ದಿನದ ಸುದ್ದಿ
ಆದಿಚುಂಚನಗಿರಿ ಶ್ರೀ ಸಾರಥ್ಯ | ಕೊಡಗಿಗೆ ನಮ್ಮ ಕೊಡುಗೆ ಪಾದಯಾತ್ರೆ ; ಎಚ್.ಡಿ.ಕೆ ಚಾಲನೆ
ಸುದ್ದಿದಿನ ಡೆಸ್ಕ್ : ಆದಿಚುಂಚನಗಿರಿ ಮಠದ ವತಿಯಿಂದ ಪಾದಯಾತ್ರೆಯನ್ನು ನಿರ್ಮಲಾನಂದನಾಥ ಶ್ರೀಗಳ ನೇತೃತ್ವದಲ್ಲಿ ನಡೆಯುತ್ತಿದೆ. ವಿಜಯನಗರದ ಮಠದಿಂದ ಬಿಜಯನಗರದ ಮಾರುತಿ ಮಂದಿರದವರೆಗೂ ಜಾಥಾ ಹೊರಟಿದ್ದು, ಕೆಲವೇ ಕ್ಷಣಗಳಲ್ಲಿ ಸಿಎಂ ಹೆಚ್‌ಡಿ ಕುಮಾರಸ್ವಾಮಿ ಅವರಿಂದ ಚಾಲನೆ ದೊರೆಯಲಿದೆ. ನಂಜಾವಧೂತಶ್ರೀ ಸೇರಿದಂತೆ ಹಲವು ಸ್ವಾಮೀಜಿಗಳು, ರಾಜಕೀಯ ಗಣ್ಯರು, ಕನ್ನಡಪರ ಸಂಘಟನೆಗಳ ಮುಖಂಡರು, ಸಾವಿರಾರು ವಿದ್ಯಾರ್ಥಿಗಳು ಪಾದಯಾತ್ರೆಯಲ್ಲಿ ಭಾಗಿಯಾಗಿದ್ದಾರೆ.
ಸುದ್ದಿದಿನ.ಕಾಂ|ವಾಟ್ಸಾಪ್|9986715401