ಸಿನಿ ಸುದ್ದಿ
ಕಾವೇರಿ ವಿವಾದದ ಬಗ್ಗೆ ನಂಗೇನೂ ಗೊತ್ತಿಲ್ಲ: ರಮೇಶ್ ಅರವಿಂದ್
ಸುದ್ದಿ ದಿನ ಡೆಸ್ಕ್: ಕಾವೇರಿ ವಿವಾದದ ಬಗ್ಗೆ ನನಗೇನೂ ಗೊತ್ತಿಲ್ಲ, ಆ ವಿಷಯ ಕುರಿತು ಮಾತನಾಡುವ. ಜ್ಞಾನ ನನಗಿಲ್ಲ ಎಂದು ನಟ, ನಿರ್ದೇಶಕ ರಮೇಶ್ ಅರವಿಂದ್ ಅಭಿಪ್ರಾಯಪಟ್ಟರು.
ಬಟರ್ ಫ್ಲೈ ಸಿನಿಮಾ ಕುರಿತು ಮೈಸೂರಿನಲ್ಲಿ ಪತ್ರಕರ್ತರೊಂದಿಗೆ ಕರೆದಿದ್ದ ಬೈಟಕ್ನಲ್ಲಿ, ಕಾಲಾ ಸಿನಿಮಾ ಬಿಡುಗಡೆ ತಡೆ ಕುರಿತು ಕೇಳಿದ ಪ್ರಶ್ನೆಗೆ ಅವರು ಹೀಗೆ ಉತ್ತರಿಸಿದರು.
ಕಾವೇರಿ ವಿವಾದಕ್ಕೆ ಎರಡು ಮುಖಗಳಿವೆ. ಒಂದು ಭಾಗದ ಸತ್ಯ ಮಾತ್ರ ನಮಗೆ ಗೊತ್ತು. ಮತ್ತೊಂದು ಭಾಗದಲ್ಲಿ ಏನಾಗುತ್ತಿದೆ ಎಂಬುದು ನನಗೂ ಗೊತ್ತಿಲ್ಲ. ಹಾಗಾಗಿ ಈ ಪ್ರಶ್ನೆಗೆ ಉತ್ತರಿಸುವಷ್ಟು ಪರಿಣತಿ ನನಗಿಲ್ಲ ಎಂದು ಜಾರಿಕೊಂಡರು.
ಪ್ರತಿ ಸಿನಿಮಾ ಬಿಡುಗಡೆಯಾದಾಗಲು ಕಾವೇರಿ ವಿವಾದ ಮೊದಲಾದ ಸಮಸ್ಯೆ ಇದ್ದೇ ಇರುತ್ತದೆ. ಇದು ಶುರುವಾಗಿ ನೂರು ವರ್ಷಗಳೇ ಕಳೆದಿವೆ. ಇನ್ನಾದರೂ ಪರಹಾರ ಹುಡುಕಬೇಕು. ಇದು ಇಂಡಿಯಾ ವರ್ಸಸ್ ಪಾಕಿಸ್ತಾನ ಅಲ್ಲ. ಒಂದೇ ದೇಶದಲ್ಲಿರುವ ಎರಡು ರಾಜ್ಯಗಳ ನಡುವಿನ ಸಮಸ್ಯೆ. ಕರ್ನಾಟಕ ವರ್ಸಸ್ ತಮಿಳುನಾಡು ಆಗಬಾರದು. ತಮಿಳುನಾಡು ವಿತ್ ಕರ್ನಾಟಕ ಆಗಬೇಕು ಎಂದರು. ನಟಿ ಪರೂಲ್ ಯಾದವ್ ಜತೆಗಿದ್ದರು.
ಹಿಂದಿಯ ಕ್ವೀನ್ ಚಿತ್ರದ ರೀಮೇಕ್ ಅನ್ನು ರಮೇಶ್ ಅವರು ಕನ್ನಡ ಹಾಗೂ ತಮಿಳಿನಲ್ಲಿ ನಿರ್ದೇಶಿಸುತ್ತಿದ್ದಾರೆ.