೆ
ತತ್ತ್ವ ಮುಖ್ಯ ಸರ್
ಕರೆಕ್ಟಾಗಿ ಐವತ್ತಾರಿಂಚು ಇರ್ಬೇಕ್ಸರ್
ಆ ಮೇಲೆ ನೀವ್ಹೇಳಿದ್ದು ಸರಿ ಸರ್
ಧ್ವಜ ಸರ್
ಅದೇ ಭಗವಾ ಧ್ವಜ ಸರ್
ಅದೇ ಸರ್

ನಿಮ್ದು ತಲೆ ಅಂದ್ರೆ ತಲೆ ಸರ್
ರಾವಣ್ನಿಗೂ ಇಷ್ಟ್ಟಿರ್ಲಿಲ್ಲ ಸರ್
ಶಾರ್ಟಾಗಿ ಸ್ಮಾರ್ಟಾಗಿ
ಧ್ವಜಕ್ಕೇ ಕೈ ಹಾಕಿದ್ರಲ್ಲ ಸರ್
ಮಕ್ಳಿಗೆ ಹೇಳ್ಳಿಕ್ಕೆ ಸುಲ್ಬ ಸರ್
ನಿಮ್ಗೆ ಹ್ಯಾಟ್ಸಾಫ್ ಸರ್
ಯಾರ್ ಕೇರ್
ಮಾಡ್ದಿದ್ರೇನ್ ಸರ್
ಕೇರೆ ಹಾವಿಗು ಹುತ್ತ
ನಾಗ್ಪುರ್ದಲ್ಲಿದೆ ಸರ್
ಅದೇನ್ ಸರ್ ಅಲ್ಲಿ ಅಬ್ಬಬ್ಬ
ನಾಲ್ಗೆ ಎರ್ಡೆರ್ಡು ಸರ್
ತಲೆ ತುಂಬ ಶುದ್ಧ ದೇಸಿ ಸಗ್ಣಿ ಸರ್
ಅವ್ರ್ ಕೈಲಿ ಮಚ್ಚೇ ಇದೆ ಸರ್
ಅಚ್ಛೇ ದಿನ್ ಬಂದೇ ಬರುತ್ತೆ
ನೋಡ್ತಾ ಇರಿ ಸರ್
ಬಡ್ಕೊಳ್ಲಿ ಬಿಡಿ ಸರ್
ಜ್ಞಾನ ಅಂತೆ ಜ್ಞಾನ
ಅದ್ರ್ ಮುಂಡಾ ಮುಚ್ತು ಸರ್.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Trending

Exit mobile version