ದಿನದ ಸುದ್ದಿ
ಸ್ಮಶಾನ ಭೂಮಿ ವಿವಾದ : ಹೊಸ ಕುಂದುವಾಡ ಗ್ರಾಮಸ್ಥರ ಆರೋಪಕ್ಕೆ ಹುರುಳಿಲ್ಲ
ದಾವಣಗೆರೆ ನಗರದ ಹಳೇ ಕುಂದುವಾಡ ಗ್ರಾಮದಲ್ಲಿ ಸ್ಮಶಾನ ಭೂಮಿ ಇದ್ದು, ಈ ಹಿಂದಿನಿಂದಲೂ ಹೊಸ ಕುಂದುವಾಡದವರಿಗೆ ಹೂಳಲು ಅವಕಾಶ ಮಾಡುತ್ತಲೇ ಬರಲಾಗಿದೆ.
ಯಾವುದೇ ಕಂಡಿಷನ್ ಇನ್ನಿತರೆ ಹಾಕಲಾಗಿಲ್ಲ, ಎರಡು ಗ್ರಾಮದವರು ಸೌಹಾರ್ದತೆಯಿಂದ ಬಂದಿದ್ದೇವೆ, ಗುರುವಾರ ಆರೇಳು ಮಂದಿ ಸಾವನ್ನಪ್ಪಿದಾಗಲು ಇದೇ ಹಳೇ ಕುಂದುವಾಡದಲ್ಲಿ ಯಾವುದೇ ತಕರಾರು ಇಲ್ಲದೇ ಹೂಳಲು ಅವಕಾಶ ಮಾಡಿಕೊಡಲಾಗಿದೆ, ನಿಮ್ಮ ಗ್ರಾಮಕ್ಕೆ ಸ್ಮಶಾನ ಭೂಮಿ ಬೇಕಿದ್ದರೆ ನೇರವಾಗಿ ಮಹಾನಗರ ಪಾಲಿಕೆಗೆ, ಜಿಲ್ಲಾಡಳಿತಕ್ಕೆ ಕೇಳಿ ಪಡೆದುಕೊಳ್ಳಿ, ಇದಕ್ಕೆ ಹಳೇ ಕುಂದುವಾಡದವರ ಅಭ್ಯಂತರ ಏನೂ ಇಲ್ಲ, ಆದರೆ ಹೂಳಲು ಅವಕಾಶ ಮಾಡಿಕೊಟ್ಟು ಕೂಡ ಹೂಳಲು ಅವಕಾಶ ನೀಡುತ್ತಿಲ್ಲ ಎಂದು ಸುಳ್ಳು ಆರೋಪ ಮಾಡುವುದು ಸರಿಯಲ್ಲ.
ಈ ಹಿಂದೆ ಸಣ್ಣಪುಟ್ಟ ಸಮಸ್ಯೆ ಆದಾಗಲು ಹಳೇ ಕುಂದುವಾಡದ ಹಿರಿಯರು ಸೇರಿ ಹೊಸ ಕುಂದುವಾಡದವರಿಗೆ ಯಾವುದೇ ತೊಂದರೆ ಆಗದ ರೀತಿ ಹೂಳಲು ಅವಕಾಶ ಕೊಡಬೇಕು ಎಂದು ನಿರ್ಧರಿಸಿ ಇಲ್ಲಿಯವರೆಗೂ ಅವಕಾಶ ನೀಡಲಾಗಿದೆ, ಸುಖಾ ಸುಮ್ಮನೆ ಪ್ರಚಾರ ಪಡೆಯಲು ಇಲ್ಲಸಲ್ಲದ ಸುಳ್ಳು ಆರೋಪ ಮಾಡಬೇಡಿ ಎಂದು ಹೊಸ ಕುಂದುವಾಡದ ಗ್ರಾಮಸ್ಥರಲ್ಲಿ ವಿನಂತಿ ಮಾಡುತ್ತೇವೆ.
- ಹಳೇ ಕುಂದುವಾಡ ಗ್ರಾಮದ ಮುಖಂಡರು