ಅಂತರಂಗ
ನಡುಪಂಥ ಎನ್ನುವ ಗುಳ್ಳೇನರಿ ಸಿದ್ಧಾಂತ | ಭಾಗ -2
- ಲೋಕೇಶ್ ಪೂಜಾರಿ
” ಏನ್ಲಾ ಅದು ಮುಖದಲ್ಲಿ ಮೂಗು”
ಎಂದಾಕ್ಷಣ ಪಟಕ್ಕನೆ ಮುಖ ಒರೆಸಿಕೊಳ್ತಾರೆ ಹೆಚ್ಚಿನವರು ಪಾಪ. ಹಾಗೆ ಮಾಡುವವರು ಮೂರ್ಖರಲ್ಲ.
ಸಾಟಿ ಮನುಷ್ಯನನ್ನು ನಂಬಿದವರು.
ಹೇಳುವುದನ್ನು ಗಂಬೀರವಾಗಿ ಸಂದೇಹ ಬರದಂತೆ ಹೇಳಿದರೆ, ಗಟ್ಟಿಯಾಗಿ ನಂಬಿ ಬಿಡ್ತಾರೆ. ಅದರಲ್ಲೂ ಬಿಸಿರಕ್ತದ ಯುವಕರು, ಕೂತು ಹೌದೇ ಅಲ್ಲವೇ ಎಂದು ಯೋಚನೆ ಮಾಡುವುದೇ ಇಲ್ಲ. ಕೆಲ ವರ್ಷಗಳ ಹಿಂದೆ ವಿಚಾರವಾದಿಯೊಬ್ಬರು ಮಹಾತ್ಮಾ ಗಾಂಧಿಯವರ ಉಡುಪಿ ಬೇಟಿಯ ಬಗ್ಗೆ ಬರಹವೊಂದನ್ನು ಬರೆದಿದ್ದರು.
ಉಡುಪಿಯ ಅಂದಿನ ಮಠಗಳು ಇಂದಿನವರು
ಊಹಿಸಲಾಗದಷ್ಟು ಕರ್ಮಠವಾಗಿದ್ದವು. ಅದು ರಾಜಾಶ್ರಯ ಮತ್ತು ಬ್ರಿಟಿಷ್ ಅಡಲಿತದ ಕಾಲ.
ಆ ವಿಚಾರವಾದಿಗಳ ಬರವಣಿಗೆ ಹೀಗಿತ್ತು…
“ಗಾಂಧಿಯವರು ಅಜ್ಜರಕಾಡು ಮೈದಾನದಲ್ಲಿ ಜನಸಂಪರ್ಕ ಸಭೆ ಮುಗಿದ ಬಳಿಕ ,ಉಡುಪಿ ಮಠಗಳಲ್ಲಿ ಇರುವ ಜಾತಿತಾರತಮ್ಯದ ಬಗ್ಗೆ ಕೇಳಿ, ದೇವಸ್ಥಾನಕ್ಕೆ ಹೋಗಲು ನಿರಾಕರಿಸಿದರು ಮತ್ತು ಹೋಗುವಾಗ ದಾರಿಯಲ್ಲಿ ಉಡುಪಿ ಕೃಷ್ಣ ಮಠವನ್ನು ತೋರಿಸಿ,ಇದೇನಾ ಆ ದೇವಸ್ಥಾನ ಎಂದು ಕೇಳಿದರು ”
ಆ ಪೋಸ್ಟ್ ಹಾಕಿದ ಮರುದಿನ ಚಕ್ರತೀರ್ಥ ಬರೆಯುತ್ತಾನೆ.”ಉಡುಪಿಯ Geography ಗೊತ್ತಿರುವವರಿಗೆ ಅರ್ಥ ಆಗುತ್ತದೆ ,ಉಡುಪಿಯಿಂದ ಕಾರವಾರಕ್ಕೆ ಹೋಗುವ ದಾರಿಯಲ್ಲಿ ಕೃಷ್ಣಮಠ ಬರಲು ಸಾದ್ಯವೇ ಇಲ್ಲ.” ಆತ ಬರೆದ ಆ ಪೋಸ್ಟ್ ಗೆ ಉಡುಪಿಯ ಹುಡುಗರೂ ಸೇರಿದಂತೆ ಸಾವಿರಾರು ಜನ ಲೈಕ್ ಕೊಡುತ್ತಾರೆ. ನೂರಾರು ಜನ ಆ ಪೋಸ್ಟನ್ನು ಷೇರ್ ಮಾಡುತ್ತಾರೆ.
