ದಿನದ ಸುದ್ದಿ
ಮನಿಷಾ ಅತ್ಯಚಾರ-ಕೊಲೆ : ಆದಿತ್ಯನಾಥನ ಸರ್ಕಾರದಲ್ಲಿ ಹೆಚ್ಚುತ್ತಿವೆ ಅಪರಾಧಗಳು
ಸುದ್ದಿದಿನ ಡೆಸ್ಕ್ : ಉತ್ತರ ಪ್ರದೇಶದ ಹತ್ರಾಸ್ ನಗರದಲ್ಲಿ 19 ವರ್ಷದ ಮನಿಷಾ ವಾಲ್ಮೀಕಿ ಎಂಬ ಯುವತಿಯ ಮೇಲೆ ನಾಲ್ಕು ಮಂದಿ ಸವರ್ಣೀಯ ಯುವಕರಿಂದ ಅತ್ಯಾಚಾರಕ್ಕೊಳಗಾಗಿದ್ದ ಆಕೆ ಸೆಪ್ಟೆಂಬರ್ 29 ರಂದು ಸಾವನ್ನಪ್ಪಿದ್ದಾರೆ.
ದಲಿತ ಸಮುದಾಯಕ್ಕೆ ಸೇರಿದ ಮನಿಷಾಳನ್ನು
ಸೆಪ್ಟೆಂಬರ್ 14 ರಂದು ಕ್ರೂರವಾಗಿ ಸವರ್ಣೀಯ ನಾಲ್ಕು ಯುವಕರು ಸಾಮೂಹಿಕ ಅತ್ಯಾಚಾರ ನಡೆಸಿ,ಅವಳ ನಾಲಿಗೆ ಕತ್ತರಿಸಿ, ಬೆನ್ನುಮೂಳೆಯ ಮುರಿದು ಪೈಶಾಚಿಕ ಕೃತ್ಯ ಎಸಗಿದ್ದರು.
ಅಲಿಘರ್ ನ ಆಸ್ಪತ್ರೆಯಲ್ಲಿ ಆರೋಗ್ಯವು ಸುಧಾರಿಸದಿದ್ದಾಗ ಬಾಲಕಿಯನ್ನು ನಿನ್ನೆ ಸಫ್ದರ್ಜಂಗ್ ಆಸ್ಪತ್ರೆಗೆ ಸ್ಥಳಾಂತರಿಸಲಾಯಿತು. ಆಕೆಯನ್ನು ಬದುಕಿಸಲು ಪ್ರಯತ್ನಿಸಲಾಯಿತು. ಆದರೆ ಆಕೆ ಸುಮಾರು 15 ದಿನಗಳ ಕಾಲ ಸಾವು-ಬದುಕಿನ ನಡುವೆ ಹೋರಾಡುತ್ತಿದ್ದಳು. ದೆಹಲಿಯ ಸುಫ್ದರ್ ಜಂಗ್ ಆಸ್ಪತ್ರೆಗೆ ಹೆಚ್ಚಿನ ಚಿಕಿತ್ಸೆಗೆ ಕರೆದೊಯ್ಯುವಾಗ ಆಕೆಯ ನಾಡಿ ಬಡಿತ 52 ಕ್ಕೆ ತಲುಪಿದೆ. ಕೊನೆಗೆ ಆಂಬ್ಯುಲೆನ್ಸ್‌ನಲ್ಲಿ ಆಕೆ ಮೃತಪಟ್ಟಿದ್ದಾಳೆ.
ಈ ಹಿಂದೆ ಬಾಲಕಿಯನ್ನು ಅಲಿಘರ್ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಯಿತು. ಆದರೆ ಅವಳ ಆರೋಗ್ಯ ಸ್ಥಿತಿಯಲ್ಲಿ ಸುಧಾರಣೆ ಕಾಣದ ಕಾರಣ ಮತ್ತು ಅಲ್ಲಿಯ ವೈದ್ಯರು “ಅವಳ ನಾಲಿಗೆ ಕತ್ತರಿಸಲ್ಪಟ್ಟಿತ್ತು ಮತ್ತು ಅವಳ ಬೆನ್ನುಹುರಿ ಮತ್ತು ಕುತ್ತಿಗೆ ಮುರಿದುಹೋಗಿತ್ತು ಮತ್ತು ಈ ತೀವ್ರ ಗಾಯಗಳಿಂದಾಗಿ ಮನಿಷಾ ಸೆಪ್ಟೆಂಬರ್ 29 ರಂದು ಬೆಳಗಿನ ಜಾವ ಮೃತಪಟ್ಟಳು ಎಂದಿದ್ದಾರೆ.
