ದಿನದ ಸುದ್ದಿ
ಅಕ್ರಮ ಮರಳು ಸಾಗಣೆ : ಟ್ರ್ಯಾಕ್ಟರ್ ವಶ
ಸುದ್ದಿದಿನ, ಮದ್ದೂರು : ಅಕ್ರಮವಾಗಿ ಮರಳು ಸಾಗಿಸುತ್ತಿದ್ದ ಎರಡು ಟ್ರಾಕ್ಟರ್ ಗಳನ್ನು ವಶ ಪಡಿಸಿಕೊಂಡಿದ್ದಾರೆ ಪೋಲೀಸರು.
ಮಂಡ್ಯ ಜಿಲ್ಲೆಯ ಮದ್ದೂರು ತಾಲ್ಲೂಕಿನ ಶಿಂಷಾ ನದಿ ಪಾತ್ರದಲ್ಲಿ 144 ಸೆಕ್ಷನ್ ಇದ್ರು ಕೂಡ ಮರಳು ಸಾಗಿಸುತ್ತಿದ್ದ ದುಷ್ಕರ್ಮಿಗಳನ್ನು
ನಿನ್ನೆ ತಡರಾತ್ರಿ ಮದ್ದೂರು ತಾಲ್ಲೂಕಿನ ವೈದ್ಯನಾಥಪುರ ಗ್ರಾಮದ ಬಳಿಲಿಂಗೇಗೌಡ ಹಾಗೂ ಕುಮಾರ್ ಎಂಬ ಆರೋಪಿಗಳನ್ನು ಬಂಧಿಸಲಾಗಿದೆ.ಮದ್ದೂರು ಠಾಣಾ ವ್ಯಾಪ್ತಿಯ ಪೋಲೀಸರು ಪ್ರಕರಣ ದಾಖಲಿಸಿಕೊಂಡುಬಂಧಿತರನ್ನು ನ್ಯಾಯಾಂಗ ವಶಕ್ಕೆ ನೀಡಲಾಗಿದೆ.