ಗಾಂಧೀಯವರ ಲೇಖನ ಬರೆದಿದ್ದ ವಿಚಾರವಾದಿಯನ್ನು ಲೇವಡಿ ಮಾಡುತ್ತಾರೆ. ಮಹಾತ್ಮಾ ಗಾಂಧಿಯವರು ಎಣ್ಣೆ ಹೊಡೆಯಲು ತಲ್ಲೂರ್ ಬಾರ್ ಗೆ ಹೋದಾಗ ಕೃಷ್ಣ ಮಠ ಕಾಣಿಸಿದ್ದಾ ಎಂದೆಲ್ಲಾ ಲೇವಡಿ ಮಾಡಲಾಗುತ್ತದೆ.
ಸುಳ್ಳು ದರ್ಶನ ಮಾಡಿಸಿದ ಚಕ್ರತೀರ್ಥನಿಗೆ ಜೈಕಾರ ಕೂಗಲಾಗುತ್ತದೆ.
ಅದೇ ದಿನ ಚಕ್ರತೀರ್ಥ ನಾನು ಅವನ ವಾಲ್ ಗೆ ಹಾಕಿದ ಕಮೆಂಟ್ ಡಿಲೀಟ್ ಮಾಡಿ ನನ್ನನ್ನು block ಮಾಡುತ್ತಾನೆ. ಸತ್ಯ ಏನೆಂದರೆ ಮಹಾತ್ಮಾ ಗಾಂಧಿಯವರು ಉಡುಪಿಗೆ ಬೇಟಿ ನೀಡಿದ್ದ 1934ರಲ್ಲಿ ,ಉಡುಪಿಯಲ್ಲಿ ಒಂದೇ ಒಂದು ಟಾರು ಹಾಕಿದ ರಸ್ತೆ ಇರಲಿಲ್ಲ.
ವಿದ್ಯುತ್ ಅಂದರೆ ಏನು ಅಂತಾನೇ ಜನಕ್ಕೆ ಗೊತ್ತಿರದ ಕಾಲ.
ಅಜ್ಜರಕಾಡಿನಿಂದ ಕಾರವಾರ ಹೋಗುವಾಗ ಈಗಿನ ಕಿನ್ನಿಮುಲ್ಕಿಯ ರಸ್ತೆಯಲ್ಲಿ ಸಾಗಿ ಚಿತ್ತರಂಜನ್ ಸರ್ಕಲ್ ಮೂಲಕ ಕಲ್ಸಂಕ ಗುಂಡಿಬೈಲ್ ಮುಖಾಂತರ ನೇ ಹೋಗಬೇಕು.ಹಾಗೆ ಸಾಗುವಾಗ ಅನಂತೇಶ್ವರ ದೇವಸ್ಥಾನ ಸಹಿತ ಎಲ್ಲವೂ ಕಾಣಿಸಲೇ ಬೇಕು. ಯಾಕೆಂದರೆ ನಡುವೆ ಇರುವ ಕಟ್ಟಡಗಳೆಲ್ಲವೂ ನಂತರ ನಿರ್ಮಾಣವಾದವೇ. ರಾಷ್ಟ್ರೀಯ ಹೆದ್ದಾರಿ ,ರಾಜ್ಯಹೆದ್ದಾರಿ, ನದಿಗಳಿಗೆ ಸೇತುವೆಗಳು ಯಾವುದೂ ಇರಲಿಲ್ಲ.
