ಭಾವ ಭೈರಾಗಿ
ಕನಸಿನ ಈಡಿಯಟ್‍ಗೊಂದು ಪ್ರೇಮ ಪತ್ರ
ಪ್ರೇಮಿಗಳ ದಿನಾಚರಣೆಗೆ ಬೆರಳೆಣಿಕೆಯಷ್ಟು ದಿನಗಳು ಉಳಿದಿವೆ ಅಷ್ಟೇ.. ಫೆಬ್ರವರಿ ಬಂತೆಂದರೆ ಸಾಕು ಪ್ರೀತಿ ಮಾಡೋ ಪ್ರತಿ ಒಬ್ಬ ಯುವಕ ಯುವತಿಯರಿಗಂತು ಹಬ್ಬವೋ ಹಬ್ಬ. ಇವಾಗ ಆಗಲೇ ಪ್ರೀತಿ ಅಲ್ಲಿ ಮುಳುಗಿದವರಿಗೆ ಅಂದಿನ ದಿನ ಎಲ್ಲಿಗೆ ಹೋಗಬೇಕು ಅಂತ ಪ್ಲ್ಯಾನ್ ಮಾಡ್ತಿದ್ರೆ, ಪ್ರೀತಿನಾ ಕಳೆದುಕೊಂಡವರು ದುಃಖದಲ್ಲಿರುತ್ತಾರೆ, ಅದರಲ್ಲಿ ಕೆಲವರು ಅವರನ್ನು ಸಮಾಧಾನ ಮಾಡುವಲ್ಲಿ ಹರಸಾಹಸ ಮಾಡುತ್ತಿರುತ್ತಾರೆ. ಇನ್ನೂ ಈ ಪ್ರೀತಿಯೆಂಬ ಸಮುದ್ರಕ್ಕೆ ಈಜದವರು ಬೆಟ್ಟದಷ್ಟು ಕನಸುಗಳನ್ನು ಹೊತ್ತು ನಿಮಗಾಗಿ ಕಾಯ್ತಿರುತ್ತಾರೆ. ಒಟ್ಟಾರೆಯಾಗಿ ಈ ಜಗತ್ತಲ್ಲಿ ಪ್ರೀತಿ ಮಾಡದ ಮನುಜನೇ ಇಲ್ಲ ಅಲ್ವಾ?
ನಾನು ಈ ಮೇಲೆ ಹೇಳಿದ ಕೆಟಗರಿಯಲ್ಲಿ ಕೋಟಿ ಕೋಟಿ ಕನಸುಗಳನ್ನೆತ್ತಿಕೊಂಡು ಮುದ್ದಾದ ಜೀವಕ್ಕಾಗಿ ಕಾಯುತ್ತಿರುವವಳು. ಈ ಯೌವನ ಎಂಬುದು ಬಂದಾಕ್ಷಣ ಪ್ರತೀ ಹುಡುಗಿಯು ಸಹ ತನ್ನ ಜೀವನದಲ್ಲಿ ಬರೋ ತನ್ನ ಹುಡುಗನ ಬಗೆಗೆ ಬೆಟ್ಟದಷ್ಟು ಆಸೆ, ಕನಸುಗಳನ್ನು ಹೊತ್ತು ಆತ ಹೇಗಿರಬೇಕು? ಅವನಲ್ಲಿ ಯಾವ ಗುಣಗಳಿರಬೇಕು? ಸದಾ ನನ್ನನ್ನ ಮುದ್ದಿಸುತ್ತಾನ? ನನ್ನ ತಂದೆ ತಾಯಿಯ ನೆನಪುಗಳನ್ನ ಮರೆಸಿ ಮಗುವಿನ ಹಾಗೆ ನೋಡ್ಕೊತ್ತಾನ? ಹೀಗೆ ಸಾವಿರಾರು ಪ್ರಶ್ನೆಗಳನ್ನ ಹಾಕೊಂಡು ತಾವು ನೋಡೋ ಮೂವೀಗಳಲ್ಲಿ ಬರೋ ಪಾತ್ರಧಾರಿಗಳಲ್ಲಿ ತನ್ನ ರಾಜಕುಮಾರನ ಬಗೆಗಿನ ಕನಸುಗಳನ್ನ ಕಾಣ್ತಿರುತ್ತಾರೆ. ಹೀಗೆಯೇ ನಾನು ಕೂಡ ನನ್ನವನ ಕುರಿತಾಗಿ ಸಾವಿರಾರು ಆಸೆಗಳನ್ನು ಹೊತ್ತು ಕಾಯುತ್ತಲ್ಲಿದ್ದೇನೆ. ಹೇ ಮುದ್ದು ನೀನೆಲ್ಲಿದ್ದಿಯೋ ನನಗಂತು ಗೊತ್ತಿಲ್ಲ…. ಆದ್ರೆ ನಿನ್ನ ನೆನಪಲ್ಲೇ ಹೀಗೊಂದು ಪತ್ರ ನಿನಗಾಗಿ ಕಣೋ….
