ಅಂತರಂಗ
‘ಭಾರತ’ ಎಂಬ ಹೆಸರು ಬಂದದ್ದು..!
ನಮ್ಮ ಸಂವಿಧಾನದ ಬಹುಮುಖ್ಯ ಲಕ್ಷಣವೆಂದರೆ ನಮ್ಮ ದೇಶಕ್ಕೆ ಪ್ರಪ್ರಥಮ ಬಾರಿಗೆ ‘ಭಾರತ’ ಎಂಬ ಒಂದು ಶಾಶ್ವತ ಹೆಸರು ನೀಡಿದ್ದು. ಅಂದರೆ ಅದುವರೆವಿಗೆ ಅಲ್ಲಲ್ಲಿ ಬಳಸುತ್ತಿದ್ದ ಇತರೆ ಹೆಸರುಗಳಾದ ಜಂಬೂದ್ವೀಪ, ಆರ್ಯವರ್ತ, ಹಿಂದೂಸ್ತಾನ… ಹೀಗೆ ಹೆಸರುಗಳನ್ನು ಕೈಬಿಡಲಾಯಿತು. ಇಂಡಿಯಾವನ್ನು ಭಾರತ ಎನ್ನಲಾಯಿತು.
‘ಭಾರತ’ ಎಂಬ ಈ ಪದ ಎಲ್ಲಾ ಧರ್ಮಗಳು, ನಂಬಿಕೆಗಳು ಸ್ವತಂತ್ರವಾಗಿ ಕಾರ್ಯನಿರ್ವಹಿಸುವ ಈ ದೇಶದ ಜಾತ್ಯಾತೀತ ಪರಂಪರೆಯನ್ನು ಪ್ರತಿನಿಧಿಸುತ್ತದೆ. ಅಲ್ಲದೇ ‘ಭಾರತ’ ಎಂಬ ಈ ಪದದ ಅರ್ಥ ಸತ್ಯದ ರಕ್ಷಕ ಅಥವಾ ಸಮರ್ಥಕ ಎಂಬುದಾಗಿದೆ. ಇದೇ ಈ ದೇಶದ ರಾಷ್ಟ್ರೀಯತೆಯಾಗಿದೆ. ಅಂದರೆ ನಮ್ಮ ರಾಷ್ಟ್ರೀಯತೆ ‘ಭಾರತೀಯ’ ಎಂಬುದಾಗಿದೆ ಮತ್ತು ಆ ರಾಷ್ಟ್ರೀಯತೆ ಬಹುಮುಖ್ಯವಾಗಿ ಸತ್ಯವನ್ನು ಎತ್ತಿ ಹಿಡಿಯುತ್ತದೆ, ಸಮರ್ಥಿಸುತ್ತದೆ.
ಅಂದರೆ ‘ಭಾರತ’ ಎಂಬ ಈ ಪದ ಈ ದೇಶದ ಎಲ್ಲಾ ಜನರಿಗೂ ಶಾಂತಿ ಮತ್ತು ಸಹಬಾಳ್ವೆಯ ಬದುಕಿನ ಭರವಸೆ ನೀಡುತ್ತದೆ. ಈ ನಿಟ್ಟಿನಲ್ಲಿ ಬುದ್ಧ ಬೋಧಿಸಿದ ಕರುಣೆ, ಮೈತ್ರಿ, ಸ್ವಾತಂತ್ರ, ಸಮಾನತೆ ಮತ್ತು ನ್ಯಾಯ ಈ ಜಗತ್ತಿನೆಲ್ಲಡೆ ಹರಡಿರುವುದು ಎಲ್ಲರಿಗೂ ತಿಳಿದಿದೆ. ಆದ್ದರಿಂದ ‘ಭಾರತ’ ಎಂಬ ಈ ಪದ ಬುದ್ಧ ಬೋಧಿಸಿದ ಪ್ರೀತಿ ಮತ್ತು ಮೈತ್ರಿಯನ್ನು ಈ ಜಗತ್ತಿನ ಎಲ್ಲರಿಗೂ ಮನವಿ ಮಾಡುತ್ತ ತನ್ನ ಈ ಅನನ್ಯ ಗುಣದಿಂದಾಗಿ ಇಡೀ ವಿಶ್ವಕ್ಕೆ ಗುರುವಿನ ಸ್ಥಾನದಲ್ಲಿ ನಿಲ್ಲುತ್ತದೆ.
–ರಘೋತ್ತಮ ಹೊ.ಬ
(ಆಧಾರ: My Experiences and Memories of Dr.Babasaheb Ambedkar by Shankarananda Shastri , Pp.42)
ಸುದ್ದಿದಿನ.ಕಾಂ|ವಾಟ್ಸಾಪ್|9980346243