ಆದರೆ ಪೋಸ್ಟ್ ನಲ್ಲಿ ರಂಪಾಟ ಮಾಡಿದ ಹುಡುಗರ ತಲೆಯಲ್ಲಿ ಗಾಂಧಿ ಯಾಕೆ ಅಜ್ಜರಕಾಡಿಂದ ಸೀದಾ ಕರಾವಳಿ ಬೈಪಾಸ್ ಗೆ ಬಂದು ರೊಯ್ ಅಂತಾ ಹೈವೇರಸ್ತೆಯಲ್ಲಿ ಹೋಗಿಲ್ಲ ಅಂತಾನೇ ಓಡುತ್ತಿರುತ್ತದೆ.
ಪಾಪ ಅವರಿಗೆ ಇತಿಹಾಸ ಗೊತ್ತಿಲ್ಲ. ಆ ಹೈವೇ ರಸ್ತೆ ನಿರ್ಮಾಣ ಆಗಿದ್ದೇ ಎಪ್ಪತ್ತರ ದಶಕದ ಮೇಲೆ. ಅದು ಇರಲೇ ಇಲ್ಲ. ಸತ್ಯ ಏನೆಂದು ಹೇಳಲು ಹೊರಟಾಗ ಚಕ್ರತೀರ್ಥ ನನ್ನನ್ನು block ಮಾಡಿದ.
ಚೊಕ್ಕಾಡಿಯ ತರಹನೇ ಸಾವಿರಾರು ಪೇಕ್ ಐಡಿಗಳನ್ನು ಜೊತೆಗೇ ಇಟ್ಟುಕೊಂಡು ಒರಿಜಿನಲ್ ಐಡಿಗಳನ್ನು ಬ್ಲಾಕ್ ಮಾಡುವ ನೂರಾರು ಜನ ಇದ್ದಾರೆ. ಇವುಗಳ ನರಿಬುದ್ದಿ ಬೆಳಕಿಗೆ ಬರಬೇಕಾದರೆ ನಾವು ಗಳು ಬರೀತಾನೇ ಇರಬೇಕು. ಸತ್ಯ ಹೇಳುತ್ತಾನೇ ಇರಬೇಕು.
ನಡುಪಂಥ ದ ನರಿ ಚಕ್ರವರ್ತಿ ಸೂಲಿಬೆಲೆಯ ಬಗ್ಗೆ ಮಾತಾಡುತ್ತಾ ,ಆತ ಅತಿಯಾಗಿ ಉಪೇಕ್ಷೆಯ ಭಾಷಣ ಮಾಡುವುದು ಹೌದು ಆದರೆ ಆತನ ಸಮಾಜಸೇವೆಯನ್ನು ಮರೆಯಬಾರದು ಅನ್ನುತ್ತದೆ.
ಅಲ್ಲಿ ಸಮಾಜಸೇವೆ ಏನು ಅಂತಾ ಜಪ್ಪೆಂದರೂ ಬಾಯಿಬಿಡಲ್ಲ .
ಯಾಕೆಂದರೆ ಅದನ್ನು ಆತ ಕೂಡಾ ಬಾಷಣಗಳಲ್ಲಿ ಹೇಳುವುದೇ ಇಲ್ಲ. ದೇಣಿಗೆ ಎತ್ತಿ ಕರೆ ಕಲ್ಯಾಣಿ ಸ್ವಚ್ಚ ಮಾಡಲು ಕ್ಯೂನಲ್ಲಿ ನಿಂತಿದ್ದಾರೆ ಜನ.ಅವರಲ್ಲಿ ಮಾಜೀ IAS ಗಳೂ ಇಂಜಿನಿಯರ್ ಗಳೂ ಇದ್ದಾರೆ. ಈತನೇ ಯಾಕೆ ಬೇಕು? ಸುಳ್ಳು ಭಾಷಣಗಳ ಜೊತೆಗೆ ಆತನ ಸಮಾಜಸೇವೆಯ documentary ಬಿಡುಗಡೆಯಾದಾಗ ಮಾತ್ರ ತೂಕ ಸರಿಯಾಗುವುದು.
ಆತ ಅಂಜುಮಾನ್ ಇಸ್ಲಾಮಿಕ್ ಕಾಲೇಜಿನಲ್ಲಿ ಓದಿ ಹೊರಬಂದಾಗ ಕೈಯಲ್ಲಿ ಎಷ್ಟು ಕಾಸು ಇತ್ತು.
