ದಿನದ ಸುದ್ದಿ

ಕುಂದುವಾಡ ಕೆರೆ ಅಭಿವೃದ್ದಿ ಕಾಮಗಾರಿ

Published

on

ಸುದ್ದಿದಿನ,ದಾವಣಗೆರೆ : ದಾವಣಗೆರೆ ಮಹಾನಗರಪಾಲಿಕೆ ಮಾಲೀಕತ್ವದಲ್ಲಿರುವ ಕುಂದುವಾಡ ಕೆರೆಯ ಅಭಿವೃದ್ಧಿ ಕಾಮಗಾರಿಯನ್ನು ದಾವಣಗೆರೆ ಸ್ಮಾರ್ಟ್ ಸಿಟಿ ವತಿಯಿಂದ ಕೈಗೊಳ್ಳಲಾಗಿದ್ದು, ಕೆರೆಯ ಅಭಿವೃದ್ಧಿ ಕಾರ್ಯ ಪ್ರಗತಿಯಲ್ಲಿರುತ್ತದೆ. 1.2 ಕಿ.ಮೀ ಏರಿಯನ್ನು ಎತ್ತರಿಸಿ ಗಟ್ಟಿಗೊಳಿಸಲಾಗಿದ್ದು, ಕಲ್ಲುಗಳ ಹೊದಿಕೆಯ ಕೆಲಸವು ಪ್ರಗತಿಯಲ್ಲಿದೆ.

ಉಳಿದಂತೆ 3.7 ಕಿ.ಮೀ ನಲ್ಲಿ ಮುಳ್ಳು ಗಂಟೆ ಪೊದೆ ಮತ್ತು ಹಳೆಯ ಕಲ್ಲುಗಳ ಹೊದಿಕೆಯ ತೆರವುಗೊಳಿಸುವ ಕಾರ್ಯ ಚಾಲ್ತಿಯಲ್ಲಿರುತ್ತದೆ ಎಂದು ದಾವಣಗೆರೆ ಸ್ಮಾರ್ಟ್ ಸಿಟಿ ಲಿಮಿಟೆಡ್‍ನ ವ್ಯವಸ್ಥಾಪಕ ನಿರ್ದೇಶಕರು ಹಾಗೂ ಮುಖ್ಯ ಕಾರ್ಯನಿರ್ವಹಣಾಧಿಕಾರಿ ರವೀಂದ್ರ ಮಲ್ಲಾಪುರ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Trending

Exit mobile version