ರಾಜಕೀಯ
ನಿಮಗಿದು ಕೊನೆಯ ಅವಕಾಶ : ಅಮಿತ್ ಶಾ..?
ಸುದ್ದಿದಿನ ಡೆಸ್ಕ್ : ಸರ್ಕಾರ ಮಾಡೋದಾದ್ರೆ ಈಗಲೇ ಮಾಡಿ, ಇಲ್ಲದಿದ್ರೆ ಲೋಕಸಭಾ ಚುನಾವಣೆ ಬಳಿಕ ನಾಯಕತ್ವ ಬದಲಾವಣೆ ಅಗತ್ಯ. ಕರ್ನಾಕಟದಲ್ಲಿ ಭವಿಷ್ಯದ ದೃಷ್ಟಿಯಿಂದ ಪರ್ಯಾಯ ನಾಯಕತ್ವದ ಕಂಡುಕೊಳ್ಳಬೇಕಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಯಡಿಯೂರಪ್ಪಗೆ ಖಡಕ್ ಸೂಚನೆ ರವಾನಿಸಿದ್ದಾರೆ ಅಮಿತ್ ಶಾ.
ನಿಮಗಿದು ಕೊನೆಯ ಅವಕಾಶ,ಕೊನೆಯ ಅವಕಾಶ ಬಳಸಿಕೊಳ್ಳಿ.ಅಕ್ಟೋಬರ್ ಒಳಗೆ ರಾಜ್ಯದಲ್ಲಿ ಅಧಿಕಾರ ಹಿಡಿಯಿರಿ.ಅಕ್ಟೋಬರ್ ಬಳಿಕ ಲೋಕಸಭಾ ಚುನಾವಣೆ ಮುಗಿಯುವ ವರೆಗೆ ಯಾವುದೆ ಕಾರ್ಯಾಚರಣೆ ಬೇಡ. ಕರ್ನಾಟಕದಲ್ಲಿ ಪ್ರಬಲ ಒಕ್ಕಲಿಗ ಸಮುದಾಯದ ವಿರೋಧ ಕಟ್ಟಿಕೊಳ್ಳಲು ನಾವು ಸಿದ್ಧರಿಲ್ಲ. ಏನೆ ಮಾಡಿದ್ರೂ ಲೋಕಸಭಾ ಚುನಾವಣೆ ಮೇಲೆ ಪ್ರಭಾವ ಬೀರದಂತೆ ಈಗಲೇ ಮಾಡಿ. ಸರ್ಕಾರ ಬೀಳಿಸಿದ ಅಪಕೀರ್ತಿ ಬಗ್ಗೆ ಲೋಕಸಭಾ ಚುನಾವಣೆ ಸಂದರ್ಭದಲ್ಲಿ ಚರ್ಚೆ ಆಗಬಾರದು, ಅದರಿಂದ ಚುನಾವಣಾ ಫಲಿತಾಂಶದ ಮೇಲೆ ಪರಿಣಾಮ ಆಗುತ್ತದೆ. ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ
ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ರಾಮ್ ಲಾಲ್ ಮೂಲಕ ಸಂದೇಶ ರವಾನೆ ಮಾಡಿದ್ದಾಗಿ ತಿಳಿದು ಬಂದಿದೆ.
ಸುದ್ದಿದಿನ.ಕಾಂ|ವಾಟ್ಸಾಪ್|9986715401