ಭಾವ ಭೈರಾಗಿ
ಕವಿತೆ | ನೀನು
ಆಸೆಯ ತನಕ
ಮುಪ್ಪಿನ ಲ್ಲಿ ಮುಗಿಯದ ತೂಕ
ಕನಸಿನಲ್ಲಿ ಕರೆಯದೆ ಬರುವುದು
ಕಾಯುತ್ತಲಿ ಇರುವುದು
ಪ್ರೀತಿಯಲ್ಲಿ ಕೊಗುವುದು
ಬಡಿತದಲ್ಲಿ ತಿಳಿಸುವುದು
ಭಾವನೆಗಳ ಪಾತ್ರವನ್ನು
ಸಾಹಿತ್ಯದ ಸಂದೇಶದಲ್ಲಿ
ನಿನ್ನ ಹುಡುಕಿ ಕೊಂಡು ಬರುವ
ಸಂಗಾತಿ ಮನದ ಶಾಂತಿ
ಪದ ಒಂದು ಧಮನಿ
ಕವಿತೆ ಮೌನ ನೀನು
ಬರೆಯುವ ಹೊಸ ರೀತಿ ನೀನು
ಬಿಳಿಯ ಹಾಳೆಯಲ್ಲಿ
ಸುಂದರ ಲೇಖನಿ ಬರೆಯುವ
ಸಾಹಿತ್ಯದ ಹೂವು ಕೊಂಚ ನೀನು
ಬದುಕಿನಲ್ಲಿ ನಾವಿಕ
ಕೆಲಸದಲ್ಲಿ ಸೇವಕ
ಪ್ರೀತಿ ಪ್ರೇಮದ ಮಾಲಿಕ
ಒಗ್ಗೂಡಿಸಿ ಬಾಳುವ ಸೈನಿಕ
ಎಷ್ಟೇ ಕಷ್ಟ ಬಂದರು ಹೊಳಪು
ಬರುವ ನಕ್ಷತ್ರ ನೀನು
ಬೆಳಕಾಗಿ ಬರುವ
ಬಯಕೆಯ ತರುವ
ನಿನಗಾಗಿ ಕಾಯುವ
ಮನದಲ್ಲಿ ಕರಗುವ
ಬೆಳಕಿನ ಹುಳುನೀನು
ಪ್ರಜ್ವಲಿಸುವ ದೀಪ ವಾಗಿ ಬಾ
ಭೂಮಿ ತಾಯಿಯ ಮಣ್ಣಿನ
ಮಗನಾಗಿ ಹುಟ್ಟು
ಅಸಿದು ಬಂದವರಿಗೆ
ಅನ್ನ ಹಾಕುವ ವ್ಯಕ್ತಿ ಯಾಗು ನೀನು
ನಿನ್ನ ಗೆ ನೀನೇ ಸಾಟಿ
ಬದುಕಿನಲ್ಲಿ ಚಾಟಿ
ನಿನ್ನ ಮಾತು ಬಲುಗಾಟಿ
ಖಾಲಿಯಾಗುವುದು ಕವಿತೆ ಸಾಲಿನ ಪದಗಳು
ಕಾಯುವುದು ನಿನ್ನ ಕೊಂಚ ಉತ್ತರಕ್ಕೆ
ಬೇಗ ಶರಣಗಿ
ಬದುಕಿನ ದಿಕ್ಕನ್ನೇ ಬದಲಾಯಿಸು ನೀನು
ಬದಲಾಯಿಸು ನೀನು
–ಚೈತ್ರ ಕುಮಾರಿ ಕೆ. ಎಂ
ಗೊಲ್ಲರಹಳ್ಳಿ
ಸುದ್ದಿದಿನ.ಕಾಂ|ವಾಟ್ಸಾಪ್|9980346243