ಭಾವ ಭೈರಾಗಿ

ಕವಿತೆ | ಹಾರುವ ಹೂವು

Published

on

ಕವಯಿತ್ರಿ | ಪಲ್ಲವಿ ಶೆಟ್ಟಿ
  • ಪಲ್ಲವಿ ಶೆಟ್ಟಿ

ಚಂದಾಗಿ ಮೊಳೆತು
ನವಿರಾದ ಚಿಗುರಾಗಿದ್ದೆ
ಪಲ್ಲವಿಸಿ ಅರಳಿ ಘಮ ಚೆಲ್ಲುವ ಹೂವೂ ಆದೆ
ಒಲವಿನ ಹೆಚ್ಚಾಸೆಯಿಂದ ಬಾಗಿದೆ
ನೀನೂ ನನ್ನಂತೆ ಕೋಮಲವೆಂದನಿಸಿ…!

ನೀನೇಕೋ ನನ್ನ ಬಂಧನವನು ಜರೂರು ಮಾಡಿಬಿಟ್ಟೆ
ಬಂಧಿಯಾದರೂ ಸುಖಿಸುತ್ತಿರುವ ಭಾಸದಿಂದ ನಿನ್ನ ನವಿರಿಗೆ ನಾ ಬೇಡಿಕೆಯಿಡಲಿಲ್ಲ
ಹೇಗೋ ಗಡುಸುತನಕ್ಕೆ ಒಗ್ಗಿ ನಿಲ್ಲಲು ಶುರು ಮಾಡಿದೆ!
ನೀ ನೂಕಿದೆ…!

ಸಂಪೂರ್ಣವಾಗಲ್ಲದಿದ್ದರೂ ಕೊಂಚವಾದರೂ ನಾ ಬಳಲಿದ್ದೆ
ಹೂವು ನಾನಾಗಿರಲಿಲ್ಲ
ಇನ್ನೊಮ್ಮೆ ನಗಬೇಕೆನಿಸಿ ಹಾರುವ ಚಿಟ್ಟೆಯಾಗಿದ್ದೇನೆ
ಆಗಾಗ ನೀ ಕಂಡರೂ ಒಮ್ಮೆ ಜೇನು ಹೀರಿ ಆನಂದಿಸುವ ದುರಾಸೆ
ಬೇಗ ಬಳಲಿ ಬಾಡಿಬಿಡು

ಇದ್ದೂ ಇದ್ದು ನನ್ನ ರೆಕ್ಕೆಯ ಕಟ್ಟಿಬಿಡಬೇಡ
ಮತ್ತೆ ನಿನ್ನೆಡೆಗೆ ಸೆಳೆಯುವ ದುರಾಸೆಯೇಕೆ
ಹಾರುವುದ ಕಲಿತಿದ್ದೇನೆ
ಮತ್ತೊಂದು ಹೂವಿಗಾಗಿ ಅಲ್ಲ
ಮತ್ತೆ ಹೂವಿಗೆ ಬಲಿಯಾಗದಿರಲೆಂದು

ಹಾರಲು ಬಿಟ್ಟು ಬಿಡು…

ಸುದ್ದಿದಿನ.ಕಾಂ|ವಾಟ್ಸಾಪ್|9980346243

Trending

Exit mobile version