ಅಲಿಘರ್ ಆಸ್ಪತ್ರೆಯ ನರಶಸ್ತ್ರಚಿಕಿತ್ಸಾ ವಿಭಾಗದ ಮುಖ್ಯಸ್ಥ ಡಾ. ಫಕ್ರುಲ್ ಹೋಡಾ, ಆಕೆಯ ಸ್ಥಿತಿಯಲ್ಲಿ ಸ್ವಲ್ಪ ಸುಧಾರಣೆಯಾದಾಗ ಮಾತ್ರ ಬೆನ್ನುಹುರಿಯ ಮೇಲೆ ಶಸ್ತ್ರಚಿಕಿತ್ಸೆ ಮಾಡಲು ಸಾಧ್ಯವಾಗುತ್ತದೆ ಮತ್ತು ಯಾವುದೇ ಸುಧಾರಣೆಯವರೆಗೆ, ಶಸ್ತ್ರಚಿಕಿತ್ಸೆಯನ್ನು ಯಶಸ್ವಿಯಾಗಿ ಮಾಡಲು ಸಾಧ್ಯವಿಲ್ಲ ಎಂದು ಮಾಧ್ಯಮಗಳಿಗೆ ತಿಳಿಸಿದ್ದರು. ಆದರೆ ಅದು ಈಗ ಸಾಧ್ಯವಿಲ್ಲ.
ಮನಿಷಾಳ ಕುಟುಂಬದ ಹೇಳಿಕೆ ಪ್ರಕಾರ, ನಾಲ್ಕು ಜನರು ತಮ್ಮ ಗ್ರಾಮದ ಮೇಲ್ಜಾತಿಯವರಾಗಿದ್ದು ಇವರು ಈ ಮೊದಲು ಅನೇಕ ಹುಡುಗಿಯರು ಮತ್ತು ಮಹಿಳೆಯರಿಗೆ ಕಿರುಕುಳ ನೀಡುತ್ತಿದ್ದರು. ನಾಲ್ವರ ಮೇಲೆ ಆರೋಪಿಗಳ ದೂರು ನೀಡಿದ್ದರೂ ಕೂಡ ಅವರ ವಿರುದ್ಧ ದೂರು ದಾಖಲಾಗಿಲ್ಲ ಎಂದಿದ್ದಾರೆ.
ಘಟನೆ ವಿವರ
ಮೊನಿಷಾ ತನ್ನ ತಾಯಿಯೊಂದಿಗೆ ಹುಲ್ಲು ಕತ್ತರಿಸಲು ಹೊಲಕ್ಕೆ ಹೋಗುತ್ತಿದ್ದಾಗ ಈ ಘಟನೆ ನಡೆದಿದೆ. ತಾಯಿಯಿಂದ 100 ಮೀಟರ್ ದೂರದಲ್ಲಿದ್ದಾಗ ಆಕೆಯನ್ನು ನಾಲ್ವರ ಗ್ಯಾಂಗ್
ದಾಳಿನಡೆಸಿ ಅವಳನ್ನು ‘ದುಪಟ್ಟಾ’ ದಿಂದ ಎಳೆದುಕೊಂಡು ಹೋಗಿದ್ದಾರೆ. ಮೊನಿಷಾ ತಾಯಿ ಹೇಳುವಂತೆ “ನಾನು ಅವಳಿಂದ 100 ಮೀಟರ್ ದೂರ ಕುಳಿತಿದ್ದೆ. ಕಾರಣ ಅವಳು ಕಿರುಚಾಡುವ ಧ್ವನಿ ಕೇಳಿಸಲಿಲ್ಲ” ಎಂದಿದ್ದಾರೆ.
ಪ್ರಕರಣ ದಾಖಲು
ಸಂದೀಪ್, ರಾಮು, ಲವ-ಕುಶ, ಮತ್ತು ರವಿ ಎಂಬ ಆರೋಪಿಗಳನ್ನು ಈಗ ಬಂಧಿಸಿ ಅತ್ಯಾಚಾರ ಮತ್ತು ಕೊಲೆ ಪ್ರಕರಣ ದಾಖಲಿಸಲಾಗಿದೆ. ಎಸ್‌ಸಿ / ಎಸ್‌ಟಿ (ದೌರ್ಜನ್ಯ ತಡೆ) ಕಾಯ್ದೆಯಡಿ ಅವರ ವಿರುದ್ಧ ಕ್ರಮಕೈಗೊಳ್ಳಲಾಗುವುದು.ಈ ನಾಲ್ವರನ್ನು ಇಂಡಿಯನ್ ಸೆಕ್ಷನ್ ಅಡಿಯಲ್ಲಿ ಪರಿಗಣಿಸಬೇಕು ಮತ್ತು ಈ ಅಪರಾಧಕ್ಕೆ ಶಿಕ್ಷೆಯಾಗಬೇಕು ಎಂದು ಸಾಮಾಜಿಕ ಜಾಲತಾಣದಲ್ಲಿ ಅಭಿಪ್ರಾಯ ವ್ಯಕ್ತವಾಗಿದೆ.