ಕನಸಿನ ಈಡಿಯಟ್‍ಗೊಂದು ಪತ್ರ,
ಹೇ ಪ್ರಿಯಕರನೆ.. ನೀನು ನನ್ನ ಬೆನ್ನುಡಿಯೂ ಅಲ್ಲ, ನನ್ನ ಮುನ್ನುಡಿಯೂ ಅಲ್ಲ. ನನ್ನ ಕವನದ ಪ್ರತಿ ಸಾಲು ನಿನದೆ ನೆನಪು ಕಣೋ. ನೀನು ನೋಡೋದಕ್ಕೆ ಹೇಗಿದ್ದಿಯಾ? ನಿನ್ನ ಮುಂದೆ ನನ್ನನ್ನ ಜರೀತಾರ? ನನ್ನ ಹಾಗೆ ನೀನು ನನಗಾಗಿ ಕಾಯ್ತಿದ್ದಿಯಾ? ಹೀಗೆ ನಿನ್ನ ಬಗೆಗೆ ನಾನು ಯೋಚಿಸುವಾಗಲೆಲ್ಲಾ ನನಗೆ ನೆನಪಾಗುವುದು ಪ್ರೀತ್ಸೆ ಅಂತ ಪ್ರಾಣ ತಿನ್ನೋ ಪ್ರೇಮಿ ನೀನು ಯರು? ಅನ್ನೋ ಹಾಡೆ ಕಣೋ.
ಈ ಮೂವೀ ಸಾಂಗ್‍ಗಳು ಕುಡಾ ನಮ್ಮನ್ನ ಎಂತೆಂತಹ ಲೋಕಕ್ಕೊಮ್ಮೆ ಕರೆದೋಗಿ ಬಿಡುತ್ತದ್ದಲ್ಲ!ಲೋ ಅಪ್ಪು.. ನಿನಗಾಗಿ ನಾನು ಅದೆಷ್ಟು ಕಾಯ್ತಿದ್ದಿನಿ ಅಂದ್ರೆ, ಸುಮಾರು ಜನ ಬಂದು ಚಮಕ್ ಕೊಟ್ಟು ಚಲೋ ಅಂದ್ರು ಅಲ್ಲಾಡ್ದೆ ಕಲ್ಲುಗುಂಡ್ ಇದ್ದಂಗೆ ಇದ್ದ ಗುಂಡಿಗೆ ಕಣೋ ನನ್ದು. ಅಂತ ಗುಂಡ್ಗಿಗೆನು ಗೊತ್ತಾಗ್ದಂಗೆ ಸೋಲಿಸೋ ನೀನು ಎಲ್ಲೋ ಇದೀಯಾ? ಈ ಲವ್ ಅನ್ನೋ ಮಾಯಲೋಕದಲ್ಲಿ ಅದೆಷ್ಟೋ ಮಾಟಗಾರರು ಆತ್ಮಬಂಧನ ಮಾಡಿದ್ರೆ, ನೀನೊಂತರ ವಿಭಿನ್ನವಾಗಿ ನನ್ನ ಊeಚಿಡಿಣ ನೇ ದಿಗ್ಬಂಧನ ಮಾಡೋ ಚೆನ್ನಿಗರಾಯ ಯಾರೋ ನೀನು..?
ಕನಸುಗಳ ತುಂಬೆಲ್ಲಾ ಕಾಡೋ ಪೆದ್ದು ಜೀವ ನೀನು. ಕಮಲದ ಹಾಗಿರೋ ಕಣ್ಣು, ಮಿಂಚುಳ್ಳಿ ತರ ಇರುವ ನಿನ್ನ ರೆಪ್ಪೆ, ಮುಂಗುರುಳು ದುಂಬಿಯ ಹಾಗೇ, ಕೆನ್ನೆ ತಾವರೆಯ ಎಲೆಯ ಹಾಗೇ ಇದಿಯೋ ಇಲ್ವೋ ಗೊತ್ತಿಲ್ಲ. ಆದ್ರೆ ನಿನ್ನ ನೆನಪಾದಾಗಲೆಲ್ಲಾ ನನ್ನ ಬಳಿ ಇರುವ ಆ ಬೇಬಿ ಡಾಲ್‍ನೊಮ್ಮೆ ಮುದ್ದಿಸುವೇ, ಆ ಬೇಬಿ ಡಾಲ್ ತರ ಖಂಡಿತ ಇರ್ತಿಯಾ ಅಲ್ವಾ?
ಕಾಯುತ್ತಲಿರುವೆ ನಿನಗಾಗಿ.. ನೀ ಬರುವೆಯಾ ನನಗಾಗಿ…
ಇಂತಿ ನಿನ್ನ ಬರುವಿಕೆಯನ್ನ ಎದುರುನೋಡುತ್ತಿರುವ ನಿನ್ನ ಮನದರಸಿ…
–ಪ್ರೀತಿ.ಟಿ.ಎಸ್.
ಪತ್ರಿಕೋದ್ಯಮ ವಿಭಾಗ
ದಾವಣಗೆರೆ ವಿಶ್ವವಿದ್ಯಾಲಯ
ಮೊ.ನಂ: 8310521904
ಸುದ್ದಿದಿನ.ಕಾಂ|ವಾಟ್ಸಾಪ್|9980346243