ದಿನದ ಸುದ್ದಿ
ಕೊಡಗು ಪ್ರವಾಹ : ಜಾನುವಾರು ರಕ್ಷಣೆಗೆ ಸಹಾಯವಾಣಿ
ಸುದ್ದಿದಿನ, ಕೊಡಗು : ಜಿಲ್ಲೆಯಲ್ಲಿ ಭಾರಿ ಮಳೆ, ಭೂ ಕುಸಿತದಿಂದ ಜಾನುವಾರುಗಳು ಸಂಕಷ್ಟಕ್ಕೀಡಾಗಿವೆ. ಈ ಸಂದರ್ಭದಲ್ಲಿ ಜಾನುವಾರುಗಳೆ ರಕ್ಷಿಸುವುದು ಮತ್ತು ಪೋಷಿಸುವುದು ಸರ್ಕಾರದ ಜವಾಬ್ದಾರಿಯಾಗಿದೆ. ಆದ್ದರಿಂದ ಜಾನುವಾರು ರಕ್ಷಣೆ ಮತ್ತು ಪೋಷಣೆಗಾಗಿ ಸರ್ಕಾರ ಜಿಲ್ಲೆಯ ಕುಶಾಲನಗರ ಹೋಬಳಿ ಕೂಡಿಗೆ ಜರ್ಸಿ ತಳಿ ಸಂವರ್ಧನಾ ಕೇಂದ್ರದಲ್ಲಿ ವ್ಯವಸ್ಥೆಗೊಳಿಸಲಾಗಿದೆ.
ಈ ಸಂಬಂಧ ಜಿಲ್ಲೆಯಲ್ಲಿ ಸಹಾಯವಾಣಿ ಪ್ರಾರಂಭವಾಗಿದೆ. ಸಾರ್ವಜನಿಕರು ಸಂಕಷ್ಟಕ್ಕೀಡಾದ ಜಾನುವಾರುಗಳು ಕಂಡು ಬಂದರೆ ಸಹಾಯಕ್ಕಾಗಿ ಬೆಳಿಗ್ಗೆ 9 ರಿಂದ ಸಂಜೆ 6ಗಂಟೆಯ ವರೆಗೆ ಕರೆ ಮಾಡಬಹುದು.
ಸಹಾಯವಾಣಿ ಸಂಖ್ಯೆ : 08272-229449
ಮಡಿಕೇರಿ :08272-228805
ವಿರಾಜಪೇಟೆ : 08274-257228
ಸೋಮವಾರಪೇಟೆ : 08276-282127
ಸಾರ್ವಜನಿಕರು/ದಾನಿಗಳು ಪಶು ಆಹಾರ, ಒಣಹುಲ್ಲು, ಹಸಿ ಹುಲ್ಲು ಮತ್ತು ಶ್ವಾನ ಆಹಾರಗಳನ್ನು ದೇಣಿಗೆಯಾಗಿ
ಉಪನಿರ್ದೇಶಕರು,
ಪಶುಪಾಲನಾ ಮತ್ತು ಪಶು ವೈದ್ಯಕೀಯ ಸೇವಾ ಇಲಾಖೆ,
ಜರ್ಸಿ ತಳಿ ಸಂವರ್ಧನಾ ಕೇಂದ್ರ
ಕೂಡಿಗೆ. ದೂ:08276-278248/9901668895 ಅಥವ 9449562309
ಇಲ್ಲಿಗೆ ಸಂಪರ್ಕಿಸಿ ನೀಡುವಂತೆ ಜಿಲ್ಲಾಧಿಕಾರಿ ಪಿ ಐ ಶ್ರೀವಿದ್ಯಾ ಅವರು ತಿಳಿಸಿದ್ದಾರೆ.