ವೈದ್ಯರ ಹೇಳಿಕೆಯ ಪ್ರಕಾರ, ಬೆನ್ನುಹುರಿ ಶಾಶ್ವತವಾಗಿ ಹಾನಿಗೊಳಗಾಗಿತ್ತು ಮತ್ತು ನಿಷ್ಕರುಣೆಯಿಂದ ಎಳೆದಿದ್ದರಿಂದ ಅವಳ ಕುತ್ತಿಗೆಗೆ ಗಾಯಗಳಾಗಿದ್ದವು ಮತ್ತು ಅವರು ಅವಳ ನಾಲಿಗೆಯನ್ನು ಕತ್ತರಿಸಿದ್ದರು. ದೇಶದಲ್ಲಿ ಈ ತರದ ಘಟನೆಗಳು ಮರುಕಳಿಸಬಾರದೆಂದರೆ, ನಮ್ಮ ಘೋಷಣೆಗಳು ನಿಜವಾಗಿಯೂ ವ್ಯರ್ಥವಾಗುತ್ತವೆ. ಒಮ್ಮೆ ಇಂಥವರ ಮೇಲೆ ಕಠಿಣ ಕ್ರಮಗಳನ್ನು ತೆಗೆದುಕೊಂಡರೆ ಬಹುಶಃ ಅತ್ಯಾಚಾರ ಪ್ರಕರಣಗಳನ್ನು ನಿಲ್ಲಿಸಬಹುದು ಎಂದಿದ್ದಾರೆ.
ಅಪರಾಧ ಪ್ರಕರಣಗಳ ಸಂಖ್ಯೆ ಹೆಚ್ಚು
ಆದಿತ್ಯನಾಥನ ಸರ್ಕಾರವಿರುವ ಉತ್ತರ ಪ್ರದೇಶದಲ್ಲಿ ಹೆಚ್ಚಿನ ಸಂಖ್ಯೆಯ ಯುವತಿಯರು ಅತ್ಯಾಚಾರಕ್ಕೊಳಗಾಗುತ್ತಿದ್ದಾರೆ, ಅದು ದಲಿತ ಸಮುದಾಯದ ಯುವತಿಯರೇ ಆಗಿದ್ದಾರೆ. ಈ ವರದಿಯಲ್ಲಿ, ಯುಪಿ ಯ ಲಖಿಂಪುರ್ ಖೇರಿ, ಅಪ್ರಾಪ್ತ ಬಾಲಕಿಯರು ತಮ್ಮ ಗ್ರಾಮದ ಹೊರಗೆ ಹೋದ ನಂತರ ಅತ್ಯಾಚಾರಕ್ಕೊಳಗಾದ ಅಥವಾ ಸಾಮೂಹಿಕ ಅತ್ಯಾಚಾರಕ್ಕೊಳಗಾದ ಅನೇಕ ಘಟನೆಗಳು ನಡೆದಿರುವುದು ದಾಖಲಾಗಿದೆ.
ಉತ್ತರ ಪ್ರದೇಶದಲ್ಲಿ ಅಪರಾಧ ಸಂಖ್ಯೆ ಹೆಚ್ಚಾಗಿದ್ದು ರಾಷ್ಟ್ರೀಯ ಅಪರಾಧ ಬ್ಯೂರೋ ದತ್ತಾಂಶದ (ಎನ್‌ಸಿಆರ್‌ಬಿ) ವಾರ್ಷಿಕ ವರದಿಯು ಪ್ರತಿ ಎರಡು ಗಂಟೆಗಳಿಗೊಮ್ಮೆ ಯುಪಿ ಪೊಲೀಸರಲ್ಲಿ ಅತ್ಯಾಚಾರ ಪ್ರಕರಣ ದಾಖಲಾಗಿವೆ. ಪ್ರತಿ 90 ನಿಮಿಷಗಳಿಗೊಮ್ಮೆ ಮಗುವಿನ ವಿರುದ್ಧ ಅಪರಾಧವನ್ನು ರಾಜ್ಯದಲ್ಲಿ ಕಂಡುಬರುತ್ತಿದೆ. 2018 ರ ಲಭ್ಯವಿರುವ ಮಾಹಿತಿಯ ಪ್ರಕಾರ, ಹದಿನೆಂಟು ವರ್ಷದೊಳಗಿನ 144 ಬಾಲಕಿಯರು 2018 ರಲ್ಲಿ ಅತ್ಯಾಚಾರಕ್ಕೊಳಗಾಗಿದ್ದಾರೆ ಎಂದು ವರದಿಯಾಗಿದೆ.
ಉತ್ತರಪ್ರದೇಶದಲ್ಲಿ ಹೆಚ್ಚಿನ ಸಂಖ್ಯೆಯ ಪ್ರಕರಣಗಳು ವರದಿಯಾಗಿವೆ. ಇತ್ತೀಚಿನ ಕೆಲವು ವರದಿಗಳು ಇಲ್ಲಿವೆ.
https://www.shethepeople.tv/news/17-year-old-raped-in-lakhimpur-kheri-up-crime/?
13 year old Raped in UP. Her Tongue Cut, Eyes Hacked. Body Found in the Fields: Report
Hathras Rape Survivor is Another Nirbhaya. Why You Should Know Her
Rape is the more dangerous virus in our midst. It’s proven to be more pernicious than any other disease. We need swift justice to be administered. The maximum penalty…If her family needs financial support & if a local NGO crowdsources an appeal, I will pledge a contribution. https://t.co/hxDbiEV4PB
— anand mahindra (@anandmahindra) September 29, 2020
ಸುದ್ದಿದಿನ.ಕಾಂ| ವಾಟ್ಸಾಪ್| 9980346243