ನಿವೇದಿತಾ ಪ್ರತಿಷ್ಠಾನ ಮಾಡಿದ ಬಳಿಕ ಏನಾಯ್ತು?
ಜಾಗೋ ಭಾರತ್ , ಯುವಬ್ರಿಗೇಡ್ ಎಲ್ಲಾ ಮಾಡಿದ ಬಳಿಕ ಆತನ ಬಳಿ ಎಷ್ಟು ಅಸ್ತಿ ಇದೆ ಎಷ್ಟು ಕಾಸಿದೆ. ಅದನ್ನು ತಿಳಿದುಕೊಳ್ಳುವ ಅವಶ್ಯಕತೆ ಸಮಾಜಕ್ಕೆ ಇದೆ. ಹಾಗೆ ಮಾಡಿದಾಗ ಮಾತ್ರ ಆರುನೂರು ಢ್ರೋನ್ ಗಳ ಪ್ರವೀಣ ಒಂದೂ ಢ್ರೋನ್ ಪೂರ್ತಿ ಮಾಡಿಲ್ಲ ಎನ್ನುವಂತಹದೇ ಸತ್ಯ ಹೊರಗಡೆ ಬರುತ್ತದೆ.
ಭಾಷಣದಲ್ಲಿ ಸುಳ್ಳು ಮಾತಾಡಿರುವವರು ಜೊತೆಗೆ ಇರುವ ಹುಡುಗರ ಜೊತೆಗೂ ಮಾತಾಡಿರುತ್ತಾರೆ,ಮತ್ತು ಸಮಾಜವನ್ನೂ ವಂಚಿಸುತ್ತಾರೆ ಎನ್ನುವುದು ಯಾವ ಮೂಡನಿಗಾದರೂ ಗೊತ್ತಾಗುತ್ತದೆ.ಮೊದಲು ನಾವೂ ಬರಿಯಬೇಕು. ಸುಳ್ಳಿನ ತೋರಣವನ್ನು ಸತ್ಯದ ಬಾಕಿನಿಂದ ಇರಿದು ಬೀಳಿಸಲೇ ಬೇಕು. ದಾರಿ ತಪ್ಪಿದ ಹುಡುಗರಿಗೆ ಸತ್ಯ ಏನು ಅಂತಾ ತಿಳಿಸಲೇ ಬೇಕು.
ಮಟನ್ ಅಂಗಡಿ ನಡೆಸುವವರು ” ಪ್ರಾಣಿಹಿಂಸೆ ಮಾಡಬಾರದು ” ಅಂತಾ ಭಾಷಣ ಮಾಡಿದ ಹಾಗೆ
ಅಸಹಿಷ್ಣುತೆ ಬಿತ್ತುವವರು ” ಅಸಹಿಷ್ಣುಗಳಿಗೆ ಹಿತಬೋದೆ” ಹೇಳ್ತಾರಂತೆ. ಸುಳ್ಳು ಹೇಳುವವರು ಮಹಾತ್ಮಾ ಗಾಂಧಿ ಬಗ್ಗೆ, ಮನುವಾದಿಗಳು ಶ್ರೀ ನಾರಾಯಣ ಗುರುಗಳ ಬಗ್ಗೆ, ಜಾತಿವಾದಿಗಳು ಅಂಬೇಡ್ಕರ್ ಬಗ್ಗೆ ಬಾಷಣ ಮಾಡಿದರೆ ಸುಮ್ಮನಿರುವುದು ಯಾಕೆ ಅನ್ನುವುದೇ ನನ್ನ ಪ್ರಶ್ನೆ..
ಕೆಲವು ಪ್ರಮುಖ ವಿಚಾರಗಳೊಂದಿಗೆ ನಾಳಿನ ಪೋಸ್ಟ್ ನೊಂದಿಗೆ ಚರ್ಚೆ ಮಾಡೋಣ.
(ಮುಂದುವರಿಯುವುದು)
ಸುದ್ದಿದಿನ.ಕಾಂ|ವಾಟ್ಸಾಪ್|9980346243